40 ಮೈಲಿ ಉದ್ದದ ರಷ್ಯಾದ ಬೆಂಗಾವಲು ಪಡೆ: ಉಪಗ್ರಹ ಚಿತ್ರದಿಂದ ಬಹಿರಂಗ
ಕೀವ್, ಮಾರ್ಚ್ 01: ಉಕ್ರೇನ್‌ನ ರಾಜಧಾನಿ ಕೀವ್‌ನ ಉತ್ತರಕ್ಕೆ ರಷ್ಯಾದ ಪಡೆಗಳ ಬೆಂಗಾವಲು 40 ಮೈಲುಗಳಷ್ಟು (64 ಕಿಮೀ) ವಿಸ್ತರಿಸಿರುವುದನ್ನು ಮಂಗಳವಾರ ಉಪಗ್ರಹ ಚಿತ್ರಗಳು ತೋರಿಸಿದೆ. ಮ್ಯಾಕ್ಸರ್ ಟೆಕ್ನಾಲಜೀಸ್‌ನ ಉಪಗ್ರಹ ಚಿತ್ರಣದ ಪ್ರಕಾರ, ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕ್‌ಗಳು, ಫಿರಂಗಿ ಮತ್ತು ಬೆಂಬಲ ವಾಹನಗಳ ಬೃಹತ್ ಬೆಂಗಾವಲು ಪಡೆ ಕೀವ್‌ನತ್ತ ಆಗಮಿಸುತ್ತಿದೆ.
ಕೀವ್‌ನ ಮಧ್ಯಭಾಗದಿಂದ 17 ಮೈಲುಗಳು (25 ಕಿಲೋಮೀಟರ್) ಮತ್ತು ಸುಮಾರು 40 ಮೈಲುಗಳವರೆಗೆ ರಷ್ಯಾದ ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕ್‌ಗಳು, ಫಿರಂಗಿ ಮತ್ತು ಬೆಂಬಲ ವಾಹನಗಳು ಇರುವ ಬೃಹತ್ ಬೆಂಗಾವಲು ಪಡೆ ವಿಸ್ತರಿಸಿದೆ. ಇನ್ನು ಕೆಲವು ನಗರಗಳಲ್ಲಿ ಕಟ್ಟಡಗಳು ಹೊತ್ತಿ ಉರಿಯುತ್ತಿರುವುದು ಕೂಡಾ ಕಂಡು ಬಂದಿದೆ.
ಮ್ಯಾಕ್ಸರ್ ಚಿತ್ರಗಳು ದಕ್ಷಿಣ ಬೆಲಾರಸ್‌ನಲ್ಲಿನ ಪಡೆಗಳು ಮತ್ತು ಹೆಲಿಕಾಪ್ಟರ್ ಘಟಕಗಳ ನಿಯೋಜನೆಯನ್ನು ತೋರಿಸಿದೆ. ರಷ್ಯಾದ ಪಡೆಗಳು ಸೋಮವಾರ ಉಕ್ರೇನ್‌ನ ಎರಡನೇ ಅತಿದೊಡ್ಡ ನಗರಕ್ಕೆ ಶೆಲ್ ದಾಳಿ ಮಾಡಿದೆ. ಈ ಬೆನ್ನಲ್ಲೇ ನೂರಾರು ಟ್ಯಾಂಕ್‌ಗಳು ಮತ್ತು ಇತರ ವಾಹನಗಳ 40 ಮೈಲುಗಳ ಬೆಂಗಾವಲುಪಡೆ ರಾಜಧಾನಿ ಆವರಿಸಿದೆ.

