US, Russia Tensions: ರಷ್ಯಾದ ತೈಲ ಹಡಗು ವಶಕ್ಕೆ ಪಡೆದ ಅಮೆರಿಕಾದ ನೌಕಾಪಡೆ, ಇಲ್ಲಿದೆ ವೈರಲ್ ವಿಡಿಯೋ
ಅಮೆರಿಕಾ ಹಾಗೂ ವೆನೆಜುವೆಲಾ ನಡುವಿನ ಸಂಘರ್ಷ ಮುಕ್ತಾಯವಾಗುವ ಮುಂಚೆಯೇ ಅಮೆರಿಕಾ ಮತ್ತು ರಷ್ಯಾದ ನಡುವೆ ತೈಲ ವಿಚಾರವಾಗಿ ಭಾರೀ ಸಂಘರ್ಷ ಏರ್ಪಡುವ ಮುನ್ಸೂಚನೆ ಸಿಕ್ಕಿದೆ. ರಷ್ಯಾ ಮತ್ತು ಅಮೆರಿಕಾದ ನಡುವೆ ದಶಕಗಳಿಂದಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಇದೀಗ ರಷ್ಯಾದ ತೈಲ ಹಡಗನ್ನು ಅಟ್ಲಾಂಟಿಕ್‌ನಲ್ಲಿ ಅಮೆರಿಕಾದ ನೌಕಾಪಡೆ ವಶಪಡಿಸಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ರಷ್ಯಾ ಮತ್ತು ಉಕ್ರೇನ್‌ನ ನಡುವೆ ಯುದ್ಧ ಸಂಘರ್ಷಗಳು ನಿಲ್ಲಲಿವೆ ಎನ್ನುವ ನಿರೀಕ್ಷೆಯ ನಡುವೆಯೇ ರಷ್ಯಾ ಮತ್ತು ಅಮೆರಿಕಾದ ನಡುವೆ ಸಂಘರ್ಷ ಶುರುವಾಗುವ ಆತಂಕ ಶುರುವಾಗಿದೆ. ಆರ್ಥಿಕ ದಿಗ್ಬಂಧನವನ್ನು ಉಲ್ಲಂಘಿಸಿ ಯೂರೋಪಿಯನ್ ಜಲಪ್ರದೇಶವಾಗಿರುವ ವೆನೆಜುವೆಲಾದಿಂದ ತೈಲ ಸಾಗಿಸಲಾಗುತ್ತಿದ್ದ ರಷ್ಯಾದ (ರಷ್ಯಾ ಧ್ವಜ) ಹಡಗನ್ನು ಅಮೆರಿಕದ ನೌಕಾಪಡೆ ವಶಪಡಿಸಿಕೊಂಡಿದೆ. ಇದು ವಿಶ್ವದಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಕೋವಿಡ್, ವಿವಿಧ ರಾಷ್ಟ್ರಗಳ ನಡುವೆ ನಡೆದ ಯುದ್ಧ ಹಾಗೂ ಭೌಗೋಳಿಕ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಗೆ ಜಗತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಈ ರೀತಿ ಇರುವಾಗ ಇದೀಗ ರಷ್ಯಾ ಮತ್ತು ಅಮೆರಿಕಾದ ನಡುವೆ ಸಂಘರ್ಷ ಏರ್ಪಟ್ಟರೆ ಇದು ವಿಶ್ವಕ್ಕೇ ಮತ್ತೊಂದು ಸಂಕಷ್ಟವಾಗುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಅಮೆರಿಕಾ ಗ್ರೀನ್‍ಲ್ಯಾಂಡ್ ಮೇಲೆ ಪ್ರಭುತ್ವ ಸಾಧಿಸುವುದಕ್ಕೆ ಮುಂದಾಗಿದೆ. ಈಚೆಗೆ ಬಹಿರಂಗವಾಗಿಯೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಚಾರವನ್ನು ಹೇಳಿದ್ದರು. ಯೂರೋಪಿಯನ್ ಒಕ್ಕೂಟದ ಪ್ರಬಲ ವಿರೋಧದ ನಡುವೆಯೂ ಬಲಪ್ರಯೋಗ ಮೂಲಕ ಇಲ್ಲವೇ ಖರೀದಿ ಮೂಲಕ ಗ್ರೀನ್‍ಲ್ಯಾಂಡ್ ಸ್ವಾಧೀನಕ್ಕೆ ಮಾಡಿಕೊಳ್ಳುವುದಾಗಿ ಅಮೆರಿಕಾ ಹೇಳಿದೆ. ಈ ಭಾಗದಲ್ಲಿ ತೈಲದ ಹಡಗನ್ನು ವಶಪಡಿಸಿಕೊಂಡಿರುವುದು ಹೊಸ ತಲ್ಲಣಕ್ಕೆ ಕಾರಣವಾಗಿದೆ.
