ಅಮೆರಿಕದ ಡಿಮ್ಯಾಂಡ್‌ಗೆ ಜೈ ಎಂದ ಉಕ್ರೇನ್: ಮುಂದೆ ಇದೆ ಮಾರಿಹಬ್ಬ!

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಬಂದ ನಂತರ ಎಲ್ಲಾ ಉಲ್ಟಾ ಆಗಿದೆ. ಜೋ ಬೈಡನ್ ಮಾತು ಕೇಳಿ ರಷ್ಯಾ ವಿರುದ್ಧ ಪ್ರತಿದಾಳಿ ನಡೆಸುತ್ತಿದ್ದ ಉಕ್ರೇನ್ ಈಗ ಖಾಲಿ ಕೈ ಆಗಿದೆ. ಹೀಗಾಗಿ ಯುದ್ಧ ಸೋಲುವ ಭಯದಲ್ಲಿ ನರಳಿದೆ ಉಕ್ರೇನ್. ಇಂತಹ ಸಮಯದಲ್ಲೇ ಅತ್ತ ಅಮೆರಿಕ ಕೂಡ ಉಕ್ರೇನ್ ಎದುರು ಮಹತ್ವದ ಬೇಡಿಕೆ ಇಟ್ಟಿತ್ತು. ಅದಕ್ಕೆ ಇದೀಗ ಉಕ್ರೇನ್ ಒಪ್ಪಿಗೆ ಸೂಚಿಸಿದೆ.

ಉಕ್ರೇನ್ ಈಗ ಸೋತು ಹೋಗಿದ್ದು, ಸಾಯುವುದು ಬಾಕಿ ಉಳಿದಿದೆ ಅನ್ನೋ ವಿಡಂಬನೆ ಶುರು ಆಗಿದೆ. ಯಾಕಂದ್ರೆ ರಷ್ಯಾ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಬ್ರೇಕ್ ಹಾಕಿ, ಶಾಂತಿ ಒಪ್ಪಂದ ಮಾಡಿಕೊಳ್ಳಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮುಂದೆ ಬರುತ್ತಿಲ್ಲ ಎಂಬ ಆರೋಪವೂ ಇದೆ. ಇಷ್ಟೆಲ್ಲಾ ಗೊಂದಲದ ನಡುವೆ ಅಮೆರಿಕ ನೀಡುತ್ತಿದ್ದ ಅನುದಾನ ಕೂಡ ನಿಂತು ಹೋಗಿದ್ದು, ದಾರಿ ಕಾಣದೆ ನರಳುತ್ತಿದ್ದಾರೆ ಉಕ್ರೇನ್ ಜನ. ಇದು ಸಾಲದು ಎನ್ನುವಂತೆ ತಾನು ಸಹಾಯ ಮಾಡಬೇಕು ಅಂದ್ರೆ ನಮಗೆ ನಿಮ್ಮ ಸಂಪನ್ಮೂಲ ನೀಡಿ ಅಂತಾ ಬೇಡಿಕೆ ಇಟ್ಟಿತ್ತು ಅಮೆರಿಕ!

Ukraine official confirms a new minerals deal with the US

ಅಮೆರಿಕ ಇಟ್ಟ ಡಿಮ್ಯಾಂಡ್‌ಗೆ ಗ್ರೀನ್ ಸಿಗ್ನಲ್!

ಉಕ್ರೇನ್ ವಿಶಾಲವಾದ ದೇಶವಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಅದಿರು & ನೈಸರ್ಗಿಕವಾದ ಸಂಪನ್ಮೂಲ ಈ ದೇಶದಲ್ಲಿ ಲಭ್ಯವಿದೆ. ಹೀಗಿದ್ದಾಗ ರಷ್ಯಾ ವಿರುದ್ಧದ ಹೋರಾಟದಲ್ಲಿ ನಾವು ಸಹಾಯ ಮಾಡಬೇಕು ಅಂದರೆ ನಿಮ್ಮ ಬಳಿ ಇರುವ ಅದಿರು & ಸಂಪನ್ಮೂಲ ನೀಡಬೇಕು ಎಂಬ ಬೇಡಿಕೆ ಇಟ್ಟಿತ್ತು ಅಮೆರಿಕ. ಹೀಗೆ ಡೊನಾಲ್ಡ್ ಟ್ರಂಪ್ ಇಟ್ಟ ಬೇಡಿಕೆ ಬಗ್ಗೆ ಚಿಂತನೆ ನಡೆಸಿ, ಅಳೆದು ತೂಗಿ ಓಕೆ ಎಂದಿದೆ ಉಕ್ರೇನ್. ಹೀಗಾಗಿ ಉಕ್ರೇನ್ ನೆಲದಲ್ಲಿ ಇರುವ ಸಂಪನ್ಮೂಲ ಅಮೆರಿಕದ ಪಾಲಾಗುವುದು ಗ್ಯಾರಂಟಿ ಆಗಿದೆ.

ಈಗಲಾದರೂ ಸಹಾಯ ಮಾಡುತ್ತಾ ಅಮೆರಿಕ?

ಉಕ್ರೇನ್‌ನ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಅಮೆರಿಕ ಇಟ್ಟ ಡಿಮ್ಯಾಂಡ್‌ಗೆ ಓಕೆ ಅಂತಾ ಹೇಳಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕೈಗೊಂಡಿರುವ ನಿರ್ಧಾರಕ್ಕೆ ವಿರೋಧ ಕೂಡ ಈಗ ವ್ಯಕ್ತವಾಗಿದ್ದು, ಭಾರಿ ದೊಡ್ಡ ತಿರುವು ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಅತ್ತ ರಷ್ಯಾ ಸೇನೆ ಭೀಕರವಾಗಿ ಉಕ್ರೇನ್ ವಿರುದ್ಧ ದಾಳಿ ಮಾಡುವಾಗಲೇ ಅಮೆರಿಕ ಈ ರೀತಿಯ ಬೇಡಿಕೆ ಇಟ್ಟಿತ್ತು. ಅಮೆರಿಕ ಇಟ್ಟ ಡಿಮ್ಯಾಂಡ್‌ಗೆ ಉಕ್ರೇನ್ ಒಪ್ಪಿದ್ದು, ಯುದ್ಧದಲ್ಲಿ ಸಹಾಯ ಸಿಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+