ಗಾಳಿಯ ವೇಗಕ್ಕಿಂತ 5 ಪಟ್ಟು ಹೆಚ್ಚು ರಷ್ಯಾದ ಕ್ಷಿಪಣಿ ಸ್ಪೀಡ್!
ಕೀವ್, ಉಕ್ರೇನ್: ರಷ್ಯಾ ಕೋಪದಲ್ಲಿ ಕೆಂಡವಾಗಿದೆ, ತನ್ನಲ್ಲಿನ ಎಲ್ಲಾ ರೀತಿ ಅಸ್ತ್ರಗಳನ್ನು ಉಕ್ರೇನ್ ವಿರುದ್ಧ ಪ್ರಯೋಗಿಸುತ್ತಿದೆ. ಅದ್ರಲ್ಲೂ ಅಮೆರಿಕದ ಜೊತೆ ಸೇರಿ ರಷ್ಯಾಗೆ ಮಣ್ಣು ಮುಕ್ಕಿಸಲು ಉಕ್ರೇನ್ ಪ್ರಯತ್ನಿಸಿದ್ದೇ ತಡ ರಷ್ಯಾ ಅಧ್ಯಕ್ಷ ಪುಟಿನ್ ಮೈಕೊಡವಿ ನಿಂತಿದ್ದಾರೆ. ಪರಿಣಾಮ ರಷ್ಯಾ ಕಡೆಯಿಂದ ಕ್ಷಿಪಣಿಗಳ ರಾಶಿಯೇ ಉಕ್ರೇನ್ ಕಡೆಗೆ ಹಾರುತ್ತಿದ್ದು, ಉಕ್ರೇನ್‌ನ ಅಮಾಯಕ ಜನ ಬೆಚ್ಚಿಬಿದ್ದಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಮನೆ ಮೇಲೆ ಭೀಕರ ದಾಳಿ ನಡೆದ ಬಳಿಕ ರಷ್ಯಾ ತನ್ನ ಶತ್ರು ಉಕ್ರೇನ್ ಸರ್ವನಾಶಕ್ಕೆ ತೊಡೆತಟ್ಟಿ ನಿಂತಿದೆ. ಹೀಗಾಗಿಯೇ ಒಂದೇ ತಿಂಗಳಲ್ಲಿ ಬರೋಬ್ಬರಿ 9 ಬಾರಿ ಕ್ಷಿಪಣಿಗಳ ರಾಶಿಯನ್ನೇ ಉಕ್ರೇನ್ ಕಡೆಗೆ ಉಡಾಯಿಸಲಾಗಿದೆ. ರಾಶಿ ರಾಶಿ ಮಿಸೈಲ್ ಉಕ್ರೇನ್ ರಾಜಧಾನಿ ಕೀವ್ ಅನ್ನೇ ಗುರಿ ಮಾಡಿಕೊಂಡು ವಕ್ಕರಿಸುತ್ತಿವೆ. ಆದರೆ ಉಕ್ರೇನ್ ಮಾತ್ರ ಇದಕ್ಕೆಲ್ಲಾ ಜಗ್ಗುತ್ತಿಲ್ಲ, ಯಾಕೆ ಗೊತ್ತಾ? ಸಂಪೂರ್ಣ ಮಾಹಿತಿಯನ್ನ ಇಲ್ಲಿ ತಿಳಿಯೋಣ ಬನ್ನಿ.

30 ಕ್ಷಿಪಣಿಯಲ್ಲಿ 29 ಆಕಾಶದಲ್ಲೇ ಉಡೀಸ್!
ರಷ್ಯಾ ಬಳಿ ಸಾಕಷ್ಟು ರಹಸ್ಯ ಅಸ್ತ್ರಗಳು ಇವೆ, ಅದರಲ್ಲೂ ರಷ್ಯಾ ತನ್ನಲ್ಲಿ ಸಾವಿರಾರು ರಹಸ್ಯ ಕ್ಷಿಪಣಿಗಳನ್ನ (Russia Secret Weapons) ಇಟ್ಟುಕೊಂಡಿದೆ. ಇದೀಗ ಅವನ್ನೆಲ್ಲಾ ಹೊರತೆಗೆದು, ತನ್ನ ಶತ್ರು ದೇಶದ ಕಡೆ ನುಗ್ಗಿಸುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 30ಕ್ಕೂ ಹೆಚ್ಚು ಕ್ಷಿಪಣಿ ಕಳೆದ 24 ಗಂಟೆಯಲ್ಲಿ ಉಕ್ರೇನ್ ಕಡೆ ನುಗ್ಗಿಬಂದಿವೆ. ಈ ಪೈಕಿ 29 ಕ್ಷಿಪಣಿಗಳನ್ನ ಆಕಾಶದಲ್ಲೇ ಭಸ್ಮ ಮಾಡಿದ್ದೀವಿ ಅಂತಿದೆ ಉಕ್ರೇನ್ ಸೇನೆ. ಅರೆರೆ ತಿನ್ನಲು ಅನ್ನವೂ ಇಲ್ಲದೆ ಪರದಾಡುತ್ತಿದ್ದ ಉಕ್ರೇನ್‌ಗೆ ಇಂತಹ ತಂತ್ರಜ್ಞಾನ ಸಿಕ್ಕಿದ್ದು ಹೇಗೆ ಅಂದ್ರಾ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಮೆರಿಕ ಕೊಟ್ಟ ಗಿಫ್ಟ್ ಏನು?
ರಷ್ಯಾ & ಉಕ್ರೇನ್ ವಾರ್ ಶುರುವಾಗಿ 451 ದಿನ ಉರುಳಿದೆ, ಆದರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಈ ಎರಡೂ ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಇಷ್ಟುದಿನ ಉಕ್ರೇನ್ ಮೇಲೆ ಬಹುತೇಕ ಹಿಡಿತ ಸಾಧಿಸಿತ್ತು ರಷ್ಯಾ ಸೇನೆ, ಆದರೆ ಅಮೆರಿಕ ತನ್ನ ವಿನಾಶಕಾರಿ ಅಸ್ತ್ರವನ್ನು ಉಕ್ರೇನ್‌ಗೆ ಉಡುಗೊರೆ ರೂಪದಲ್ಲಿ ಕೊಟ್ಟಿತ್ತು. ಅದೇ ಉಡುಗೊರೆ ಈಗ ಉಕ್ರೇನ್ ಸಹಾಯಕ್ಕೆ ಬರುತ್ತಿದ್ದು, ರಷ್ಯಾ ಬೆಚ್ಚಿಬೀಳುತ್ತಿದೆ.

ಶಕ್ತಿಶಾಲಿ ಮಿಸೈಲ್ ನಾಶಕ!
ಅಮೆರಿಕ ಶತ್ರು ರಷ್ಯಾ ಬಗ್ಗುಬಡಿಯಲು ಎಲ್ಲ ಅಸ್ತ್ರ ಪ್ರಯೋಗಿಸುತ್ತಾ ಬಂದಿದೆ. ಅದ್ರಲ್ಲಿ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುವ ವಿಧಾನವೂ ಒಂದು. ಹೀಗೆ ಉಕ್ರೇನ್‌ಗೆ ಅಮೆರಿಕ ದಾನ ನೀಡಿದ ಗಿಫ್ಟ್ ಪೈಕಿ 'ಯುಎಸ್-ಮೇಡ್ ಪೇಟ್ರಿಯಾಟ್ ಮಿಸೈಲ್ ಡಿಫೆನ್ಸ್' (US-made Patriot missile defense) ಕೂಡ ಇದೆ. ಅಸ್ತ್ರದ ಮೂಲಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಬಹುದು & ಶತ್ರುಗಳ ಕ್ಷಿಪಣಿ ಹೊಡೆದು ಹಾಕುವುದು ಕೂಡ ಸುಲಭ.
29 ಕ್ಷಿಪಣಿ ಉಡೀಸ್ ಮಾಡಿದ ಉಕ್ರೇನ್
ರಷ್ಯಾ ವಿರುದ್ಧ ಯುದ್ಧ ಆರಂಭವಾದ ಬಳಿಕ ಉಕ್ರೇನ್ ನೆಲಕಚ್ಚಿದೆ. ಇಂತಹ ಹೊತ್ತಲ್ಲೇ ನ್ಯಾಟೋ & ಅಮೆರಿಕ ಸಿಕ್ಕಾಪಟ್ಟೆ ಸಹಾಯ ಮಾಡಿ, ಉಕ್ರೇನ್‌ಗೆ ಬೆನ್ನೆಲುಬಾಗಿವೆ. ಹೀಗಾಗಿ ಹೊಸ ಎನರ್ಜಿ ಜೊತೆಗೆ ರಣತಂತ್ರ ರೂಪಿಸಿ ರಷ್ಯಾ ವಿರುದ್ಧ ಭೀಕರ ದಾಳಿ ಆರಂಭಿಸಿರುವ ಉಕ್ರೇನ್, ರಷ್ಯಾ ಸೇನೆ ಹಾರಿಸಿದ್ದ 30 ಕ್ಷಿಪಣಿಗಳನ್ನ ತನ್ನ ಕ್ಷಿಪಣಿ ನಿರೋಧಕದ ಸಹಾಯದಿಂದ ಹೊಡೆದು ಉರುಳಿಸಿತ್ತು. ನಿನ್ನೆ ಉಕ್ರೇನ್ ರಾಜಧಾನಿ ಕೀವ್ ಮೇಲೆ ಹಾರಿಬಂದ 30 ಕ್ಷಿಪಣಿಗಳ ಪೈಕಿ 29 ಮಿಸೈಲ್‌ಗಳು ಆಕಾಶದಲ್ಲೇ ಪುಡಿಪುಡಿ ಆಗಿವೆ.

ರಷ್ಯಾ ಕೂಡ ರಣತಂತ್ರ ರೂಪಿಸಿದೆ!
ರಷ್ಯಾ ಬಳಿ ಇರುವ ವಿನಾಶಕ ಅಸ್ತ್ರಗಳನ್ನ ಆ ದೇಶ ಇನ್ನೂ ಹೊರ ತೆಗೆದಿಲ್ಲ. ಅಕಸ್ಮಾತ್ ಅದನ್ನ ಹೊರಗೆ ತೆಗೆದರೆ ಜಗತ್ತು ಸಂಕಷ್ಟ ಎದುರಿಸುತ್ತದೆ. ಈಗ ಅನಿವಾರ್ಯವಾಗಿ ಶತ್ರುವಿನ ಕ್ಷಿಪಣಿ ನಿರೋಧಕ ವ್ಯವಸ್ಥೆ ಚಿಂದಿ ಮಾಡಲು ಹೈಪರ್ ಸಾನಿಕ್ ಮಿಸೈಲ್ ಅಂದರೆ ಶಬ್ಧಕ್ಕಿಂತ ವೇಗವಾಗಿ ಚಲಿಸುವ ಕ್ಷಿಪಣಿ ಬಳಕೆ ಮಾಡಿದ ಆರೋಪ ಬಂದಿದೆ. ಕಿಂಝಲ್ ಹೈಪರ್ ಸಾನಿಕ್ ಮಿಸೈಲ್ ಶಬ್ಧಕ್ಕಿಂತಲೂ 5 ಪಟ್ಟು ವೇಗವಾಗಿ ಚಲಿಸುವ ಶಕ್ತಿ ಹೊಂದಿವೆ. ಈಗ ರಷ್ಯಾ ಮೊದಲ ಪ್ರಯತ್ನದಲ್ಲೇ ಈ ಮಿಸೈಲ್‌ಗಳನ್ನ ಬಳಸಿ ಫೇಲ್ ಆಗಿದ್ರೂ, ಬೇರೆ ದಾರಿ ಹುಡುಕುತ್ತಿದೆ.
