ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲಾಢ್ಯ ಅಮೆರಿಕಾ ನಂಬಿ ಕೆಟ್ಟು ಬಲಹೀನವಾದ ಉಕ್ರೇನ್

|
Google Oneindia Kannada News

ಕೀವ್, ಫೆ 25: ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ನಂತರ ಇಡೀ ವಿಶ್ವ ಮತ್ತೊಂದು ಮಹಾಯುದ್ದದ ಆತಂತಕ್ಕೆ ಸಿಲುಕಿದೆ. ರಷ್ಯಾ ಸೇನೆ ಉಕ್ರೇನ್ ದೇಶದ ಆಯಕಟ್ಟಿನ ಭಾಗದ ಮೇಲೆ ದಾಳಿ ಮುಂದುವರಿಸಿದ್ದು ಅಪಾರ ಪ್ರಮಾಣದ ಸಾವುನೋವು ವರದಿಯಾಗಿದೆ.

ರಷ್ಯಾದ ಸ್ವತ್ತುಗಳನ್ನು ಮುಟ್ಟುಗೋಲು ಹಾಕುತ್ತಿರುವ ದೊಡ್ಡಣ್ಣ ಅಮೆರಿಕಾದ ಕ್ರಮಕ್ಕೆ ದಕ್ಷಿಣ ಕೊರಿಯಾ ಸಾಥ್ ನೀಡಿದ್ದು, ಅಲ್ಲೂ ಹಲವು ನಿರ್ಬಂಧಗಳನ್ನು ವಿಧಿಸಿದೆ. ಇವೆಲ್ಲದರ ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತುಕತೆ ನಡೆದಿದೆ.

ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ವಶಕ್ಕೆ ಪಡೆದ ರಷ್ಯಾಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ವಶಕ್ಕೆ ಪಡೆದ ರಷ್ಯಾ

ಮಹತ್ವದ ಬೆಳವಣಿಗೆಯೊಂದರಲ್ಲಿ ಇಡೀ ವಿಶ್ವಕ್ಕೆ ಭಯದ ವಾತಾವರಣ ತಂದೊಡ್ಡಿದ್ದ ಉಕ್ರೇನಿನ ಚೆರ್ನೋಬೆಲ್ ಅಣು ವಿದ್ಯುತ್ ಸ್ಥಾವರವನ್ನು ರಷ್ಯಾ ತನ್ನ ವಶಕ್ಕೆ ಪಡೆದುಕೊಂಡಿದೆ. ಎರಡೂ ದೇಶಗಳ ಸೈನಿಕರ ನಡುವಿನ ಭೀಕರ ಯುದ್ದದ ನಂತರ ಅಣುಸ್ಥಾವರ ರಷ್ಯಾ ವಶಕ್ಕೆ ಬಂದಿದೆ.

ರಷ್ಯಾ ಸೇನೆಯ ಮುಂದೆ ಏನೇನೂ ಅಲ್ಲದ ಉಕ್ರೇನ್ ಇಂದು ಬಲಹೀನವಾಗಲು ಅಮೆರಿಕಾವೇ ಕಾರಣ ಎಂದು ಅಲ್ಲಿನ ಸಂಸದರೊಬ್ಬರು ವಿಷಾದ ವ್ಯಕ್ತ ಪಡಿಸಿದ್ದಾರೆ. ಸೋವಿಯತ್ ಒಕ್ಕೂಟದ ಪತನದ ನಂತರ ಅಮೆರಿಕಾದ ಮಾತನ್ನು ನಂಬಿ ಉಕ್ರೇನ್ ಕೆಟ್ಟಿತು ಎಂದು ಸಂಸದರು ಹೇಳಿದ್ದಾರೆ. ಸಂಸದರು ಕೊಟ್ಟ ವಿವರಣೆ ಹೀಗಿದೆ:

ಉಕ್ರೇನ್‌ನಲ್ಲಿ ಸಿಲುಕಿದ ರಾಮನಗರ ವಿದ್ಯಾರ್ಥಿನಿ; ರಾಜ್ಯದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟದಲ್ಲಿಉಕ್ರೇನ್‌ನಲ್ಲಿ ಸಿಲುಕಿದ ರಾಮನಗರ ವಿದ್ಯಾರ್ಥಿನಿ; ರಾಜ್ಯದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟದಲ್ಲಿ