ಇನ್ನು ಈ ಶೆಲ್ ದಾಳಿ ಬಗ್ಗೆ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, "ಈ ಸರಳ ವಿಧಾನದಿಂದ ರಷ್ಯಾ ಒತ್ತಡವನ್ನು (ಉಕ್ರೇನ್ ಮೇಲೆ) ಹಾಕಲು ಪ್ರಯತ್ನಿಸುತ್ತಿದೆ ಎಂದು ನಾನು ನಂಬುತ್ತೇನೆ," ಎಂದು ಹೇಳಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ತಡರಾತ್ರಿ ವೀಡಿಯೊ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಉಕ್ರೇನ್‌ಗೆ ಪುಟಿನ್ ಷರತ್ತು, ಉಕ್ರೇನ್‌ನಲ್ಲಿ 350 ಜನ ಬಲಿ
ಉಕ್ರೇನ್‌ನಲ್ಲಿ ರಕ್ತಪಾತ ಮುಂದುವರಿದಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಸದ್ಯಕ್ಕೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಯಾಕೆಂದರೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಎರಡನೇ ಸಂಧಾನ ಮಾತುಕತೆ ಅಪೂರ್ಣಗೊಂಡಿದೆ. ಉಭಯ ರಾಷ್ಟ್ರಗಳ ಅಧ್ಯಕ್ಷರು ಷರತ್ತುಗಳನ್ನು ವಿಧಿಸುವ ಮೂಲಕ ಸಂಧಾನಕ್ಕೆ ಬ್ರೇಕ್ ಹಾಕಿದ್ದಾರೆ. ಸಂಧಾನ ಮಾತುಕತೆ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೂರು ಷರತ್ತುಗಳನ್ನು ವಿಧಿಸಿದ್ದಾರೆ. ಮೊದಲನೇ ಷರತ್ತು ಉಕ್ರೇನ್ ಶಸ್ತ್ರ ತ್ಯಜಿಸಬೇಕು, ಎರಡನೇಯದು ಶಸಸ್ತ್ರೀಕರಣದ ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚೆ, ಮೂರನೇ ಷರತ್ತು ಉಕ್ರೇನ್ ತಟಸ್ಥ ಸ್ಥಿತಿ ಖಾತ್ರಿಪಡಿಸಬೇಕು ಎಂದು ಪುಟಿನ್ ಷರತ್ತು ವಿಧಿಸಿದ್ದಾರೆ.
ಇನ್ನೂ ಉಕ್ರೇನ್ ಅಧ್ಯಕ್ಷ ಝೆಲೆಸ್ಕಿ ಕೂಡ ಎರಡು ಪರತ್ತುಗಳನ್ನು ಹಾಕಿದ್ದಾರೆ. ಮೊದಲನೆಯದು ರಷ್ಯಾ ಕೂಡಲೇ ಕದನ ವಿರಾಮ ನೀಡಬೇಕು. ಎರಡನೇಯದು ತಕ್ಷಣ ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಷರತ್ತು ವಿಧಿಸಿದ್ದಾರೆ. ಎರಡೂ ಷರತ್ತುಗಳನ್ನು ಒಪ್ಪದ ಹಿನ್ನೆಲೆ ಸಂಧಾನ ಅಪೂರ್ಣಗೊಂಡಿದೆ ಎನ್ನಲಾಗುತ್ತಿದೆ.
ರಷ್ಯಾ ಯುದ್ದದ ಅಟ್ಟಹಾಸಕ್ಕೆ ಉಕ್ರೇನ್ ನಲ್ಲಿ ನೂರಾರು ಜನ ಬಲಿಯಾಗಿದ್ದಾರೆ. ಕಳೆದ ಗುರುವಾರ ಆರಂಭವಾದ ರಷ್ಯಾ ದಾಳಿಯಲ್ಲಿ 14 ಮಕ್ಕಳು ಸೇರಿದಂತೆ 352 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ರಷ್ಯಾದ ಫಿರಂಗಿದಳವು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ಹಲವಾರು ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಖಾರ್ಕಿವ್‌ನಲ್ಲಿ ನಡೆಯುತ್ತಿರುವ ಶೆಲ್ ದಾಳಿಯಲ್ಲಿ ಕನಿಷ್ಠ 11 ನಾಗರಿಕರು ಸಾವನ್ನಪ್ಪಿದ್ದಾರೆ. ಕಳೆದ ಗುರುವಾರ ಆಕ್ರಮಣವು ಪ್ರಾರಂಭವಾದಾಗಿನಿಂದ 14 ಮಕ್ಕಳು ಸೇರಿದಂತೆ 352 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಕೀವ್ ಹೇಳಿದೆ. ಜೊತೆಗೆ ರಷ್ಯಾದ ಆಕ್ರಮಣದ ಪ್ರಾರಂಭದಿಂದಲೂ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್‌ನ ನಿರಾಶ್ರಿತರ ವಿಭಾಗ ಹೇಳಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications