Israel Hamas War: ಹಮಾಸ್ ಉಗ್ರರಿಗೆ ವಿಶ್ವಸಂಸ್ಥೆ ಮುಖ್ಯಸ್ಥರು ಹೇಳಿದ್ದೇನು?

ನ್ಯೂಯಾರ್ಕ್: ಯುದ್ಧ ಇಡೀ ಜಗತ್ತನ್ನು ನಿಧಾನವಾಗಿ ಸಾವಿನ ಕೂಪಕ್ಕೆ ತಳ್ಳುತ್ತಿದೆ. ಅತ್ತ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಭೀಕರ ಕಾಳಗ ನಡೆಯುತ್ತಿದ್ದರೆ, ಇನ್ನೊಂದ್ಕಡೆ ಉಕ್ರೇನ್ ಹಾಗೂ ರಷ್ಯಾ ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿವೆ. ಹೀಗೆ ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲೇ ವಿಶ್ವಸಂಸ್ಥೆ ಹಮಾಸ್ ಉಗ್ರರಿಗೆ ಖಡಕ್ ಸೂಚನೆ ನೀಡಿದೆ. ಹಾಗಾದರೆ ಈಗ ಹಮಾಸ್‌ಗೆ ವಿಶ್ವಸಂಸ್ಥೆ ನೀಡಿರುವ ಸಂದೇಶ ಏನು?

ಯಾರದ್ದೋ ಕಿಚ್ಚು ಇನ್ಯಾರದ್ದೋ ಕಿತ್ತಾಟ. ಆದ್ರೂ ಅಮಾಯಕರು ಸಾಯುವುದು ಎಷ್ಟು ಸರಿ ಹೇಳಿ? ಈಗ ಹಮಾಸ್ ಹಾಗೂ ಇಸ್ರೇಲ್ ಕಿತ್ತಾಟದಲ್ಲಿ ಆಗುತ್ತಿರುವುದು ಕೂಡ ಇದೇ. ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು ಇಸ್ರೇಲ್‌ನ ವಿರುದ್ಧ ಒಂದೇ ಬಾರಿಗೆ 5000ಕ್ಕೂ ಹೆಚ್ಚು ರಾಕೆಟ್‌ ಉಡಾಯಿಸಿದ್ದರು. ಜೊತೆಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ರು. ಹೀಗೆ ಇಸ್ರೇಲ್ ಒಳಗೆ ನುಗ್ಗಿದ್ದ ಉಗ್ರರ ಗ್ಯಾಂಗ್, ನೂರಾರು ಅಮಾಯಕರ ಅಪರಹರಣ ಮಾಡಿದೆ. ಈ ಬಗ್ಗೆ ಇದೀಗ ವಿಶ್ವಸಂಸ್ಥೆ ಮುಖ್ಯಸ್ಥ ಖಡಕ್ ಮಾತು ಹೇಳಿದ್ದಾರೆ.

hamas-and-israel-war

ಒತ್ತೆಯಾಳುಗಳನ್ನ ರಿಲೀಸ್ ಮಾಡಿ!

ಇಸ್ರೇಲ್‌ನ ಅಮಾಯಕರಿಗೆ ಏನು ನಡೆಯುತ್ತಿದೆ ಅನ್ನೋದು ಗೊತ್ತಾಗುವ ಮೊದಲೇ, ಉಗ್ರ ಪಡೆ ಅವರನ್ನು ಗಾಜಾಪಟ್ಟಿಗೆ ಎಳೆದುಕೊಂಡು ಹೋಗಿದೆ. ಆದರೆ ಹೀಗೆ ಉಗ್ರರ ಕೈಯಲ್ಲಿ ಸಿಲುಕಿ ನರಳುತ್ತಿರುವ ಸಾಮಾನ್ಯ ಜನರನ್ನು ಬಿಡಿಸುವ ಬದಲು, ಘೋರ ಯುದ್ಧ ಸಾರಿದೆ ಇಸ್ರೇಲ್ ಸೇನೆ. ಪರಿಸ್ಥಿತಿ ಹೀಗಿದ್ದಾಗ ವಿಶ್ವಸಂಸ್ಥೆ ಅಮಾಯಕರ ನೆರವಿಗೆ ಬಂದಿದೆ. ಇದರ ಕುರಿತು ಟ್ವೀಟ್ ಮಾಡಿರುವ ವಿಶ್ವಸಂಸ್ಥೆ ಮುಖ್ಯಸ್ಥ, ಯಾವುದೆ ಷರತ್ತುಗಳಿಲ್ಲದೆ ಒತ್ತೆಯಾಳು ರಿಲೀಸ್ ಮಾಡಲು ಆದೇಶಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಹಮಾಸ್‌ ಉಗ್ರರಿಗೆ ಈ ಮೂಲಕ ಖಡಕ್ ಸೂಚನೆ ನೀಡಿದ್ದಾರೆ.