 ರಷ್ಯಾದ ವಾಯುಪಡೆ ಉಕ್ರೇನಿನ ವಿಮಾನ ನಿಲ್ದಾಣಗಳ ಮೇಲೆ ನಿಯಂತ್ರಣ

ರಷ್ಯಾದ ವಾಯುಪಡೆ ಉಕ್ರೇನಿನ ವಿಮಾನ ನಿಲ್ದಾಣಗಳ ಮೇಲೆ ನಿಯಂತ್ರಣ

ರಷ್ಯಾದ ವಾಯುಪಡೆ ಉಕ್ರೇನಿನ ವಿಮಾನ ನಿಲ್ದಾಣಗಳ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿರುವುದರಿಂದ ದೇಶದ ಹಲವು ಏರ್ಪೋರ್ಟ್ ಗಳನ್ನು ಮುಚ್ಚಲಾಗಿದೆ. ಪೂರ್ವ ಉಕ್ರೇನಿನ ವಾಯುಪ್ರದೇಶದಲ್ಲಿ ನಾಗರಿಕ ವಾಯು ಸಂಚಾರವನ್ನೂ ಬಂದ್ ಮಾಡಲಾಗಿದೆ. ತನ್ನ ತಪ್ಪಿಂದಲೇ ಹೇಗೆ ಉಕ್ರೇನ್ ಬಲಹೀನವಾಯಿತು ಎನ್ನುವುದನ್ನು ಉಕ್ರೇನಿನ ಸಂಸತ್ ಸದಸ್ಯ ಅಲೆಕ್ಸಿ ಗೊಂಚರೆಂಕೋ ವಿವರಿಸಿದ್ದಾರೆ. ಸೋವಿಯತ್ ಒಕ್ಕೂಟದ ಪತನದ ನಂತರ ಉಕ್ರೇನ್ ಬಲಹೀನಗೊಳ್ಳುತ್ತಲೇ ಬಂತು ಎಂದು ಅಲೆಕ್ಸಿ ಅಭಿಪ್ರಾಯ ಪಟ್ಟಿದ್ದಾರೆ. (ಚಿತ್ರ: ಪಿಟಿಐ)

 ಅಮೆರಿಕಾ, ಬ್ರಿಟನ್ ಮತ್ತು ರಷ್ಯಾ ಭರವಸೆಯ ಮಾತನ್ನು ನಂಬಿಕೆಟ್ಟ ಉಕ್ರೇನ್

ಅಮೆರಿಕಾ, ಬ್ರಿಟನ್ ಮತ್ತು ರಷ್ಯಾ ಭರವಸೆಯ ಮಾತನ್ನು ನಂಬಿಕೆಟ್ಟ ಉಕ್ರೇನ್

"ಅಮೆರಿಕಾ, ಬ್ರಿಟನ್ ಮತ್ತು ರಷ್ಯಾದ ಭರವಸೆಯ ಮಾತನ್ನು ನಂಬಿ ಉಕ್ರೇನಿಗೆ ಇಂದು ಈ ಪರಿಸ್ಥಿತಿ ಬಂದಿದೆ. 1994ರಲ್ಲಿ ವಿಶ್ವದಲ್ಲೇ ಮೂರನೇ ಅತಿದೊಡ್ಡದಾದ ಪರಮಾಣು ಶಸ್ತ್ರಾಗಾರವನ್ನು ನಾವು ತ್ಯಜಿಸಿದೆವು. ಆ ಮೂಲಕ ನಿಶ್ಯಕ್ತಗೊಳ್ಳಲು ಮುನ್ನುಡಿಯನ್ನು ಬರೆಯಲಾಯಿತು. 1991ರಲ್ಲಿ ಸೋವಿಯತ್ ಒಕ್ಕೂಟ ಪತನಗೊಂಡ ನಂತರ ಉಕ್ರೇನ್ ಬಳಿ ಸಾವಿರಾರು ಪರಮಾಣು ಅಸ್ತ್ರಗಳು ಉಳಿದುಕೊಂಡಿದ್ದವು"ಎಂದು ಉಕ್ರೇನಿನ ಸಂಸತ್ ಸದಸ್ಯ ಅಲೆಕ್ಸಿ ಗೊಂಚರೆಂಕೋ ವಿವರಿಸಿದ್ದಾರೆ. (ಚಿತ್ರ: ಪಿಟಿಐ)

