Ukraine President: ರಷ್ಯಾಗೆ ತೆರಳಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಿರಾಕರಣೆ ಸಾಧ್ಯತೆ, ಕಾರಣ ಇಲ್ಲಿದೆ

ರಷ್ಯಾ ಇದೀಗ ಯುದ್ಧ ನಿಲ್ಲಿಸಲು ಮನಸ್ಸು ಮಾಡಿದ್ದು, ತನ್ನ ಶತ್ರು ಉಕ್ರೇನ್ ಜೊತೆಗೆ ಮಾತುಕತೆ ಮೂಲಕ ಎಲ್ಲಾ ಬಗೆಹರಿಸಲು ಮುಂದಾಗಿದೆ. ಅದರಲ್ಲೂ ಕಳೆದ 4 ವರ್ಷಗಳಿಂದ ಬಡಿದಾಡುತ್ತಿರುವ ಇದೇ ರಷ್ಯಾ ಮತ್ತು ಉಕ್ರೇನ್ ಈಗಲಾದರೂ ನೆಮ್ಮದಿಯಾಗಿ ಇರಬೇಕು ಅಂತಾ ನಿರ್ಧಾರ ಮಾಡಿರುವ ರೀತಿ ಕಾಣುತ್ತಿದೆ. ಹೀಗಾಗಿಯೇ ನೇರವಾಗಿ ಉಕ್ರೇನ್ ಅಧ್ಯಕ್ಷರನ್ನೇ ಮಾಸ್ಕೋಗೆ ಕರೆಸಿ, ಮಾತುಕತೆಯ ಮೂಲಕ ಎಲ್ಲ ಬಗೆಹರಿಸಲು ರಷ್ಯಾ ನಿರ್ಧಾರ ಮಾಡಿತ್ತು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಕಾರಣಕ್ಕೆ ವಿಶೇಷ ಆಹ್ವಾನ ಕೂಡ ಪಡೆದಿದ್ದರು. ಆದರೆ ಇದೀಗ ಬೇರೆಯದ್ದೇ ಆಟ ಶುರುವಾಗಿದ್ದು, ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾಗೆ ಹೋಗುವುದೇ ಅನುಮಾನವಾಗಿದೆ.

ಉಕ್ರೇನ್ ಮತ್ತು ರಷ್ಯಾ ಆಜನ್ಮ ವೈರಿಗಳ ರೀತಿ ಕಿತ್ತಾಡುತ್ತಿದ್ದರೂ, 3 ದಶಕಗಳ ಹಿಂದೆ ಇದೇ ಉಕ್ರೇನ್ ರಷ್ಯಾ ಭಾಗವಾಗಿತ್ತು. ಆದರೆ ಎಲ್ಲಾ ಈಗ ಹಾಳಾಗಿ ಹೋಗಿದ್ದು, ಎರಡೂ ದೇಶಗಳು ಬಡಿದಾಡುತ್ತಿವೆ. ಹೀಗಿದ್ದಾಗ ಜಗತ್ತಿನ ಶಾಂತಿಗೆ ಭಂಗ ಬಂದಿದ್ದು, ಹೇಗಾದರೂ ಮಾಡಿ ಈ ಇಬ್ಬರ ನಡುವೆ ಮಾತುಕತೆ ಮಾಡಿಸಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ಟ್ರಂಪ್ ಅವರ ಆಸೆಯಾಗಿತ್ತು. ಆದರೆ ಎಲ್ಲಾ ಆಸೆಗಳು ಕೈಕೊಟ್ಟ ಸಮಯದಲ್ಲಿ, ನೇರವಾಗಿ ರಷ್ಯಾ ಬಂದು ಉಕ್ರೇನ್ ಜೊತೆಗೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಲು ನಿರ್ಧರಿಸಿತ್ತು. ಆದರೆ ದಿಢೀರ್ ಅಲ್ಲೋಲ ಕಲ್ಲೋಲ ಶುರುವಾಗಿದ್ದು, ಉಕ್ರೇನ್ ಅಧ್ಯಕ್ಷ ರಷ್ಯಾಗೆ ಹೋಗುವುದೇ ಅನುಮಾನವಾಗಿದೆ. ಇದಕ್ಕೆ ಬಲವಾದ ಕಾರಣ ಕೂಡ ಇದೆ.

Ukraine President

ಭದ್ರತೆ ಕಾರಣಕ್ಕೆ ಝೆಲೆನ್ಸ್ಕಿ ಹೋಗೋದು ಡೌಟ್?

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಇದೀಗ ಕಾಡುತ್ತಿರುವ ಪ್ರಮುಖ ಭಯ ಏನೆಂದರೆ, ರಷ್ಯಾ ರಾಜಧಾನಿ ಮಾಸ್ಕೋಗೆ ಹೋದರೆ ಎಲ್ಲಿ ತಮ್ಮ ಜೀವಕ್ಕೆ ಅಪಾಯ ಎದುರಾಗುತ್ತೋ ಎಂಬುದು. ಯಾಕೆ ಅಂದ್ರೆ ಈ ಹಿಂದೆ ಕೂಡ ಹಲವು ಘಟನೆಗಳಲ್ಲಿ ಇದೇ ರೀತಿಯಾಗಿ ರಷ್ಯಾ ನೆಲದಲ್ಲಿ ಹೊರ ದೇಶದ ರಾಜಕೀಯ ನಾಯಕರ ಮೇಲೆ ದಾಳಿಗಳು ಆಗಿದ್ದು ಉಂಟು. ಅದರಲ್ಲೂ ಆಹಾರ ಪದಾರ್ಥದಲ್ಲಿ ವಿಷ ಬೆರೆತ & ಬೇರೆ ದೇಶದ ರಾಜಕೀಯ ನಾಯಕರು ಆಸ್ಪತ್ರೆ ಸೇರಿದ್ದ ಘಟನೆಗಳು ಭಯ ಹುಟ್ಟಿಸಿದ್ದವು. ಅದನ್ನೆಲ್ಲಾ ಅಳೆದು & ತೂಗಿ ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾಗೆ ಭೇಟಿ ಕೊಡುವುದೇ ಅನುಮಾನ ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೆ ಮತ್ತೊಂದು ಕಡೆ ಯುರೋಪ್ ದೇಶಗಳು ಝೆಲೆನ್ಸ್ಕಿಗೆ ಈ ವಿಚಾರದಲ್ಲಿ ಹೋಗದೇ ಇರುವುದೇ ಒಳ್ಳೆಯದು ಎಂಬ ಸಲಹೆ ನೀಡುತ್ತಿವೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+