ಇಸ್ರೇಲ್‌ಗೂ ಸೂಚನೆ ನೀಡಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ ಮುಖ್ಯಸ್ಥರು ಈಗ ನೀಡಿರುವ ಸೂಚನೆ ಪ್ರಕಾರ, ಹಮಾಸ್‌ ಹೊತ್ತೊಯ್ದಿರುವ ಒತ್ತೆಯಾಳುಗಳು ಯಾವುದೇ ಷರತ್ತುಗಳಿಲ್ಲದೆ ತಕ್ಷಣ ರಿಲೀಸ್ ಆಗಬೇಕು. ಹಾಗೇ ಗಾಜಾ ಜನರ ಸಹಾಯಕ್ಕೂ ಇಸ್ರೇಲ್‌ ಮುಂದಾಗಬೇಕು ಅಂತಾ ಗುಟೆರಸ್ ಗುಟುರು ಹಾಕಿದ್ದಾರೆ. ಜಾಗತಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ವಿಶ್ವಸಂಸ್ಥೆ ಯಾವ ದೇಶ ಅಥವಾ ಸೇನೆಯ ಪರವೂ ನಿಲ್ಲದೆ ಸಾಮಾನ್ಯ ಜನರ ಜೀವ ಉಳಿಸಲು ಇದೀಗ ಮುಂದಾಗಿರುವುದು ವಿಶೇಷ.

hamas-and-israel-war

ಆದರೆ ವಿಶ್ವಸಂಸ್ಥೆ ಮಾತನ್ನ ಹಮಾಸ್ ಅಥವಾ ಇಸ್ರೇಲ್ ಸೇನೆ ಕೇಳುತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಮತ್ತೊಂದು ಕಡೆ ಇಸ್ರೇಲ್ ಹೇಳುವಂತೆ, ಗಾಜಾ ಪಟ್ಟಿಯಲ್ಲಿ 150 ರಿಂದ 200 ಇಸ್ರೇಲಿಗಳನ್ನ ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿದೆ ಎಂಬ ಆರೋಪ ಮಾಡುತ್ತಿದೆ ಇಸ್ರೇಲ್ ಸೇನೆ. ಇದು ಎರಡೂ ಕಡೆ ಸಾಮಾನ್ಯ ಜನರ ಮೇಲೆ ಭಾರಿ ಪರಿಣಾಮ ಬೀರಿದೆ.

4000ಕ್ಕೂ ಹೆಚ್ಚು ಜನ ಬಲಿ?

ಇನ್ನು ಇತ್ತೀಚಿನ ಮಾಹಿತಿಗಳ ಪ್ರಕಾರ ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ 4000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇನ್ನು ಒಂದು ಕಡೆ 1,400 ಇಸ್ರೇಲ್ ನಾಗರಿಕರು ಮೃತಪಟ್ಟಿದ್ದರೆ, ಗಾಜಾಪಟ್ಟಿ ಭಾಗದಲ್ಲಿ ಸುಮಾರು 2,750 ಜನಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಈ ಪೈಕಿ 289 ಇಸ್ರೇಲ್ ಸೈನಿಕರು ಮೃತಪಟ್ಟಿರುವ ಬಗ್ಗೆ ಇಸ್ರೇಲ್ ಮಾಹಿತಿ ನೀಡಿದೆ. ಇನ್ನೊಂದೆಡೆ ವಿಶ್ವಸಂಸ್ಥೆ ಎರಡೂ ದೇಶದ ಸಾಮಾನ್ಯರ ರಕ್ಷಣೆಗೆ ಮುಂದಾಗಿದೆ.

ಹೀಗೆ ಯುದ್ಧ ಎಲ್ಲವನ್ನೂ ನಾಶ ಮಾಡುತ್ತಿದೆ ಕಂಡ ಕಂಡ ಜಾಗದಲ್ಲಿ ಹೆಣಗಳು ಬಿದ್ದಿವೆ. ಇದು ಸಾಲದು ಎಂಬಂತೆ ಯುದ್ಧವನ್ನು ಮತ್ತಷ್ಟು ಘನಘೋರ ಮಾಡಲು ಹಮಾಸ್ ಉಗ್ರ ಪಡೆ ಹಾಗೂ ಇಸ್ರೇಲ್ ಸೇನೆ ಪ್ಲ್ಯಾನ್ ಮಾಡಿದೆ. ಹೀಗಾಗಿ ಮತ್ತಷ್ಟು ಅಮಾಯಕರ ಜೀವ ಬಲಿಯಾಗುವ ಭಯ ಇದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ವಿಶ್ವಂಸ್ಥೆ, ಯುದ್ಧ ನಿಲ್ಲಿಸಲು ಪ್ರಯತ್ನ ಮಾಡುತ್ತಿದೆ. ಆದರೆ ಯುದ್ಧ ನಿಲ್ಲಿಸಲು ಅತ್ತ ಹಮಾಸ್ ಉಗ್ರರೂ ತಯಾರಿಲ್ಲ, ಈ ಸಮಯದಲ್ಲೇ ಇಸ್ರೇಲ್ ಕೂಡ ಸೇಡಿಗೆ ಸೇಡು ಅಂತಾ ಮುನ್ನುಗ್ಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+