Joe Biden: ಜೋ ಬೈಡನ್‌ಗೆ ಕೋವಿಡ್-19; ಡೆಮಾಕ್ರಟಿಕ್ ಪಕ್ಷಕ್ಕೆ ಆತಂಕ
ಭಾರತದಲ್ಲಿ ಚುನಾವಣೆಗಳು ಮುಗಿದಿವೆ. ಎನ್‌ಡಿಎ ಮೈತ್ರಿ ಕೂಟ ಸರ್ಕಾರ ರಚನೆ ಆಗಿದೆ. ಈಗ ಎಲ್ಲರ ಚಿತ್ತ ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕ ಮೇಲೆ ನೆಟ್ಟಿದೆ. ಅಮೆರಿಕದಲ್ಲಿ ಈಗ ಚುನಾವಣೆ ಬಿಸಿ ಆರಂಭವಾಗಿದೆ. ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಸಂಬಂಧಿಸಿದ ಸುದ್ದಿ ಒಂದು ಹೊರ ಬಿದಿದ್ದು, ಚುನಾವಣೆಗಳ ಮುನ್ನವೇ ಮತ್ತೊಂದು ಸಮಸ್ಯೆಗೆ ಬೈಡಾನ ಸಿಲುಕಿಕೊಂಡಿದ್ದಾರೆ. ಬೈಡನ್ ಕೊರೊನಾ ಸೊಂಕಿಗೆ ತುತ್ತಾಗಿದ್ದಾರೆ.
ಲಾಸ್ ವೇಗಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅಧ್ಯಕ್ಷ ಜೋ ಬಿಡನ್ ಅವರುರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ ಎಂದು ಶ್ವೇತಭವನ ತಿಳಿಸಿದೆ. ಮಾಹಿತಿ ಪ್ರಕಾರ ಅವರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಬಿಡೆನ್‌ಗೆ ಕೋವಿಡ್‌ನ ಲಕ್ಷಣ ಕಾಣಿಸಿಕೊಂಡಿವೆ.

ಬೈಡನ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೂ ಸಹ ಅವರು ತಮ್ಮ ಕೆಲಸಗಳಿಗೆ ಇದರ ಪರಿಣಾಮ ಬೀಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಅಧ್ಯಕ್ಷರ ಆರೋಗ್ಯದ ಕುರಿತಾದ ಅಪ್‌ಡೇಟ್‌ಗಳನ್ನು ಶ್ವೇತ ಭವನ ನೀಡುತ್ತಲೇ ಇದೆ.
ಚುರುಕಿನ ಪ್ರಚಾರ
ಈಗಾಗಲೇ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದೆ. ಜೋ ಬೈಡನ್ ಮತ್ತೊಮ್ಮೆ ಕಣಕ್ಕೆ ಇಳಿಯಲಿದ್ದು, ಈ ವೇಳೆ ಅವರ ವಯಸ್ಸು ಭಾರೀ ಚರ್ಚೆಗೆ ಆಹಾರವಾಗಿದೆ. ಈ ವರೆಗೆ ನಡೆದ ಎಲ್ಲ ಸಮೀಕ್ಷೆಗಳಲ್ಲಿ ಬೈಡಾನ್ ಅವರಿಗೆ ಹಿನ್ನಡೆ ಎನ್ನುವುದು ಕಾಣಿಸುತ್ತಿದೆ. ಇವರ ಪ್ರತಿ ಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸ ಬಹುದು ಎಂದು ಲೆಕ್ಕಾಚಾರ ಶುರುವಾಗಿದೆ.
ಯುಎಸ್ ಅಧ್ಯಕ್ಷ ಜೋ ಬೈಡೆನ್ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಭಾಷಣ ಮಾಡುತ್ತಿದ್ದಾರೆ. "ಇದನ್ನು ಮಾಡುವುದರಿಂದ ನಾವು ಸತ್ಯವನ್ನು ಮಾತನಾಡುವುದನ್ನು ನಿಲ್ಲಿಸುತ್ತೇವೆ ಎಂದು ಅರ್ಥವಲ್ಲ ಎಂದಿದ್ದಾರೆ.

ಇತ್ತೀಚಿಗೆ ವರದಿಯಾದ ಬೈಡನ್ ಅವರ ಕಳಪೆ ಆರೋಗ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಎದ್ದಿವೆ. ವರದಿಯ ಪ್ರಕಾರ ಬೈಡೆನ್ ಅವರು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಶ್ವೇತಭವನದ ಉದ್ಯೋಗಿಗಳನ್ನು ಉಲ್ಲೇಖಿಸಿ ಪ್ರಕಟವಾದ ವರದಿಯ ಪ್ರಕಾರ, ಬಿಡೆನ್ ದಿನಕ್ಕೆ 6 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ತಿಳಿಸಿದೆ.
ಕಮಲಾ ಹ್ಯಾರಿಸ್ ಕಣಕ್ಕೆ?
ಜೂನ್ 28 ರಂದು ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚರ್ಚೆಯ ನಂತರ, ಬೈಡೆನ್ ಅವರ ಡೆಮಾಕ್ರಟಿಕ್ ಪಕ್ಷದ ನಾಯಕರು ಅಧ್ಯಕ್ಷ ಹುದ್ದೆಗೆ ತಮ್ಮ ಉಮೇದುವಾರಿಕೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಟೆಕ್ಸಾಸ್ ಸಂಸದ ಲಾಯ್ಡ್ ಡಾಗೆಟ್ ಅವರು ಸಾರ್ವಜನಿಕವಾಗಿ ಇದನ್ನು ಒತ್ತಾಯಿಸಿದ ಡೆಮಾಕ್ರಟಿಕ್ ಪಕ್ಷದ ಮೊದಲ ನಾಯಕರಾಗಿದ್ದಾರೆ. ಮತ್ತೊಂದೆಡೆ, ಅಧ್ಯಕ್ಷ ಜೋ ಬೈಡನ್ ಅವರಿಗೆ ಬುದ್ಧಿಮಾಂದ್ಯತೆ ಇದೆ ಎಂದು ಅಮೆರಿಕದ ಪತ್ರಕರ್ತ ಮತ್ತು ಟ್ರಂಪ್ ಬೆಂಬಲಿಗ ಟಕರ್ ಕಾರ್ಲ್ಸನ್ ಹೇಳಿದ್ದಾರೆ. ಡೆಮೋಕ್ರಾಟ್‌ಗಳು ಶೀಘ್ರದಲ್ಲೇ ಬೈಡೆನ್ ಬದಲಿಗೆ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಮಾಡಬಹುದು.












Click it and Unblock the Notifications