Ukraine War: ಉಕ್ರೇನ್ ಕೈಗೆ 150 ಅತ್ಯಾಧುನಿಕ ಫೈಟರ್ ಜೆಟ್ ಕೊಡಲು ಸಜ್ಜಾದ ನ್ಯಾಟೋ ದೇಶ?
ಉಕ್ರೇನ್ ಪರವಾಗಿ ಅಮೆರಿಕ ಸೇರಿದಂತೆ ನ್ಯಾಟೋ ಒಕ್ಕೂಟದ ದೇಶಗಳು ದೊಡ್ಡ ಮಟ್ಟದಲ್ಲಿಯೇ ಬೆಂಬಲ ಕೊಡುತ್ತಿವೆ. ಅದರಲ್ಲೂ ಈವರೆಗೂ ದೈತ್ಯ ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ಇಷ್ಟು ಹೋರಾಟ ತೋರಿಸಲು ಕಾರಣ ಆಗಿರುವುದೇ ಅಮೆರಿಕ ಸೇರಿದಂತೆ ನ್ಯಾಟೋ ಒಕ್ಕೂಟ. ಹೀಗೆಲ್ಲಾ ಬೆಂಬಲ ಸಿಕ್ಕಿದ್ದರೂ ರಷ್ಯಾ ವಿರುದ್ಧ ಗೆಲ್ಲಲು ಉಕ್ರೇನ್ ಕೈಯಲ್ಲಿ ಆಗುತ್ತಿಲ್ಲ. ಇಷ್ಟೆಲ್ಲದರ ನಡುವೆ ದಿಢೀರ್ ಉಕ್ರೇನ್ ಕೈಗೆ 150 ಅತ್ಯಾಧುನಿಕ ಫೈಟರ್ ಜೆಟ್ ಕೊಡಲು ಸಜ್ಜಾದ ನ್ಯಾಟೋ ದೇಶ? ಆ ಮೂಲಕ ರಷ್ಯಾ ವಿರುದ್ಧ ಹೊಸ ಅಸ್ತ್ರ ಪ್ರಯೋಗ?
ಅಂದಹಾಗೆ ನ್ಯಾಟೋ ಒಕ್ಕೂಟದ ದೇಶಗಳು ಸೇರಿ ಇದೀಗ ಉಕ್ರೇನ್‌ಗೆ ಬರೋಬ್ಬರಿ 150 ಅತ್ಯಾಧುನಿಕ ಫೈಟರ್ ಜೆಟ್ ಕೊಡಲು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ. ಇದು ರಷ್ಯಾ ಸೇನೆಯನ್ನ ಸೋಲಿಸಲು ಒಂದು ಅಸ್ತ್ರ ಎಂದು ಕೂಡ ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಇದರಿಂದ ರಷ್ಯಾ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳನ್ನು ಪ್ರಯೋಗ ಮಾಡಿದರೆ ಕಥೆ ಏನು? ಎಂಬ ಆತಂಕ ಆವರಿಸಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಇದಕ್ಕೆ ಒಪ್ಪಿಗೆ ನೀಡುತ್ತಾ? ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.

ಜೋರಾಗುತ್ತಿದೆ ಇಬ್ಬರ ನಡುವಿನ ಕದನ!
ರಷ್ಯಾ ಸಂಧಾನಕ್ಕೆ ಸಿದ್ಧವಿದ್ದರೂ ಉಕ್ರೇನ್ ಅಧ್ಯಕ್ಷ ಮಾತ್ರ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಎಡವಟ್ಟು ನಿರ್ಧಾರ ಮಾಡುತ್ತಿದ್ದು, ಯುದ್ಧದ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಉಕ್ರೇನ್ ಇದೇ ರೀತಿಯಾಗಿ ನಿಲುವು ಹೊಂದಿದ್ದರೆ ಇನ್ನೇನು ಮತ್ತಷ್ಟು ಕಠಿಣ ಪರಿಸ್ಥಿತಿ ಗ್ಯಾರಂಟಿ ಎನ್ನಲಾಗುತ್ತಿದೆ. ಇದೆಲ್ಲವನ್ನೂ ಮೀರಿ ಸ್ವತಃ ರಷ್ಯಾ ಈಗ ಸಂಧಾನ ಮಾತುಕತೆಗೆ ಸಿದ್ಧವಾಗಿರುವುದು ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಯುದ್ಧ ನಿಂತರೆ ಸಾಕು ಅಂತಾ ಇಡೀ ಜಗತ್ತು ಈಗ ಹೇಳುತ್ತಿದೆ. ಹೀಗಿದ್ದಾಗ ದಿಢೀರ್ ಭಾರಿ ದೊಡ್ಡ ಪ್ರಮಾಣದ ಅಸ್ತ್ರಗಳ ಸರಬರಾಜಿಗೆ ನ್ಯಾಟೋ ಮುಂದಾಗಿರುವುದು ಸಂಚಲನ ಸೃಷ್ಟಿಸಿದೆ.












Click it and Unblock the Notifications