Russia & Ukraine: ಉಕ್ರೇನ್ ಬಂದರಿನ ಮೇಲೆ ರಷ್ಯಾ ಡೆಡ್ಲಿ ಅಟ್ಯಾಕ್?

ಕೀವ್: ರಷ್ಯಾ ಸೇನೆ ಉಕ್ರೇನ್ ವಿರುದ್ಧ ಮತ್ತೆ ಭೀಕರ ದಾಳಿಗೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಉಕ್ರೇನ್‌ನ ಬಂದರು ಭಾಗದ ಮೇಲೆ ರಷ್ಯಾ ಪಡೆಗಳು ಭೀಕರ ಡ್ರೋನ್ ದಾಳಿ ನಡೆಸಿದ್ದು, ಈ ದಾಳಿಯಿಂದ ಉಕ್ರೇನ್‌ಗೆ ಸರಬರಾಜು ಮಾಡುತ್ತಿದ್ದ ವಸ್ತು ಹಾಗೂ ಹಡಗುಗಳಿಗೆ ಹಾನಿಯಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇದು ಉಕ್ರೇನ್ & ರಷ್ಯಾ ನಡುವಿನ ಯುದ್ಧಕ್ಕೆ ಕಿಚ್ಚು ಹೊತ್ತಿಸಿದೆ.

ಹೌದು, ಕಳೆದ ಒಂದು ತಿಂಗಳಿಂದ ಉಕ್ರೇನ್ ಬಂದರು ಭಾಗಗಳು ನರಕವಾಗಿ ಬದಲಾಗಿವೆ. ಕಪ್ಪು ಸಮುದ್ರದ ಮೂಲಕ ಉಕ್ರೇನ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಂದರು ಒಡೆಸಾ ಮೇಲೆ ರಣಭೀಕರ ದಾಳಿ ನಡೆಸಲಾಗಿದೆ. ರಷ್ಯಾ ಇದೇ ನಗರ ಟಾರ್ಗೆಟ್ ಮಾಡುತ್ತಿದೆ ಎಂಬ ಗಂಭೀರ ಆರೋಪದ ಮಧ್ಯೆ ಮತ್ತೊಮ್ಮೆ ಅಟ್ಯಾಕ್ ಆಗಿದೆ. ಉಕ್ರೇನ್‌ನಿಂದ ಕಪ್ಪು ಸಮುದ್ರದ ಮಾರ್ಗ ಅನಿವಾರ್ಯವಾಗಿತ್ತು. ಇಲ್ಲಿಂದಲೇ ಉಕ್ರೇನ್‌ಗೆ ಅಗತ್ಯ ಇರುವ ದಿನನಿತ್ಯದ ವಸ್ತು, ಆಹಾರ ಪದಾರ್ಥಗಳು ಸರಬರಾಜು ಆಗುತ್ತಿವೆ. ಆದ್ರೆ ಕಳೆದ ಒಂದು ತಿಂಗಳಿಂದ ಉಕ್ರೇನ್ ಬಂದರು ಪ್ರದೇಶ ಅಕ್ಷರಶಃ ನರಕವಾಗಿ ಬದಲಾಗಿದೆ.

Ukraine once again alleged that their ports attacked by Russia

ಉಕ್ರೇನ್ ಜೊತೆಗಿನ ರಷ್ಯಾ ಒಪ್ಪಂದ ಉಡೀಸ್!

ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ಭೀಕರಗೊಳಿಸಿದ್ದ ರಷ್ಯಾ, ಕಳೆದ ತಿಂಗಳಷ್ಟೇ ತನ್ನ ಪ್ರಮುಖ ಒಪ್ಪಂದ ರದ್ದು ಮಾಡಿತ್ತು. ಕಪ್ಪು ಸಮುದ್ರದ ಮಾರ್ಗವಾಗಿ ಆಫ್ರಿಕಾ ಸೇರಿದಂತೆ ಮಧ್ಯಪ್ರಾಚ್ಯ ಹಾಗೂ ಏಷ್ಯಾ ದೇಶಗಳಿಗೆ ಆಹಾರ ಧಾನ್ಯಗಳ ಸಾಗಾಟಕ್ಕೆ ನೀಡಿದ್ದ ಅನುಮತಿ ರದ್ದು ಮಾಡಿತ್ತು. ಉಕ್ರೇನ್ ವಿರುದ್ಧ ರಷ್ಯಾ ಇಂತಹ ಕಠಿಣ ನಿಲುವು ತೆಗೆದುಕೊಂಡ ಬೆನ್ನಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಉಕ್ರೇನ್‌ನ ಪ್ರತಿ ಪೋರ್ಟ್‌ಗಳನ್ನು ಪುಡಿ ಪುಡಿ ಮಾಡಿರುವ ಆರೋಪ ಕೂಡ ಕೇಳಿಬಂದಿತ್ತು. ಹೀಗಾಗಿ ಉಕ್ರೇನ್ ಬೇರೆ ಬೇರೆ ಜಲಮಾರ್ಗ ಹುಡುಕಿದ್ದು ಆ ಹೊಸ ಮಾರ್ಗದ ಮೇಲೂ ರಷ್ಯಾ ದಾಳಿ ನಡೆಸಿರುವ ಆರೋಪ ಈಗ ಕೇಳಿಬಂದಿದೆ.

