ರಷ್ಯಾ ವಿರೋಧಿಗಳಿಂದ ಭರ್ಜರಿ ಗಿಫ್ಟ್, ಉಕ್ರೇನ್‌ಗೆ ಸಿಗಲಿದೆ 10,255 ಕೋಟಿ!

ರಷ್ಯಾ ಸೋಲಿಗೆ ಪಾಶ್ಚಿಮಾತ್ಯ ದೇಶಗಳು ಒಂದಾಗುತ್ತಿವೆ. ಅದರಲ್ಲೂ ಹೇಗಾದರೂ ಮಾಡಿ ಉಕ್ರೇನ್‌ನ ಗೆಲ್ಲಿಸಿ, ರಷ್ಯಾ ಸೋಲಿಸಬೇಕು ಎಂಬ ಹಠಕ್ಕೆ ಬಿದ್ದಿವೆ 'ನ್ಯಾಟೋ' ಒಕ್ಕೂಟದ ದೇಶಗಳು. ಇದೇ ಕಾರಣಕ್ಕೆ ಉಕ್ರೇನ್‌ಗೆ ಕೂಡ ಭರ್ಜರಿ ನೆರವು ಹರಿದು ಹರಿದು ಬರುತ್ತಿದ್ದು, ಇದೀಗ ತನ್ನ ನೆರೆಯ ದೇಶದಿಂದಲೇ ಉಕ್ರೇನ್ ಬರೋಬ್ಬರಿ 10,255 ಕೋಟಿ ರೂಪಾಯಿಯ ದೊಡ್ಡ ಮೊತ್ತದ ಉಡುಗೊರೆ ಪಡೆಯಲಿದೆ.

ಅಂದಹಾಗೆ ಸಣ್ಣ ಕಿತ್ತಾಟದಂತೆ ಶುರುವಾಗಿದ್ದ ಉಕ್ರೇನ್ VS ರಷ್ಯಾ ಯುದ್ಧವು ಇದೀಗ ಭೀಕರತೆ ಪಡೆದಿದೆ. ಲಕ್ಷಾಂತರ ಜನರ ಜೀವ ಹೋಗಿದ್ದು, ಹತ್ತಾರು ಲಕ್ಷ ಜನರ ಬದುಕು ಬೀದಿಗೆ ಬಿದ್ದಿದೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ 2 ವರ್ಷ ಮುಗಿಸಿ, 3ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ. ಈ ಸಮಯದಲ್ಲೇ ಪಾಶ್ಚಿಮಾತ್ಯ ದೇಶಗಳಿಂದ ಉಕ್ರೇನ್‌ಗೆ ಭರ್ಜರಿ ಬೆಂಬಲ ಸಿಕ್ಕಿದೆ. ಅದರಲ್ಲೂ ಈ ಯುದ್ಧವನ್ನು ಯುರೋಪ್ ಮತ್ತು ಅಮೆರಿಕ ಪರ್ಸನಲ್ ಆಗಿ ಸ್ವೀಕಾರ ಮಾಡಿದೆ. ಹೀಗಾಗಿ ಉಕ್ರೇನ್ ಪರವಾಗಿ ನಿಲ್ಲುತ್ತಿರುವ ಅಮೆರಿಕ ಮತ್ತು ಯುರೋಪ್ ಖಂಡದ ದೇಶಗಳು ದೊಡ್ಡ ಮೊತ್ತದ ಉಡುಗೊರೆ ನೀಡುತ್ತಿವೆ. ಈಗಲೂ ಅದೇ ರೀತಿ ಭರ್ಜರಿ ಹಣ ಸಿಕ್ಕಿದೆ ಉಕ್ರೇನ್‌ಗೆ.

Ukraine Will Be Get 10 255 Crore Rupees Aid From Neighbours To Fight Against Russia

ಉಕ್ರೇನ್‌ಗೆ ಸ್ವೀಡನ್ ಉಡುಗೊರೆ!