Specialized capabilities. Global impact. An unstoppable joint force.
— U.S. Coast Guard (@USCG) January 7, 2026
Alongside @DeptofWar, @USCG conducted a boarding and seizure of the Motor Tanker Bella I this morning in the North Atlantic. Following a sustained shadowing effort across the Atlantic by Coast Guard Cutter… pic.twitter.com/xEmFkh4xLO
ಕಾನೂನು ಬಾಹಿರ ಕ್ರಮ ಎಂದ ರಷ್ಯಾ
ಇನ್ನು ರಷ್ಯಾದ ಧ್ವಜವಿದ್ದ ತೈಲ ಟ್ಯಾಂಕರ್‌ಗಳನ್ನು ಅಮೆರಿಕದ ನೌಕಾಪಡೆಗಳು ವಶಪಡಿಸಿಕೊಂಡಿರುವುದು ಅಮೆರಿಕಾ ಹಾಗೂ ರಷ್ಯಾದ ನಡುವೆ ಹೊಸ ರಾಜತಾಂತ್ರಿಕ ಘರ್ಷಣೆಗೆ ಕಾರಣವಾಗಿದೆ. ರಷ್ಯಾ ಈ ಕ್ರಮವನ್ನು ಕಾನೂನುಬಾಹಿರ ಎಂದು ಕರೆದಿದೆ. ಆದರೆ ಅಮೆರಿಕಾ ವೆನೆಜುವೆಲಾಗೆ ಸಂಬಂಧಿಸಿದ ನಿರ್ಬಂಧಗಳನ್ನು ಜಾರಿಗೊಳಿಸುತ್ತಿರುವುದಾಗಿ ಹೇಳಿಕೊಂಡಿದೆ.
ಅಮೆರಿಕಾ ಕರಾವಳಿ ರಕ್ಷಣಾ ಪಡೆಯಿಂದ ಟ್ವೀಟ್
ಇನ್ನು ರಷ್ಯಾದ ಹಡಗಿನ ಕಾರ್ಯಾಚರಣೆಯ ಬಗ್ಗೆ ಅಮೆರಿಕದ ಕರಾವಳಿ ರಕ್ಷಣಾ ಪಡೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ವಿಶೇಷ ಸಾಮರ್ಥ್ಯ, ಜಾಗತಿಕ ಪ್ರಭಾವ ಹಾಗೂ ತಡೆಯಲಾಗದ ಜಂಟಿ ಪಡೆ ಎನ್ನುವ ಸಾಲುಗಳೊಂದಿಗೆ ಅಮೆರಿಕಾ ಟ್ವೀಟ್ ಮಾಡಿದೆ. ಇಂದು ಬೆಳಿಗ್ಗೆ ಉತ್ತರ ಅಟ್ಲಾಂಟಿಕ್‌ನಲ್ಲಿ ಮೋಟಾರ್ ಟ್ಯಾಂಕರ್ ಬೆಲ್ಲಾ I ವಶಪಡಿಸಿಕೊಂಡಿದ್ದೇವೆ.
