ಉಕ್ರೇನ್ ನಿರ್ಧಾರ ಕಂಡು ಬೆಚ್ಚಿಬಿದ್ದ ಅಮೆರಿಕ, ಟ್ರಂಪ್ ಮುಂದಿನ ನಡೆ ಏನು?
ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್‌ಗೆ ಕೈಯಲ್ಲಿ ಕಾಸು ಇಲ್ಲದೆ ನರಳಾಟವೇ ಶುರು ಆಗಿದೆ. ಇದರ ಜೊತೆಗೆ ಯುದ್ಧಕ್ಕೆ ಬೇಕಾದ ಅಸ್ತ್ರಗಳ ಕೊರತೆ ಕೂಡ ಕಾಡುತ್ತಿದ್ದು, ಎಲ್ಲವೂ ಅಯೋಮಯ ಎನ್ನುವಂತೆ ಆಗಿತ್ತು. ಆದರೆ ಇದೇ ಸಮಯದಲ್ಲಿ ಅಮೆರಿಕ ಒಂದು ದೊಡ್ಡ ಡಿಮ್ಯಾಂಡ್ ಮುಂದಿಟ್ಟು ಸಹಾಯ ಮಾಡುವ ಭರವಸೆ ನೀಡಿತ್ತು. ಅಲ್ಲದೆ ಇದು ಒಂದು ಜಾಣ ನಡೆ ಎನ್ನಲಾಗಿತ್ತು. ಆದರೆ ಉಕ್ರೇನ್ ಈಗ ರಂಗೋಲಿ ಕೆಳಗೆ ತೂರಿ, ಜಗತ್ತಿನ ದೊಡ್ಡಣ ಅಮೆರಿಕಗೆ ಶಾಕ್ ನೀಡಿದೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಸಹಾಯ ಮಾಡಲು ಡಿಮ್ಯಾಂಡ್ ಇಟ್ಟಿದ್ದರು. ಉಕ್ರೇನ್ ವಿಶಾಲವಾದ ದೇಶವಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಅದಿರು & ನೈಸರ್ಗಿಕವಾದ ಸಂಪನ್ಮೂಲ ಈ ದೇಶದಲ್ಲಿ ಲಭ್ಯವಿದೆ. ಹೀಗಿದ್ದಾಗ ರಷ್ಯಾ ವಿರುದ್ಧದ ಹೋರಾಟದಲ್ಲಿ ನಾವು ಸಹಾಯ ಮಾಡಬೇಕು ಅಂದರೆ ನಿಮ್ಮ ಬಳಿ ಇರುವ ಅದಿರು & ಸಂಪನ್ಮೂಲ ನೀಡಬೇಕು ಎಂಬ ಬೇಡಿಕೆ ಇಟ್ಟಿತ್ತು ಅಮೆರಿಕ. ಹೀಗೆ ಡೊನಾಲ್ಡ್ ಟ್ರಂಪ್ ಇಟ್ಟ ಬೇಡಿಕೆ ಬಗ್ಗೆ ಚಿಂತನೆ ನಡೆಸಿ, ಅಳೆದು ತೂಗಿ ಓಕೆ ಎಂದಿದೆ ಉಕ್ರೇನ್. ಆದರೆ ಉಕ್ರೇನ್ ಇದಕ್ಕೆ ಒಪ್ಪುವುದಿಲ್ಲ ಎಂಬ ನಿರೀಕ್ಷೆ ಅಮೆರಿಕದ್ದಾಗಿತ್ತು!

ಅಮೆರಿಕದ ಮುಂದಿನ ನಡೆ ಏನು?
ಹೌದು, ರಷ್ಯಾ ಜೊತೆಗೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡು ಇದೀಗ ಹೊಸ ಯುಗ ಆರಂಭ ಮಾಡಲು ಡೊನಾಲ್ಡ್ ಟ್ರಂಪ್ ಸಜ್ಜಾಗಿದ್ದಾರೆ. ಆದರೆ ಈ ರೀತಿ ದಿಢೀರ್ ಅಂತಾ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅಮೆರಿಕ ಇಟ್ಟ ಡಿಮ್ಯಾಂಡ್‌ಗೆ ಒಪ್ಪಿದ್ದು ದೊಡ್ಡ ಸಂಚಲನವೇ ಸೃಷ್ಟಿ ಆಗುವಂತೆ ಮಾಡಿದೆ. ಅಲ್ಲದೆ ಇಂತಹ ಸಮಯದಲ್ಲಿ ರಷ್ಯಾ ಕೈಬಿಟ್ಟು ಮತ್ತೊಮ್ಮೆ ಉಕ್ರೇನ್ ಕೈ ಹಿಡಿಯುತ್ತಾ ಅಮೆರಿಕ? ಎನ್ನುವ ಅನುಮಾನ ಮೂಡಿದೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ರಷ್ಯಾ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದು ಎಲ್ಲವೂ ಈಗ ದೊಡ್ಡ ಗೊಂದಲ ಸೃಷ್ಟಿ ಮಾಡಿದೆ.












Click it and Unblock the Notifications