Donald Trump: ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ- ಇಲ್ಲಿ ಗೆದ್ದರೆ ಅಧ್ಯಕ್ಷರಾಗುವುದು ಪಕ್ಕಾ

US Elections Result 2024: ಅಮೆರಿಕದ ದೊಡ್ಡ ರಾಜ್ಯಗಳಲ್ಲಿ ಒಂದಾದ ಪೆನ್ಸಿಲ್ವೇನಿಯಾದಲ್ಲಿ ಶೇ 50 ರಷ್ಟು ಮತಗಳನ್ನು ಎಣಿಕೆ ಮಾಡಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇ 50.14 ರಷ್ಟು ಮತಗಳ ಮುನ್ನಡೆ ಸಾಧಿಸಿದ್ದಾರೆ. ಡೆಮಾಕ್ರಟಿಕ್‌ ಪಕ್ಷದ ನಾಯಕಿ ಕಮಲಾ ಹ್ಯಾರಿಸ್ ಅವರು ಶೇ 48.95 ಮತಗಳೊಂದಿಗೆ ಹಿನ್ನಡೆ ಅನುಭವಿಸುತ್ತಿದ್ದಾರೆ.

ಈ ರಾಜ್ಯವು 19 ಎಲೆಕ್ಟೊರಲ್‌ ವೋಟ್‌ಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪೆನ್ಸಿಲ್ವೇನಿಯಾವನ್ನು ನಿರ್ಣಾಯಕ ರಾಜ್ಯವೆಂದು ಕರೆಯಲಾಗುತ್ತದೆ. ಈಗೀನ ಫಲಿತಾಂಶದ ಪ್ರಕಾರ ಡೆಮಾಕ್ರಟಿಕ್‌ ನಾಯಕಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಮಿಚಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಅಮೆರಿಕದ ಚುನಾವಣೆಯಲ್ಲಿ ಬಹುಮತ ಪಡೆಯಬಹುದು. ಒಂದು ವೇಳೆ, ಕಮಲಾ ಹ್ಯಾರಿಸ್ ಅವರು ಈ ರಾಜ್ಯಗಳಲ್ಲಿ ಒಂದನ್ನು ಕಳೆದುಕೊಂಡರೂ ಅವರು ಪರಾಭವಗೊಳ್ಳುವುದು ನಿಶ್ಚಿತವೆಂದು ಹೇಳಲಾಗುತ್ತಿದೆ.

US Elections Result 2024 Donald Trump leading over Kamala Harris in Pennsylvania

ಈಗಾಗಲೇ ಡೊನಾಲ್ಡ್ ಟ್ರಂಪ್ ಅವರು 10 ರಾಜ್ಯಗಳಲ್ಲಿ ಗೆಲುವು ಪಡೆದಿದ್ದಾರೆ. ಕಮಲಾ ಹ್ಯಾರಿಸ್ ಅವರು ಐದು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟಾರೆಯಾಗಿ ಡೊನಾಲ್ಡ್‌ ಟ್ರಂಪ್‌ ಅವರು 137 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಕಮಲಾ ಹ್ಯಾರಿಸ್‌ ಅವರು 99 ಸ್ಥಾನಗಳನ್ನು ಕಡೆದಿದ್ದಾರೆ. ಬಹುಮತಕ್ಕೆ 270 ಎಲೆಕ್ಟೋರಲ್ ಮತಗಳು ಬೇಕಿವೆ.

ಅಮೆರಿಕದಲ್ಲಿ ಒಟ್ಟು ಏಳು ರಾಜ್ಯಗಳನ್ನು ಸ್ವಿಂಗ್‌ ರಾಜ್ಯಗಳೆಂದು ಗುರಿತಿಸಲಾಗಿದೆ. ಪೆನ್ಸಿಲ್ವೇನಿಯಾ, ಅರಿಜೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ಉತ್ತರ ಕೆರೊಲಿನಾ ಮತ್ತು ವಿಸ್ಕಾನ್ಸಿನ್‌ನ ಇವುಗಳು ಏಳು ಸ್ವಿಂಗ್ ಸ್ಟೇಟ್‌ಗಳು. ಈಗ ಡೊನಾಲ್ಡ್‌ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಡೊನಾಲ್ಡ್ ಟ್ರಂಪ್ ಅವರು ಎರಡನೇ ಸ್ವಿಂಗ್ ಸ್ಟೇಟ್‌ ಆಗಿರುವ ಜಾರ್ಜಿಯಾದಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್‌ಗಿಂತ ಮುನ್ನಡೆಯನ್ನು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಕಳೆದ ಬಾರಿ ಜಾರ್ಜಿಯಾದಲ್ಲಿ ರಿಪಬ್ಲಿಕನ್‌ ಪಕ್ಷವು ಗೆಲುವು ಸಾಧಿಸಿತ್ತು.

ಕಳೆದ ಬಾರಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಅವರು ಬಹುಮತ ಪಡೆದು ಅಮೆರಿಕ ಅಧ್ಯಕ್ಷ ಗಾದಿ ಹಿಡಿದಿದ್ದರು. ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಈ ಬಾರಿ ಡೊನಾಲ್ಡ್‌ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿದ್ದು. ಬಹುಮತ ಸಾಧಿಸುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+