ಇರಾನ್ ವಿರುದ್ಧ ಯಾವುದೇ ಕ್ಷಣದಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ ಶುರು ಸಾಧ್ಯತೆ, ಭೀತಿ ಶುರು... US Military
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಜ್ಞೆ ಪಾಲಿಸಲು ಇದೀಗ ಸುಮಾರು ಅರ್ಧ ಲಕ್ಷದಷ್ಟು ಅಮೆರಿಕ ಸೈನಿಕರು ಸಜ್ಜಾಗಿದ್ದಾರೆ. ಇರಾನ್ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನು ಕೆಲವೇ ಗಂಟೆಗಳಲ್ಲಿ ಮಹತ್ವದ ಆದೇಶ ಹೊರಡಿಸುವ ಸಾಧ್ಯತೆ ಹೆಚ್ಚಾಗಿದ್ದು, ಇರಾನ್ ವಿರುದ್ಧ ಈ ಸಮಯದಲ್ಲಿ ಸೇನಾ ಕಾರ್ಯಾಚರಣೆ ಮೂಲಕ ಯುದ್ಧ ಘೋಷಣೆ ಆಗುವುದು ಬಹುತೇಕ ನಿಶ್ಚಿತವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇರಾನ್ ಸುತ್ತಮುತ್ತ ಇರುವ ದೇಶಗಳು ಕೂಡ ಭಯದಲ್ಲಿ ನರಳಿವೆ, ಹಾಗೇ ಯಾವ ಕ್ಷಣದಲ್ಲಿ ಏನಾಗುತ್ತೋ? ಎಂಬ ಚಿಂತೆ ಕೂಡ ಶುರುವಾಗಿದೆ. ಇದನ್ನೆಲ್ಲಾ ಮೀರಿ ಈ ಸಮಯದಲ್ಲಿ ಚೀನಾ ಮತ್ತು ರಷ್ಯಾ ಕೂಡ ಇರಾನ್ ಜೊತೆ ಸೇರಲು ಸಜ್ಜಾಗಿವೆ.
ಮಧ್ಯಪ್ರಾಚ್ಯ ಶಾಂತವಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ ಅಮೆರಿಕ & ಇರಾನ್ ಮಧ್ಯೆ ಜಿನೇವಾದಲ್ಲಿ ಮಾತುಕತೆ ನಡೆದರೂ ಅದು ಫ್ಲಾಪ್ ಷೋ ಆಗಿದೆ. ಮತ್ತೊಂದು ಕಡೆ ಪರಮಾಣು ಕಾರ್ಯಕ್ರಮಗಳ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಸಂಧಾನ ನಡೆಯದೇ ಇದ್ದರೆ ಯುದ್ಧ ಗ್ಯಾರಂಟಿ, ಎಂಬ ಟ್ರಂಪ್ ಅವರ ಎಚ್ಚರಿಕೆ ನಡುವೆ ತನ್ನ ಸೇನಾ ನೆಲೆಗಳ ಬಳಿ ಸಿಮೆಂಟ್ ಗೋಡೆ ಕಟ್ಟಿಸಿದೆ ಇರಾನ್. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವಾರವಷ್ಟೇ ಇರಾನ್ ವಿರುದ್ಧ ಘೋರ ಕಾರ್ಯಾಚರಣೆಗೆ ಸಿದ್ಧ ಎಂಬ ಮುನ್ಸೂಚನೆ ಕೊಟ್ಟಿದ್ದರು. ಈ ಬೆಳವಣಿಗೆ ನಂತರ ತಕ್ಷಣ ಅಲರ್ಟ್ ಆಗಿದ್ದ ಇರಾನ್, ಕೂಡಲೇ ಶಾಂತಿ ಮಾತುಕತೆಗೆ ತಾನು ಸಿದ್ಧ ಎಂಬ ಸಂದೇಶ ರವಾನಿಸಿತ್ತು. ಆದರೆ ಈಗ ನೋಡಿದರೆ ಇರಾನ್ ತನ್ನ ಶಾಂತಿ ಮಾತುಕತೆ ಬದಿಗಿಟ್ಟು ಯುದ್ಧಕ್ಕೆ ಸಜ್ಜಾದಂತೆ ಕಾಣುತ್ತಿದೆ.

ಭರ್ಜರಿ ಸಿದ್ಧತೆ ನಡೆಸಿರುವ ಅಮೆರಿಕ
ಮಧ್ಯಪ್ರಾಚ್ಯದ ಮೇಲೆ ಮೊದಲಿನಿಂದ ಕೂಡ ದೊಡ್ಡಣ್ಣ ಅಮೆರಿಕ ಭಾರಿ ಹಿಡಿತವನ್ನು ಹೊಂದಿದೆ. ಒಂದು ಅಂದಾಜಿನ ಪ್ರಕಾರ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಸೇನೆಯ ಸುಮಾರು 40,000 ಸೈನಿಕರು ನೆಲೆಸಿದ್ದಾರೆ. ಗಲ್ಫ್ ಪ್ರದೇಶವು ಅಮೆರಿಕ ಸೆಂಟ್ರಲ್ ಕಮಾಂಡ್ ವ್ಯಾಪ್ತಿಗೆ ಬರುತ್ತದೆ. ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್, ಓಮನ್ & ಖತಾರ್ ಸೇರಿ ಹಲವು ದೇಶಗಳಲ್ಲಿ ಅಮೆರಿಕ ತನ್ನ ಸೇನಾ ನೆಲೆ ಹೊಂದಿದ್ದು, ಇಲ್ಲಿ ಎಲ್ಲಾ ಲೆಕ್ಕ ಹಾಕಿದರೆ ಸುಮಾರು 40,000 ಅಮೆರಿಕ ಸೈನಿಕರು ಇದ್ದಾರೆ. ಈ ಸಮಯದಲ್ಲಿ ಯಾವಾಗ ಬೇಕಾದರೂ ಅವರೆಲ್ಲಾ ಇರಾನ್ ವಿರುದ್ಧ ಯುದ್ಧಕ್ಕೆ ಮುಂದೆ ನುಗ್ಗಿ ಬರುವ ಸಾಧ್ಯತೆ ಇದೆ.
ಎಲ್ಲಾ ಪ್ರಯತ್ನಗಳು ಕೈಕೊಟ್ಟಿದ್ದು ಏಕೆ?
ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದ ಮಾಡಿಸಬೇಕು ಎಂದು ಎಲ್ಲಾ ರೀತಿ ಪ್ರಯತ್ನ ಮಾಡಲಾಗಿತ್ತು. ಅದರಲ್ಲೂ ಮಧ್ಯಪ್ರಾಚ್ಯದ ಘಟಾನುಘಟಿ ದೇಶಗಳೇ ಈ ವಿಚಾರದಲ್ಲಿ ಮುಂದೆ ಬಂದು ಯುದ್ಧ ನಡೆಯದಂತೆ ಎಲ್ಲಾ ರೀತಿಯ ಪ್ರಯತ್ನ ಮಾಡಿವೆ. ಶಾಂತಿ ಒಪ್ಫಂದಕ್ಕೆ ಎಲ್ಲಾ ರೀತಿಯಲ್ಲಿ ಕೂಡ ಪ್ರಯತ್ನಗಳನ್ನ ಮಾಡಲಾಗಿತ್ತು, ಹೀಗಿದ್ದರೂ ಇದೀಗ ಇರಾನ್ ಮತ್ತು ಅಮೆರಿಕ ನಡುವಿನ ಈಗಿನ ಪರಿಸ್ಥಿತಿ ಬಹುತೇಕ ಯುದ್ಧ ನಡೆಯುವುದನ್ನು ಗ್ಯಾರಂಟಿ ಮಾಡಿದೆ. ಹಾಗೇ ಶಾಂತಿ ಒಪ್ಪಂದದ ಎಲ್ಲಾ ಪ್ರಯತ್ನಗಳು ಕೈಕೊಟ್ಟಿದ್ದು ಏಕೆ? ಎಂಬ ಚರ್ಚೆಗಳು ಶುರುವಾಗಿದೆ. ಇದಕ್ಕೆಲ್ಲಾ ಇರಾನ್ ಸರ್ವಾಧಿಕಾರಿ ಖಮೇನಿ ಕಾರಣ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.
ಇರಾನ್ ಸಮೀಪಕ್ಕೆ ಅಮೆರಿಕ ಸೇನೆ ಬೃಹತ್ ಯುದ್ಧ ನೌಕೆ ಆಗಿರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ ತೆರಳಿದೆ. ಜೊತೆಗೆ ಫೋರ್ಡ್ ಎಂಬ ಮತ್ತೊಂದು ನೌಕೆ ಕೂಡ ಸಮೀಪಕ್ಕೆ ಬಂದಿದೆ. ಈ ಮೂಲಕ ಪ್ರಸ್ತುತ ವಾತಾವರಣದಲ್ಲಿ ಒಟ್ಟು 8 ವಾಯುನೆಲೆಗಳ ಬೆಂಬಲ ಮೂಲಕ ಅಮೆರಿಕ ಸೇನೆ ಪ್ರತಿ ದಿನಕ್ಕೆ ಸುಮಾರು 800 ಯುದ್ಧ ವಿಮಾನಗಳ ಹಾರಾಟ ನಿಭಾಯಿಸುವ ಶಕ್ತಿ ಹೊಂದಿದೆ. ಹೀಗಿದ್ದಾಗ ಇರಾನ್ ಕೂಡ ಯುದ್ಧ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುವುದು ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications