Ukraine War: ಅಮೆರಿಕದ ಮುಂದೆ ಮಂಡಿಯೂರಿದ ಉಕ್ರೇನ್‌, ಖನಿಜ ಬಾಚಿಕೊಂಡ ಟ್ರಂಪ್!

ಏನಾದರೂ ಮಾಡಬೇಕು ಎಂದುಕೊಂಡರೆ ಅಮೆರಿಕ ಮಾಡದೆ ಬಿಡುವುದಿಲ್ಲ. ಅದಕ್ಕೆ ಮತ್ತೊಂದು ಉದಾಹರಣೆ ಇದೀಗ ಉಕ್ರೇನ್‌. ಉಕ್ರೇನ್‌ಗೆ ನೆರವು ನೀಡಬೇಕು ಎಂದಾದರೆ ಅಲ್ಲಿನ ಖನಿಜ ಸಂಪತ್ತು ಪ್ರದೇಶವನ್ನು ನಮಗೆ ಬಿಟ್ಟುಕೊಡಬೇಕು ಎಂದು ಅಮೆರಿಕ ಪಟ್ಟು ಹಿಡಿದಿತ್ತು. ಅಲ್ಲದೆ ಈ ಸಂಬಂಧ ಈಚೆಗೆ ಅಮೆರಿಕದ ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ನಡುವೆ ವಾಕ್ಸಮರ ಸಹ ನಡೆದಿತ್ತು. ಅಮೆರಿಕ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಉಕ್ರೇನ್‌ ತನ್ನ ಅಸಮಾಧಾನ ದಾಖಲಿಸಿತ್ತು. ಇದೀಗ ಉಕ್ರೇನ್‌ ಅಮೆರಿಕದ ಮುಂದೆ ಮಂಡಿಯೂರಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡುವ ಸಂದರ್ಭದಲ್ಲಿಯೇ ನಾನು ಅಧಿಕಾರಕ್ಕೆ ಬಂದರೆ ವಿವಿಧ ದೇಶಗಳ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಬ್ರೇಕ್‌ ಹಾಕುತ್ತೇನೆ ಎಂದು ಹೇಳಿದ್ದರು. ಇದೀಗ ಈಗಾಗಲೇ ಇರಾನ್‌ ಹಾಗೂ ಇಸ್ರೇಲ್‌ನ ನಡುವೆ ಶಾಂತಿ ಒಪ್ಪಂದ ಆಗಿದೆ. ಇದೀಗ ಉಕ್ರೇನ್‌ ಹಾಗೂ ರಷ್ಯಾದ ನಡುವೆಯೂ ಯುದ್ಧಕ್ಕೆ ಬ್ರೇಕ್‌ ಹಾಕಬೇಕು ಎಂದು ಡೊನಾಲ್ಡ್‌ ಟ್ರಂಪ್ ಅವರು ಸಾಹಸಪಡುತ್ತಿದ್ದಾರೆ. ಇದರ ನಡುವೆ ಉಕ್ರೇನ್‌ನಿಂದ ಲಾಭ ಮಾಡಿಕೊಳ್ಳುವುದಕ್ಕೂ ಡೊನಾಲ್ಡ್‌ ಟ್ರಂಪ್‌ ಅವರು ಖತರ್ನಾಕ್ ಪ್ಲಾನ್‌ ಮಾಡಿಕೊಂಡಿದ್ದಾರೆ.

Ukraine kneeling in front of United States and Trump is Mineral Comb

ಅಮೆರಿಕಗೆ ಪತ್ರ ಬರೆದ ಉಕ್ರೇನ್‌: ಅಮೆರಿಕದ ವಿರುದ್ಧ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಕತ್ತಿ ಮಸಿಯುತ್ತಿದ್ದಾರೆ ಎನ್ನುವಾಗಲೇ ಅಮೆರಿಕಗೆ ಉಕ್ರೇನ್‌ ಅಧ್ಯಕ್ಷ ಪತ್ರ ಬರೆದಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ರಷ್ಯಾದೊಂದಿಗೆ ಸುದೀರ್ಘ ಅವಧಿಯಿಂದ ನಡೆದಿರುವ ಯುದ್ಧದಲ್ಲಿ ಉಕ್ರೇನ್‌ಗೆ ಬೆಂಬಲ ನೀಡಿರುವುದಕ್ಕೆ ಧನ್ಯವಾದ. ಭವಿಷ್ಯದಲ್ಲಿಯೂ ನಾವು ಅಮೆರಿಕದ ಬೆಂಬಲವನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಅಮೆರಿಕಗೆ ಪತ್ರ ಬರೆದಿದ್ದಾರೆ ಎಂದು ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ.

ಅಲ್ಲದೆ ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ಸಿದ್ಧವಿರುವುದಾಗಿ ಹೇಳಿದ್ದಾರೆ ಅಂತ ಟ್ರಂಪ್‌ ಹೇಳಿದ್ದಾರೆ. ಉಕ್ರೇನ್ - ರಷ್ಯಾದೊಂದಿಗೆ ಸಾಧ್ಯವಾದಷ್ಟು ಬೇಗ ಯುದ್ಧ ನಿಲ್ಲಿಸಬೇಕು. ಅಲ್ಲದೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಹೇಳಲಾಗಿತ್ತು. ಇದೀಗ ಉಕ್ರೇನ್‌ ಅಪರೂಪದ ಖನಿಜ ಭೂಮಿಯನ್ನು ಅಮೆರಿಕಗೆ ಬಿಟ್ಟುಕೊಡುವುದಕ್ಕೆ ಉಕ್ರೇನ್‌ ಕೊನೆಗೂ ಮುಂದಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಈಗಾಗಲೇ ಯುದ್ಧದಿಂದ ಭರ್ಜರಿತವಾಗಿರುವ ಉಕ್ರೇನ್‌ ಹಾಗೂ ರಷ್ಯಾ ಎರಡೂ ದೇಶಗಳಿಗೂ ಯುದ್ಧ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಎರಡೂ ದೇಶಗಳು ಪ್ರತಿಷ್ಠೆಯನ್ನು ಪ್ರದರ್ಶನ ಮಾಡುತ್ತಿವೆ. ಇದೀಗ ನಾವು ಶಾಶ್ವತ ಶಾಂತಿಯನ್ನು ನಿರೀಕ್ಷಿಸುತ್ತಿದ್ದೇವೆ. ಬದಲಾದ ಅಮೆರಿಕ ನಾಯಕತ್ವದಲ್ಲಿ ಮುಂದುವರಿಯಲು ನಾವು ಸಿದ್ಧ ಎಂದ ಉಕ್ರೇನ್‌ ಹೇಳಿದೆ. ಉಕ್ರೇನ್ ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಅಮೆರಿಕ ನಮಗೆ ಮಾಡಿರುವ ಸಹಾಯದ ಬಗ್ಗೆ ನಮಗೆ ಗೌರವ ಇದೆ. ಹೀಗಾಗಿ, ಯಾವುದೇ ಸಮಯದಲ್ಲಾದರೂ ಖನಿಜ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ಉಕ್ರೇನ್‌ ಅಧ್ಯಕ್ಷ ಅಮೆರಿಕಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಟ್ರಂಪ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+