ಸಾಮಾನ್ಯ ಜನರ ಬದುಕು ಬೀದಿಗೆ

ರಷ್ಯಾ ಮತ್ತು ಉಕ್ರೇನ್ ತಿಕ್ಕಾಟದಲ್ಲಿ ಸಾಮಾನ್ಯ ಜನ ಪರದಾಡುತ್ತಿದ್ದಾರೆ. ಯುದ್ಧ ಶುರುವಾದ ನಂತರ ಆಹಾರದ ಅಭಾವ ಎದುರಾಗಿರುವ ಸಂದರ್ಭದಲ್ಲೇ ಕಿರಿಕ್ ಜೋರಾಗಿದೆ. ಅದರಲ್ಲೂ ಬಂದರು ನಗರಗಳ ಮೇಲೆ ತೀವ್ರವಾಗಿ ದಾಳಿ ನಡೆಯುತ್ತಿರುವ ಕಾರಣ ಉಕ್ರೇನ್‌ಗೆ ಸರಬರಾಜು ಮಾಡುತ್ತಿದ್ದ ವಸ್ತುಗಳು ಕೂಡ ನಿಂತು ಹೋಗಿವೆ. ಈಗ ಅಮೆರಿಕ ಮತ್ತು ನ್ಯಾಟೋ ಒಕ್ಕೂಟ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನ ಇಡೀ ಜಗತ್ತೇ ಕಾದು ನೋಡುತ್ತಿದೆ. ಆದರೆ ಈ ನಿರೀಕ್ಷೆ ಕಳೆದ ಒಂದು ತಿಂಗಳಿಂದ ಬರೀ ನಿರೀಕ್ಷೆಯಾಗಿಯೇ ಉಳಿದಿರುವುದು ದುರಂತ.

Ukraine once again alleged that their ports attacked by Russia

ಅಮೆರಿಕ ವಿರುದ್ಧ ರಷ್ಯಾ ರಣತಂತ್ರ?

ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್‌ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡುತ್ತಿದೆ. ಇಷ್ಟು ಸಾಲದು ಎಂಬಂತೆ ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್‌ರ ಆಪ್ತರೇ ಈ ಮಾಹಿತಿ ನೀಡಿದ್ದರು. 10 ವರ್ಷ ಕಳೆದರೂ ರಷ್ಯಾ & ಉಕ್ರೇನ್ ತಿಕ್ಕಾಟ ನಿಲ್ಲಲ್ಲ ಎಂದಿದ್ದರು. ಈ ಕಾರಣಕ್ಕೆ ಅಮೆರಿಕ ಮತ್ತು ನ್ಯಾಟೋ ಪಡೆಗಳು ಕೂಡ ರಷ್ಯ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ. ಈ ನಡುವೆ ರಷ್ಯಾ ದಾಳಿಯನ್ನು ಮತ್ತಷ್ಟು ಭೀಕರಗೊಳಿಸಿದ್ದು, ಉಕ್ರೇನ್ ಹೃದಯ ಭಾಗಗಳಿಗೆ ಆಘಾತ ನೀಡುತ್ತಿದೆ.

Ukraine once again alleged that their ports attacked by Russia

ರಷ್ಯಾ ಡ್ರೋನ್ ದಾಳಿ ನಡೆಸಿರುವ ಬಗ್ಗೆ ಉಕ್ರೇನ್ ಆರೋಪ ಮಾಡಿದ್ದು ಮತ್ತೊಮ್ಮೆ ತನ್ನ ಬಂದರು ಪ್ರದೇಶ ರಕ್ಷಿಸಲು ಮನವಿ ಮಾಡಿದೆ. ಈ ಮಧ್ಯೆ ಅಗತ್ಯ ವಸ್ತುಗಳ ಪೂರೈಕೆಯು ತಡವಾಗುತ್ತಿರುವ ಬಗ್ಗೆ ಆರೋಪಿಸಿದೆ. ಅತ್ತ ರಷ್ಯಾ ಕೂಡ ಉಕ್ರೇನ್ ವಿರುದ್ಧ ಪದೇ ಪದೆ ಆರೋಪ ಮಾಡುತ್ತಿದ್ದು, ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಲು ಯತ್ನಿಸುತ್ತಿದೆ ಎನ್ನುತ್ತಿದೆ. ಹೀಗೆ ಇಬ್ಬರೂ, ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾ ದಾಳಿ & ಪ್ರತಿದಾಳಿ ನಡೆಸುತ್ತಿರುವುದು ದುರಂತವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+