ಕೋಸ್ಟ್ ಗಾರ್ಡ್ ಕಟ್ಟರ್ ಮನ್ರೋ ಅಟ್ಲಾಂಟಿಕ್‌ನಾದ್ಯಂತ ನಿರಂತರ ಕಣ್ಗಾವಲು ಇರಿಸಿದೆ. ಯುದ್ಧತಂತ್ರದ ಕೋಸ್ಟ್ ಗಾರ್ಡ್ ತಂಡಗಳು ಹಾಗೂ ಕಡಲ ಕಾನೂನು ಜಾರಿ ಅಧಿಕಾರಿಗಳನ್ನು ಬಳಸಿಕೊಂಡು ಕಾರ್ಯಗತಗೊಳಿಸಿದ ಜಂಟಿ ಕಾರ್ಯಾಚರಣೆಯ ಮೂಲಕ ಬೆಲ್ಲಾ I ಅನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ಮತ್ತು ಅಮೆರಿಕವನ್ನು ರಕ್ಷಿಸಲು ಹೆಮ್ಮೆಪಡುತ್ತದೆ ಎಂದು ಈ ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕಾ - ರಷ್ಯಾ ಸಂಘರ್ಷ
1. ಉತ್ತರ ಅಟ್ಲಾಂಟಿಕ್‌ನಲ್ಲಿ ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ ವಶಕ್ಕೆ ಪಡೆದ ಅಮೆರಿಕಾ ನೌಕಾಪಡೆ.
2. ಅಮೆರಿಕಾದ ಕ್ರಮಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿ ರಷ್ಯಾ. ಡೊನಾಲ್ಡ್ ಟ್ರಂಪ್ ವಿಶ್ವಾದ್ಯಂತ ತೈಲ ನಿರ್ಬಂಧಗಳನ್ನು ಜಾರಿಗೊಳಿಸಲು ಆಕ್ರಮಣಕಾರಿ ಒತ್ತಡಕ್ಕೆ ವಿವಿಧ ರಾಷ್ಟ್ರಗಳಿಂದಲೂ ಆಕ್ಷೇಪ.
3. ಈ ತೈಲ ಟ್ಯಾಂಕರ್ ವೆನೆಜುವೆಲಾಗೆ ತೈಲ ಸಾಗಿಸುವ ನಿರ್ಬಂಧಗಳನ್ನು ಉಲ್ಲಂಘಿಸುವ ಜಾಲದ ಭಾಗವಾಗಿತ್ತು. ಅಲ್ಲದೇ 2024ರಲ್ಲಿ ವಾಷಿಂಗ್ಟನ್ ಇದನ್ನು ಕಪ್ಪುಪಟ್ಟಿಗೆ ಸೇರಿಸಿದೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.
4. ಶಾಂತಿಯುತವಾಗಿ ತೈಲದ ಹಡಗನ್ನು ಸಾಗಿಸಲಾಗುತ್ತಿತ್ತು. ಅಮೆರಿಕದ ವ್ಯಾಪ್ತಿಯಿಂದ ದೂರವಿದ್ದರೂ ಯುಎಸ್ ಮತ್ತು ನ್ಯಾಟೋ ಮಿಲಿಟರಿ ಪಡೆಗಳು ಹೆಚ್ಚಿನ ಹಾಗೂ ಅನವಶ್ಯಕವಾದ ಗಮನ ಕೊಟ್ಟಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ.
5. ರಷ್ಯಾ - ಅಮೆರಿಕಾದ ನಡುವೆ ಸಂಘರ್ಷ ಹೆಚ್ಚಾಗುವ ಸಾಧ್ಯತೆ. ರಷ್ಯಾ - ಉಕ್ರೇನ್ ಸಂಘರ್ಷ ನಿಲ್ಲುವ ಕನಸಿಗೆ ತಣ್ಣೀರು!
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications