ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾನೇ ರೂಪಿಸಿದ ಕಾನೂನನ್ನು 'ಪಾಲಿಸುವುದಿಲ್ಲ' ಎಂದ ಡೊನಾಲ್ಡ್ ಟ್ರಂಪ್

|
Google Oneindia Kannada News

ಕೊರೊನಾ ವೈರಸ್ 'ಪರ್ಲ್ ಹಾರ್ಬರ್' ಗಿಂತಲೂ ಭೀಕರ ಎಂದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಅಧ್ಯಕ್ಷೀಯ ಅಧಿಕೃತ ಕಚೇರಿ, ಶ್ವೇತಭವನ ಹೊರಡಿಸಿರುವ ಕಾನೂನನ್ನು ಪಾಲಿಸುವುದಕ್ಕೆ ಹಿಂದೇಟು ಹಾಕಿದ್ದಾರೆ.

Recommended Video

ಅಪ್ಪನಿಗಿಂತ ನಾನೇನ್ ಕಮ್ಮಿನಾ ಅನ್ನೋ ರೀತಿ ಕೆಲಸ ಮಾಡ್ತಿದ್ದಾರೆ ಶಾಸಕ ಜಮೀರ್ ಖಾನ್ ಪುತ್ರ | Oneindia Kannada

ವಿಶ್ವದಲ್ಲೇ ಅತಿಹೆಚ್ಚು ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದು ಅಮೆರಿಕಾದಲ್ಲಿ. ಇದುವರೆಗೆ 73 ಸಾವಿರ ಈ ಮಹಾಮಾರಿಗೆ ಬಲಿಯಾಗಿದ್ದರೆ, ಒಟ್ಟು ಸೋಂಕಿತರ ಸಂಖ್ಯೆ 12,44,538ಕ್ಕೆ ಏರಿದೆ.

'ಪರ್ಲ್ ಹಾರ್ಬರ್‌'ಗಿಂತಲೂ ಭೀಕರವಾಗಿದೆ ಕೊರೊನಾ ದಾಳಿ: ಟ್ರಂಪ್ 'ಪರ್ಲ್ ಹಾರ್ಬರ್‌'ಗಿಂತಲೂ ಭೀಕರವಾಗಿದೆ ಕೊರೊನಾ ದಾಳಿ: ಟ್ರಂಪ್

ಕೆಲವು ದಿನಗಳ ಹಿಂದೆ ಅಮೆರಿಕಾದಲ್ಲಿ ಕೊರೊನಾಗೆ ಒಂದು ಲಕ್ಷ ಜನ ಸಾಯಬಹುದು ಎಂದು ಹೇಳಿದ್ದ ಟ್ರಂಪ್, ಈಗ, ಆ ಸಂಖ್ಯೆ ಒಂದೂವರೆ ಲಕ್ಷ ಆಗಬಹುದೆಂದು ಹೇಳಿದ್ದಾರೆ.

ಕೊರೊನಾದಿಂದ ದೂರ ಉಳಿಯಲು ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಶ್ವೇತಭವನ ಆದೇಶ ಹೊರಡಿಸಿತ್ತು. ಅದರಲ್ಲಿ, ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದೂ ಕೂಡಾ ಇತ್ತು.

ಅಮೆರಿಕದಲ್ಲಿ ಕೊರೊನಾಗೆ 1 ಲಕ್ಷ ಮಂದಿ ಬಲಿಯಾಗಲಿದ್ದಾರೆ: ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಕೊರೊನಾಗೆ 1 ಲಕ್ಷ ಮಂದಿ ಬಲಿಯಾಗಲಿದ್ದಾರೆ: ಡೊನಾಲ್ಡ್ ಟ್ರಂಪ್

ಖಿನ್ನತೆಯಿಂದ ಸಾವನ್ನಪ್ಪಲಿದ್ದಾರೆ

ಖಿನ್ನತೆಯಿಂದ ಸಾವನ್ನಪ್ಪಲಿದ್ದಾರೆ

"ಕೊರೊನಾದಿಂದ ಎಷ್ಟು ಜನ ಸಾವನ್ನಪ್ಪುತ್ತಾರೋ, ಅದಕ್ಕಿಂತ ಹೆಚ್ಚಾಗಿ ಲಾಕ್ ಡೌನ್ ಸಡಿಲಿಸದಿದ್ದರೆ, ಖಿನ್ನತೆಯಿಂದ ಜನ ಸಾವನ್ನಪ್ಪಲಿದ್ದಾರೆ. ಇದರ ಜೊತೆಗೆ, ಆರ್ಥಿಕತೆಯನ್ನು ಸರಿದಾರಿಗೆ ತರಬೇಕಿದೆ. ಹಾಗಾಗಿ, ಲಾಕ್ ಡೌನ್ ಸಡಿಲಗೊಳಿಸಬೇಕಿದೆ" ಎಂದು ಟ್ರಂಪ್ , ಅರಿಜೋನಾ ನಗರದಲ್ಲಿ ಹೇಳಿದ್ದಾರೆ.

ಕೊರೊನಾ ದಾಳಿ

ಕೊರೊನಾ ದಾಳಿ

ಕೊರೊನಾ ದಾಳಿಯ ನಂತರ ಅಮೆರಿಕಾದ ಅಧ್ಯಕ್ಷರ ಮೊದಲ ದೇಶೀಯ ಪ್ರಯಾಣದ ಭಾಗವಾಗಿ ಅರಿಜೋನಾದಲ್ಲಿರುವ ಮಾಸ್ಕ್ ತಯಾರಿಸುವ ಘಟಕಕ್ಕೆ ಟ್ರಂಪ್ ಭೇಟಿ ನೀಡಿದ್ದರು. ಆ ವೇಳೆ, ಟ್ರಂಪ್ ಮಾಸ್ಕ್ ಧರಿಸಿರಲಿಲ್ಲ. ಹನಿವೆಲ್ ಮಾಸ್ಕ್ ಘಟಕದ ಮುಖ್ಯಸ್ಥರೂ ಮಾಸ್ಕ್ ಧರಿಸಿರಲಿಲ್ಲ.

ನಾನು ಮಾಸ್ಕ್ ಧರಿಸುವುದಿಲ್ಲ, ಟ್ರಂಪ್

ನಾನು ಮಾಸ್ಕ್ ಧರಿಸುವುದಿಲ್ಲ, ಟ್ರಂಪ್

ಮಾಸ್ಕ್ ಯಾಕೆ ಧರಿಸಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ ನೇರವಾಗಿ, "ನಾನು ಮಾಸ್ಕ್ ಧರಿಸುವುದಿಲ್ಲ" ಎಂದು ಟ್ರಂಪ್ ಹೇಳಿದ್ದಾರೆ. ಇದು ಅಮೆರಿಕಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೊರೊನಾದಿಂದ ದೂರವಿರಲು ಶ್ವೇತಭವನ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳುತ್ತದೆ. ಕಾನೂನು ರೂಪಿಸುವ ಅಧ್ಯಕ್ಷರೇ ಕಾನೂನು ಪಾಲಿಸುವುದಿಲ್ಲ ಎಂದು ಹೇಳುವುದು ಎಂತಹ ವಿಪರ್ಯಾಸ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.

ಫೆಡರಲ್ ಏಜೆನ್ಸಿ

ಫೆಡರಲ್ ಏಜೆನ್ಸಿ

ಇಷ್ಟೇ ಅಲ್ಲದೇ, ಕೊರೊನಾ ನಿಗ್ರಹಕ್ಕೆ ಸ್ಥಾಪಿಸಲಾದ ಟಾಸ್ಕ್ ಫೋರ್ಸ್ ಅನ್ನು ವಿಸರ್ಜಿಸಲು ಟ್ರಂಪ್ ನಿರ್ಧರಿಸಿರುವುದು, ಇನ್ನಷ್ಟು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ಟಾಸ್ಕ್ ಫೋರ್ಸ್ ಮಾಡುತ್ತಿರುವ ಕೆಲಸಗಳನ್ನು ಫೆಡರಲ್ ಏಜೆನ್ಸಿಗಳಿಗೆ ವಹಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.

English summary
Donald Trump Says US Reopening Will Cost More Lives, Refuses To Wear Mask ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X