US Elections 2024: ಟ್ರಂಪ್ ಎದುರು ಕಮಲಾ ಸೋಲು ಕಲಿಸಿದ ಪಾಠ ಏನು?
ಕಮಲಾ ಹ್ಯಾರಿಸ್ ಸೋತು ಹೋಗಿದ್ದಾರೆ. ಭಾರತ ಮೂಲದ ತಾಯಿಗೆ ಜನಿಸಿದ ಹೆಮ್ಮೆಯ ಪುತ್ರಿ ಅಮೆರಿಕದ ಅಧ್ಯಕ್ಷರಾಗುತ್ತಾರೆ ಎಂಬುದು ಅವರ ಬೆಂಬಲಿಗರ ಆಸೆಯಾಗಿತ್ತು. ಆದರೆ, ಕಮಲಾ ಹ್ಯಾರಿಸ್ ಬೆಂಬಲಿಗರ ಕನಸು & ಆಸೆಗಳು ಬೆಂಕಿಗೆ ಬಿದ್ದಿವೆ. ಹಾಗಾದ್ರೆ ಗೆಲ್ಲುವ ಕುದುರೆ ಎನಿಸಿಕೊಂಡಿದ್ದ ಕಮಲಾ ಹ್ಯಾರಿಸ್ ಸೋತಿದ್ದು ಎಲ್ಲಿ? ಡೊನಾಲ್ಡ್ ಟ್ರಂಪ್ ವಿರುದ್ಧ ಭಾರಿ ಮುನ್ನಡೆ ಸಾಧಿಸಿದ್ದ ಕಮಲಾ ಹ್ಯಾರಿಸ್ ಸೋಲಿಗೆ ಕಾರಣವಾದ ಅಂಶಗಳು ಏನು? ಟ್ರಂಪ್ ಗೆಲುವಿನ ಮೂಲಕ ಡೆಮಾಕ್ರಟಿಕ್ ಪಕ್ಷದ ನಾಯಕರು ಕಲಿಯಬೇಕಿರುವ ಪಾಠ ಎಂತಹದ್ದು? ಬನ್ನಿ ತಿಳಿಯೋಣ.
ಅಮೆರಿಕ ಚುನಾವಣೆ ಆರಂಭದಲ್ಲಿ ಕಮಲಾ ಹ್ಯಾರಿಸ್ ಹವಾ ಹೇಗಿತ್ತು ಅಂದ್ರೆ, ಅನುಮಾನವೇ ಇಲ್ಲದೆ ಈ ಬಾರಿ ಕಮಲಾ ಹ್ಯಾರಿಸ್ ಗೆದ್ದು ಬೀಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಮಾತ್ರ, ಉಲ್ಟಾ ಹೊಡೆದು ಬಿಟ್ಟಿದೆ. ಕಮಲಾ ಹ್ಯಾರಿಸ್ ಸೋಲಿನ ಪರಿಣಾಮ ಡೆಮಾಕ್ರಟಿಕ್ ಪಕ್ಷದ ನಾಯಕರು ಕಕ್ಕಾಬಿಕ್ಕಿ ಆಗಿ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದಾರೆ. ಯಾಕೆ ಅಂದ್ರೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ, ಕಮಲಾ ಹ್ಯಾರಿಸ್ ಪರವಾಗಿ ದೊಡ್ಡ ಅಲೆ ಮೂಡಿದೆ ಎಂಬ ಮಾತುಗಳು ಎಲ್ಲೆಲ್ಲೂ ಕೇಳಿ ಬಂದಿದ್ದವು ಆದರೆ ಈಗ ಉಲ್ಟಾ ರಿಸಲ್ಟ್ ಬಂದಿದೆ.

ಕಮಲಾ ಹ್ಯಾರಿಸ್ ಸೋತಿದ್ದು ಎಲ್ಲಿ?
ಚುನಾವಣೆ ಬಗ್ಗೆ ಹೊರಬಿದ್ದ ಸಮೀಕ್ಷೆಗಳು ಈ ರೀತಿ ಕಮಲಾ ಹ್ಯಾರಿಸ್ ಅವರ ಪರವಾಗಿ ಅಲೆ ಇದೆ ಎಂದಿದ್ದವು. ಅಲ್ಲದೆ ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ ಎಂಬ ಮಾತು ಕೇಳಿ ಬಂದಿತ್ತು. ಆದ್ರೆ ಈಗ ಟ್ರಂಪ್ ಭರ್ಜರಿಯಾಗಿ ಗೆದ್ದಿದ್ದರೆ, ಕಮಲಾ ಹ್ಯಾರಿಸ್ ಹೀನಾಯ ಸೋಲು ಕಂಡಿದ್ದಾರೆ. ಈ ಮೂಲಕ ಕಮಲಾ ಹ್ಯಾರಿಸ್ ತಮ್ಮ ಬೆಂಬಲಿಗರ ಎದೆಬಡಿತ ನಿಲ್ಲಿಸಿದ್ದಾರೆ. ಹಾಗಾದ್ರೆ ಕಮಲಾ ಹ್ಯಾರಿಸ್ ಸೋತಿದ್ದು ಎಲ್ಲಿ? ಬನ್ನಿ ತಿಳಿಯೋಣ.