 ಕೆಲವು ವರ್ಷಗಳ ನಂತರ ಬುಡಾಪೆಸ್ಟ್ ಒಪ್ಪಂದಕ್ಕೆ ನಮ್ಮ ದೇಶ ಸಹಿಹಾಕಿ

ಕೆಲವು ವರ್ಷಗಳ ನಂತರ ಬುಡಾಪೆಸ್ಟ್ ಒಪ್ಪಂದಕ್ಕೆ ನಮ್ಮ ದೇಶ ಸಹಿಹಾಕಿ

"ಕೆಲವು ವರ್ಷಗಳ ನಂತರ ಬುಡಾಪೆಸ್ಟ್ ಒಪ್ಪಂದಕ್ಕೆ ನಮ್ಮ ದೇಶ ಸಹಿಹಾಕಿತು. ಆ ವೇಳೆ ಅಮೆರಿಕಾ ನೀಡಿದ ಭದ್ರತಾ ಖಾತರಿಯಿಂದಾಗಿ ಅಣು ಅಸ್ತ್ರವನ್ನು ನಮ್ಮ ದೇಶ ತ್ಯಜಿಸಿತು. ಈ ಪ್ರಮಾದವೇ ನಮ್ಮ ದೇಶವನ್ನು ಈಗ ಕಾಡುತ್ತಿರುವುದು. ಹೀಗಾಗಿ ನಮ್ಮ ರಕ್ಷಣೆಗಾಗಿ ಈಗ ವಿಶ್ವದ ಇತರ ರಾಷ್ಟ್ರಗಳ ಮೊರೆ ಹೋಗಬೇಕಾಗಿದೆ. ವಿಶ್ವಸಂಸ್ಥೆ ಮತ್ತು ಪಾಶ್ಚಿಮಾತ್ಯ ರಾಷ್ಟಗಳನ್ನು ನಂಬಿಕೊಳ್ಳುವ ಪರಿಸ್ಥಿತಿ ನಮಗೆ ಎದುರಾಗಿದೆ" ಎಂದು ಅಲೆಕ್ಸಿ ಗೊಂಚರೆಂಕೋ ಬೇಸರ ವ್ಯಕ್ತ ಪಡಿಸಿದ್ದಾರೆ. (ಚಿತ್ರ: ಪಿಟಿಐ)

 ಅಮೆರಿಕಾ ಕೂಡಾ ರಷ್ಯಾದ ವಿರುದ್ದ ಮಿಲಿಟರಿ ಕಾರ್ಯಾಚರಣೆ ನಡೆಸುವುದಿಲ್ಲ

ಅಮೆರಿಕಾ ಕೂಡಾ ರಷ್ಯಾದ ವಿರುದ್ದ ಮಿಲಿಟರಿ ಕಾರ್ಯಾಚರಣೆ ನಡೆಸುವುದಿಲ್ಲ

ನ್ಯಾಟೋ ಬೆಂಬಲವಿದೆ ಎಂದು ನಂಬಿದ್ದ ಉಕ್ರೇನಿಗೆ ಅಲ್ಲೂ ಹಿನ್ನಡೆಯಾಗಿದೆ, ಸೇನಾ ಪಡೆಗಳನ್ನು ಕಳುಹಿಸುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ನ್ಯಾಟೋ ಮುಖ್ಯಸ್ಥರು ಹೇಳಿದ್ದಾರೆ. ಅಮೆರಿಕಾ ಕೂಡಾ ರಷ್ಯಾದ ವಿರುದ್ದ ಮಿಲಿಟರಿ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಹೇಳಿದೆ. ನ್ಯಾಟೋ ದೇಶಗಳಲ್ಲಿ ಪರಮಾಣು ಅಸ್ತ್ರವಿದೆ ಎಂದು ಫ್ರಾನ್ಸ್ ಎಚ್ಚರಿಸಿದೆ. ಆದರೆ, ಇದ್ಯಾವುದಕ್ಕೂ ವ್ಲಾಡಿಮಿರ್ ಪುಟಿನ್ ಸೊಪ್ಪು ಹಾಕುತ್ತಿಲ್ಲ. ಅಮೆರಿಕಾ ಮತ್ತು ನ್ಯಾಟೋ ದೇಶಗಳನ್ನು ನಂಬಿದ್ದ ಉಕ್ರೇನಿಗೆ ಸದ್ಯ ಯಾವುದೇ ಮಿಲಿಟರಿ ಬೆಂಬಲ ಸಿಗುತ್ತಿಲ್ಲ. (ಚಿತ್ರ: ಪಿಟಿಐ)

Recommended Video

ಉಕ್ರೇನ್ ನಲ್ಲಿ ವೆಬ್ ಸೈಟ್ ಗಳು ಹ್ಯಾಕ್ ಸೃಷ್ಟಿಯಾಯ್ತು ಅಲ್ಲೋಲ ಕಲ್ಲೋಲ | Oneindia Kannada

English summary
Ukrainian Parliament Member Explains Why His Country Weak Against Russia. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X