ಸ್ವೀಡನ್ ಸರ್ಕಾರ ಉಕ್ರೇನ್‌ಗೆ ಭರ್ಜರಿ ಉಡುಗೊರೆ ನೀಡಿದೆ, ಅದು ಏನೆಂದರೆ ಸುಮಾರು 123 ಕೋಟಿ ಅಮೆರಿಕನ್ ಡಾಲರ್ ಅಂದ್ರೆ ಸುಮಾರು 10,255 ಕೋಟಿ ರೂಪಾಯಿ ಮೊತ್ತದ ಭಾರಿ ದೊಡ್ಡ ನೆರವು ಘೋಷಣೆ ಮಾಡಿದೆ. ಈ ಹಿಂದೆ ಕೂಡ ಸ್ವೀಡನ್ ಸರ್ಕಾರ ಉಕ್ರೇನ್‌ಗೆ ಭರ್ಜರಿ ನೆರವು ನೀಡಿತ್ತು. ಆದ್ರೆ ಈವರೆಗೂ ನೀಡಿರುವ ನೆರವಿನ ಪ್ಯಾಕೇಜ್‌ಗಳಲ್ಲೇ ಇದು ಅತಿದೊಡ್ಡ ಪ್ಯಾಕೇಜ್ ಎನ್ನಲಾಗಿದೆ. 10,255 ಕೋಟಿ ರೂಪಾಯಿ ಮೊತ್ತದ ನೆರವಿನ ಪ್ಯಾಕೇಜ್ ಉಕ್ರೇನ್ ಸೇನೆಗೆ ಉಸಿರು ನೀಡಲಿದೆ. ಯಾಕಂದ್ರೆ ಈ ನೆರವಿನ ಪ್ಯಾಕೇಜ್‌ ಮೂಲಕ ಉಕ್ರೇನ್ ಸೇನೆಯ ಬಹುತೇಕ ಎಲ್ಲಾ ಡಿಮ್ಯಾಂಡ್ ಈಡೇರುವ ಸಾಧ್ಯತೆ ಇದೆ.

ಗನ್, ಬಾಂಬ್, ಗುಂಡು..

ಸೇನಾ ಸಲಕರಣೆ, ಶಸ್ತ್ರಾಸ್ತ್ರಗಳು, ಗನ್, ಮದ್ದು & ಗುಂಡು, ವಾಯುಪಡೆಗೆ ಬೇಕಾಗಿರುವ ರಕ್ಷಣಾ ಸಾಮಾಗ್ರಿಗಳನ್ನ ಉಕ್ರೇನ್‌ಗೆ ನೀಡಲು ಈಗ ಸ್ವೀಡನ್ ಮುಂದಾಗಿದೆ. ಇದರ ಜೊತೆಗೆ ಸಶಸ್ತ್ರ ವಾಹನಗಳನ್ನ ಕೂಡ ಉಕ್ರೇನ್‌ಗೆ ಒದಗಿಸಲಾಗುವುದು ಎಂದು ಸ್ವೀಡನ್‌ನ ಉಪ ಪ್ರಧಾನಿ ಎಬ್ಬಾ ಬುಶ್ ಮಾಹಿತಿ ನೀಡಿದ್ದಾರೆ. ಹಾಗೆಯೇ ಸ್ವೀಡನ್ ನಿರ್ಮಿಸಿರುವ ಜೆಎಎಸ್ 39 ಗ್ರಿಪನ್‌ ಜೆಟ್‌ಗಳನ್ನು ಕೂಡ ಉಕ್ರೇನ್‌ಗೆ ನೀಡಲು ಸ್ವೀಡನ್ ಸಜ್ಜಾಗಿದೆ. ಇದರ ಜೊತೆಗೆ ಅಮೆರಿಕದ ಸೂಪರ್ ಪವರ್ ಹೊಂದಿರುವ ಎಫ್‌-16 ಫೈಟರ್‌ ಜೆಟ್‌ಗಳನ್ನ ಪೂರೈಸುವ ಬಗ್ಗೆಯೂ ಈಗ ಚಿಂತನೆ ನಡೆದಿದೆ.

Ukraine Will Be Get 10 255 Crore Rupees Aid From Neighbours To Fight Against Russia

ಉಕ್ರೇನ್ ಬೆನ್ನಿಗೆ ನಿಂತ ಯುರೋಪ್

ಮೊನ್ನೆಯಷ್ಟೇ 30 ಎಫ್‌-16 ಜೆಟ್‌ಗಳನ್ನ ಉಕ್ರೇನ್‌ಗೆ ನೀಡುವುದಾಗಿ ಬೆಲ್ಜಿಯಂ ದೇಶ ಮಾತು ನೀಡಿತ್ತು. ಈ ಮೂಲಕ 'ನ್ಯಾಟೋ' ಒಕ್ಕೂಟದ & ಅಮೆರಿಕ ಬೆಂಬಲಿತ ದೇಶಗಳು ಉಕ್ರೇನ್ ದೇಶಕ್ಕೆ ಎಫ್‌-16 ಜೆಟ್‌ಗಳನ್ನ ಉಡುಗೊರೆ ರೂಪದಲ್ಲಿ ನೀಡಲು ಸಿದ್ಧತೆ ನಡೆಸಿವೆ. ಹಾಗೇ ಯುರೋಪ್ ಖಂಡದಲ್ಲಿ ಇರುವ ದೇಶಗಳು, ತಮ್ಮಲ್ಲಿ ಇರುವ ಅತ್ಯಾಧುನಿಕ ಅಸ್ತ್ರಗಳನ್ನೂ ಉಡುಗೊರೆ ರೂಪದಲ್ಲಿ ಉಕ್ರೇನ್‌ಗೆ ಕೊಡಲು ಸಿದ್ಧತೆ ನಡೆಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+