ಮತದಾರರ ನಾಡಿಮಿಡಿತ ಅರಿಯದ ಕಮಲಾ?
ಹೌದು, ಈ ಮಾತನ್ನು ಕಮಲಾ ಹ್ಯಾರಿಸ್ ಅವರ ಬೆಂಬಲಿಗರು ಅರಗಿಸಿಕೊಳ್ಳಲು ಆಗ್ತಿಲ್ಲ. ಯಾಕೆ ಅಂದ್ರೆ ಕಳೆದ 4 ವರ್ಷದಲ್ಲಿ ಅಮೆರಿಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬದಲಾವಣೆ ಕಂಡಿದೆ. ಹೀಗಾಗಿ ಅಮೆರಿಕದ ಈ ಬದಲಾವಣೆ ಗಾಳಿಗೆ ತಕ್ಕಂತೆ ಅಲ್ಲಿನ ಚುನಾವಣೆಗೆ ಕಮಲಾ ಹ್ಯಾರಿಸ್ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಹೋದರು. ಆದರೆ ಡೊನಾಲ್ಡ್ ಟ್ರಂಪ್ ಅವರ ಬೆನ್ನಿಗೆ ದೊಡ್ಡ ಮಟ್ಟದ ಬೆಂಬಲ ಸಿಕ್ಕು, ಮತದಾರರ ಮನಸ್ಸು ಗೆಲ್ಲಲು ಉದ್ಯಮಿಗಳೂ & ಶ್ರೀಮಂತರು ಸಹಾಯ ಮಾಡಿದರು.
ಇದು ಮಾತ್ರ ಅಲ್ಲದೆ ಜೋ ಬೈಡನ್ ಅವರು ಮತ್ತೊಂದು ಅವಧಿಗೆ ಚುನಾವಣೆಗೆ ನಿಲ್ಲಲು ಅರ್ಹತೆ ಹೊಂದಿದ್ದರೂ, ಬೈಡನ್ ಅವರನ್ನು ಹಿಂದೆ ಸರಿಯಲು ಒತ್ತಡ ಹೇರಲಾಗಿತ್ತು ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಡೊನಾಲ್ಡ್ ಟ್ರಂಪ್ ಈ ಅಸ್ತ್ರವನ್ನೇ ಬಳಸಿ ಬಿಳಿಯರನ್ನ ಒಗ್ಗೂಡಿಸಿಬಿಟ್ಟರು. ಹಾಗೇ ಬಿಳಿಯರ ಮತಗಳು ತಮ್ಮ ಪರವಾಗಿ ಬೀಳುವಂತೆ ಮಾಡುವಲ್ಲಿ ಕೂಡ ಯಶಸ್ವಿಯಾದರು ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿ!
ಇದರ ಜೊತೆಗೆ ಅಮೆರಿಕದ ಉದ್ಯಮಿಗಳು ಟ್ರಂಪ್‌ಗೆ ಭಾರಿ ಪ್ರಮಾಣದಲ್ಲಿ ಚುನಾವಣಾ ನಿಧಿ ರೂಪದ ಹಣ ನೀಡಿದ್ದು, ಬೈಡನ್ ಅವಧಿಯಲ್ಲಿ ಆಗಿರುವ ಎಡವಟ್ಟು ಸೇರಿದಂತೆ ಹಲವು ಕಾರಣಗಳ ಹಿನ್ನೆಲೆಯಲ್ಲಿ ಕಮಲಾ ಹ್ಯಾರಿಸ್ ಹೀನಾಯವಾಗಿ ಸೋತಿದ್ದಾರೆ. ಈ ಸೋಲಿನಿಂದ ಇದೀಗ ಡೆಮಾಕ್ರಟಿಕ್ ಪಕ್ಷದ ನಾಯಕರು ಪಾಠವನ್ನ ಕಲಿಯಬೇಕಿದೆ. ಇಲ್ಲವಾದರೆ, ಮುಂದಿನ ಪರಿಸ್ಥಿತಿ ಇನ್ನಷ್ಟು ಘೋರವಾಗಿ ಡೆಮಾಕ್ರಟಿಕ್ ಪಕ್ಷವನ್ನು ಕಾಡುವ ಆತಂಕ ಎದುರಾಗಿದೆ.












Click it and Unblock the Notifications