• search

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ?

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಸೆಪ್ಟೆಂಬರ್. 15: ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ಎಂದು ಈಗಾಗಲೇ ಗುರುತಿಸಿಕೊಂಡಿದ್ದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿಯೂ ಸದ್ಯವೇ ಕಾಯಂ ಸದಸ್ಯತ್ವ ಪಡೆಯಲಿದೆ.

  ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಪುನಾರಚಿಸುವ ಕುರಿತ ಕರಡು ಪ್ರಸ್ತಾವನೆಗೆ ಎಲ್ಲ 193 ಸದಸ್ಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಸದಸ್ಯ ರಾಷ್ಟ್ರಗಳ ಈ ತೀರ್ಮಾನವನ್ನು ಭಾರತ ಸ್ವಾಗತಿಸಿದೆ.[ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ ಬಾಂಧವ್ಯ ಬೆಸುಗೆ]

  UN adopts document for Security Council reforms

  15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಅಮೆರಿಕ, ಚೀನಾ, ರಷ್ಯಾ ಸೇರಿ 5 ರಾಷ್ಟ್ರಗಳು ಕಾಯಂ ಸದಸ್ಯತ್ವ ಹೊಂದಿವೆ. ಭಾರತವನ್ನೂ ಕಾಯಂ ಸದಸ್ಯ ರಾಷ್ಟ್ರವನ್ನಾಗಿ ಪರಿಗಣಿಸಲು ಪೂರಕವಾಗಿ ಭದ್ರತಾ ಮಂಡಳಿಯ ಪುನರ್ ರಚನೆಗೆ ಸಂಬಂಧಿಸಿ ಅಭಿಪ್ರಾಯ ಮಂಡಿಸಲು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸಮ್ಮತಿ ನೀಡಿವೆ.

  ಆದರೆ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಲು ಹಾಗೂ ಅದಕ್ಕೆ ಪೂರಕವಾಗಿ ಭದ್ರತಾ ಮಂಡಳಿ ಪುನರ್ ರಚನೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಸಮ್ಮತಿ ಸೂಚಿಸಿಲ್ಲ. ಮಂಡಳಿ ವಿಸ್ತರಣೆ ವಿರೋಧಿಸಿರುವ ಚೀನಾ, ಅಗತ್ಯಬಿದ್ದರೆ ಈ ಸಂಬಂಧ ಸದಸ್ಯ ರಾಷ್ಟ್ರಗಳ ಅಭಿಪ್ರಾಯ ಸಂಗ್ರಹಿಸಲು ಮತಕ್ಕೆ ಹಾಕಬೇಕು ಎಂದು ಹೇಳಿದೆ.[ವಿಶ್ವಸಂಸ್ಥೆಯಲ್ಲಿ ಕನ್ನಡ ಕಂಪು ಹರಿಸಿದ ಅನಂತ್ ಕುಮಾರ್]

  ವಿಶ್ವಸಂಸ್ಥೆಯ 69ನೇ ಅವಧಿ ಮುಕ್ತಾಯವಾಗುತ್ತಿದ್ದು 70ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಕಳೆದ ಎರಡು ದಶಕದಿಂದ ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವ ಬೇಕು ಎಂದು ಭಾರತ ಹೇಳಿಕೊಳ್ಳುತ್ತಲೇ ಬಂದಿತ್ತು. ಭದ್ರತಾ ಮಂಡಳಿಯನ್ನು ಪುನಾರಚನೆ ಮಾಡಿದ್ದೇ ಆದಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸಿಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  In a significant development, the UN General Assembly unanimously adopted a negotiating text for the Security Council reforms, setting the stage for talks on the long pending process at the 70th session of the global body.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more