ಬ್ರಿಟನ್, ನ್ಯಾಟೋ ಕಡೆಯಿಂದ ನೆರವು
ಉಕ್ರೇನ್ ಈ ಯುದ್ಧದಲ್ಲಿ ಗೆದ್ದರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ದೊಡ್ಡ ಗೆಲುವು ಸಿಗಲಿದೆ. ಪ್ರಮುಖವಾಗಿ ಇದು ಯುರೋಪ್ ಖಂಡದಲ್ಲಿ ಹೊಸ ಅಲೆ ಸೃಷ್ಟಿಸಿ, ಅಮೆರಿಕದ ಹಿಡಿತವನ್ನು ಬಿಗಿ ಮಾಡುವ ಸಂಭವವು ಕೂಡ ಹೆಚ್ಚಾಗಿದೆ. ಇದೇ ಕಾರಣಕ್ಕೆ ಉಕ್ರೇನ್ ನೆರವಿಗೆ ಅಮೆರಿಕ ಮಾತ್ರವಲ್ಲ ಬ್ರಿಟನ್ ಹಾಗೂ ಯುರೋಪ್ ಒಕ್ಕೂಟ ನಿಂತಿದೆ. ಅದರಲ್ಲೂ ನ್ಯಾಟೋ ಪಡೆಗಳು ಉಕ್ರೇನ್ ಗಡಿಯಲ್ಲಿ ರಹಸ್ಯವಾಗಿ ವಿನಾಶಕಾರಿ ಅಸ್ತ್ರಗಳನ್ನ ನೀಡಿ ಹೋಗುತ್ತಿರುವ ಆರೋಪ ಕೂಡ ಇದೆ.
ಭೀಕರ ಯುದ್ಧ + ಆರ್ಥಿಕ ಮಹಾ ಕುಸಿತ!
ಕೊರೊನಾ ಕಂಟಕದ ಬಳಿಕ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ, ಇದರ ನಡುವೆ ಯುದ್ಧ ಬೇರೆ ಶುರುವಾಗಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಯುರೋಪ್ ಖಂಡ ಆರ್ಥಿಕ ಕುಸಿತ ಎದುರಿಸುತ್ತಿದೆ. ಇನ್ನು ಅಮೆರಿಕದ ಪಾಡು ಕೇಳಬೇಕಿಲ್ಲ. ಈ ಕಷ್ಟದಲ್ಲೇ ಬ್ಯಾಂಕ್‌ಗಳು ಕೂಡ ಅಮೆರಿಕದಲ್ಲಿ ಬಾಗಿಲು ಹಾಕಿಕೊಂಡು ಹೋಗುತ್ತಿವೆ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ರಷ್ಯಾ ಸೋಲಿಸಿ, ಆದಷ್ಟು ಬೇಗ ಯುದ್ಧ ಮುಗಿಸುವ ಐಡಿಯಾ ಅಮೆರಿಕದ್ದು. ಆದ್ರೆ ಏನ್ ಮಾಡೋದು ರಷ್ಯಾ ಸೋಲುತ್ತಿಲ್ಲ.
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡಬೇಕು ಎಂದು ಜಗತ್ತು ಅದೆಷ್ಟೇ ಪ್ರಯತ್ನ ಮಾಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಹಾಗೇ ಇನ್ನೊಂದು ಕಡೆ ಪಾಶ್ಚಿಮಾತ್ಯ ರಾಷ್ಟ್ರಗಳು ಅಂದರೆ ಅಮೆರಿಕ, ನ್ಯಾಟೋ ಒಕ್ಕೂಟ ನೀಡುತ್ತಿರುವ ಸೇನಾ ನೆರವು, ಭಯಾನಕ ಶಸ್ತ್ರಾಸ್ತ್ರಗಳ ಉಡುಗೊರೆ ಉಕ್ರೇನ್‌ಗೆ ಡಬಲ್ ಗುಂಡಿಗೆ ನೀಡುತ್ತಿರುವುದು ಭವಿಷ್ಯದ ಭೀಕರ ಯುದ್ಧಕ್ಕೆ ನಾಂದಿ ಹಾಡಿದೆ. ಉಕ್ರೇನ್ ಛಿದ್ರ ಛಿದ್ರವಾಗಿದ್ದು, ಅಕಸ್ಮಾತ್ ರಷ್ಯಾ ಮತ್ತು ಉಕ್ರೇನ್ ವಾರ್ ನಿಂತರೂ ಪರಿಸ್ಥಿತಿ ಸರಿ ಹೋಗಲು ಇನ್ನೂ ಹತ್ತಾರು ವರ್ಷಗಳೇ ಬೇಕು.












Click it and Unblock the Notifications