Gaza: ಗಾಜಾ ಬಗ್ಗೆ ಮತ್ತೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಗಾಜಾ ಪಟ್ಟಿ ಮೇಲೆ ಹಿಡಿತ ಸಾಧಿಸುವ ಬಗ್ಗೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಡೀ ಜಗತ್ತಿನ ಗಮನ ಸೆಳೆದಿದ್ದರು. ಹಮಾಸ್ & ಇಸ್ರೇಲ್ ನಡುವೆ ನಡೆಯುತ್ತಿದ್ದ ಘೋರ ಕಾಳಗ ನಿಂತ ನಂತರ ಈ ರೀತಿ ಹೇಳಿಕೆ ನೀಡಿದ್ದರು ಡೊನಾಲ್ಡ್ ಟ್ರಂಪ್. ಆದರೆ ಈ ರೀತಿ ಅಮೆರಿಕ ಅಧ್ಯಕ್ಷರ ವಿವಾದಾತ್ಮಕ ಹೇಳಿಕೆ ಕಂಡು ಸ್ನೇಹಿತ ರಾಷ್ಟ್ರಗಳಲ್ಲೇ ಅಪಸ್ವರವೂ ಮೂಡಿತ್ತು. ಅದೆಲ್ಲಾ ಮುಗಿಯುತ್ತಿದೆ ಎನ್ನುವಾಗಲೇ ಗಾಜಾ ಪಟ್ಟಿ ಬಗ್ಗೆ ಡೊನಾಲ್ಡ್ ಟ್ರಂಪ್ ಮತ್ತೆ ಮಾತನಾಡಿದ್ದಾರೆ.
ಅಮೆರಿಕ ಎಂಬ ದೇಶಕ್ಕೆ ಇಸ್ರೇಲ್ ಬೇಕೆ ಬೇಕು, ಹಾಗೇ ಇಸ್ರೇಲ್ ದೇಶಕ್ಕೆ ಇರುವ ಏಕೈಕ & ಅತಿದೊಡ್ಡ ಬೆಂಬಲಿಗ ದೇಶ ಎಂದರೆ ಅದು ಅಮೆರಿಕ. ಹೀಗಾಗಿ ಇಬ್ಬರ ನಡುವೆ ಅತ್ಯುತ್ತಮ ಬಾಂಧವ್ಯ ಈ ಮೊದಲಿನಿಂದ ಕೂಡ ಇದೆ. ಹೀಗೆ ಅಮೆರಿಕ & ಇಸ್ರೇಲ್ ಸ್ನೇಹದ ಭಾಗವಾಗಿ ಗಾಜಾ ಪಟ್ಟಿ ಯುದ್ಧದಲ್ಲೂ ದೊಡ್ಡಣ್ಣನ ಬೆಂಬಲ ಇಸ್ರೇಲ್‌ಗೆ ಸಿಕ್ಕಿತ್ತು. ಇನ್ನು ಡೊನಾಲ್ಡ್ ಟ್ರಂಪ್ ಅವರ ಎಂಟ್ರಿ ನಂತರ ಇಸ್ರೇಲ್‌ಗೆ ಇನ್ನಷ್ಟು ಬಲ ಬಂದಿದ್ದು, ಇದೀಗ ಗಾಜಾ ಬಗ್ಗೆ ಮಾತನಾಡಿರುವ ಟ್ರಂಪ್ ಏನು ಹೇಳಿದ್ದಾರೆ ಗೊತ್ತಾ?

ಇಸ್ರೇಲ್ ಬೆಂಬಲಕ್ಕೆ ನಿಂತ ಟ್ರಂಪ್
ಹೌದು, ಇದೀಗ ಇಸ್ರೇಲ್ ಮೂಲದ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಖುಷ್ ಆಗಿದ್ದಾರೆ. ಅಲ್ಲದೆ ಇಸ್ರೇಲ್ ಬೆಂಬಲಕ್ಕೆ ಅಮೆರಿಕ ಸದಾ ಸಿದ್ಧ ಎಂಬ ಸಂದೇಶ ಕೂಡ ಸಾರಿದ್ದಾರೆ ಡೊನಾಲ್ಡ್ ಟ್ರಂಪ್. ಈ ಮೂಲಕ ಮತ್ತೆ ಅಮೆರಿಕ & ಇಸ್ರೇಲ್ ನಡುವಿನ ಬಾಂಧವ್ಯ ಗಟ್ಟಿಯಾಗಿದೆ.
ಹಾಗೇ ಗಾಜಾ ಪಟ್ಟಿಯ ಮೇಲೆ ಹಿಡಿತ ಸಾಧಿಸುವ ಬಗ್ಗೆ ಈ ಹಿಂದೆ ಹೇಳಿಕೆ ನೀಡಿದ್ದ ಟ್ರಂಪ್ ಅವರು, ಇದೀಗ ಬೇರೆಯದ್ದೇ ರೀತಿ ತಂತ್ರ ಮಾಡಿದ್ದಾರಾ? ಎಂಬ ಅನುಮಾನ ಮೂಡಿದೆ. ಭವಿಷ್ಯದಲ್ಲಿ ಗಾಜಾ ಕುರಿತು ಇಸ್ರೇಲ್ ಯಾವ ರೀತಿಯ ನಿರ್ಧಾರ ತೆಗೆದುಕೊಂಡರೂ ನಾವು ಅದನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ ಟ್ರಂಪ್.












Click it and Unblock the Notifications