ಉಕ್ರೇನ್ ನೆಲದಲ್ಲಿ ಭಾರಿ ಬದಲಾವಣೆ: ಉಕ್ರೇನ್ ಅಧ್ಯಕ್ಷನ ಕಿತಾಪತಿ ಅಂತಿದೆ ರಷ್ಯಾ!
ಯುರೋಪ್ ಜನರಿಗೆ ನೆಮ್ಮದಿ ಇಲ್ಲವಾಗಿದೆ, ಯಾಕಂದ್ರೆ ರಷ್ಯಾ & ಉಕ್ರೇನ್‌ನ ನಡುವೆ ಯುದ್ಧ ಶುರುವಾದ ನಂತರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈಗಾಗಲೇ ಲಕ್ಷ ಲಕ್ಷ ಅಮಾಯಕರು ರಷ್ಯಾ & ಉಕ್ರೇನ್ ಯುದ್ಧಕ್ಕೆ ಬಲಿಯಾಗಿದ್ದಾರೆ. ಹೀಗಿದ್ದಾಗ ಉಕ್ರೇನ್ ಸರ್ಕಾರದಲ್ಲಿ ದಿಢೀರ್ ದೊಡ್ಡ ದೊಡ್ಡ ಸ್ಥಾನಗಳು ಬದಲಾಗಿ ಹೋಗಿವೆ. ಅತ್ತ ಉಕ್ರೇನ್ ಪರ ಯುದ್ಧ ಮಾಡುತ್ತಿರುವ ಸೈನಿಕರಿಗೂ ಗೊಂದಲ ಶುರುವಾಗಿದ್ದು, ರಷ್ಯಾ ಈ ಕುರಿತು ಏನು ಹೇಳಿದೆ ಗೊತ್ತಾ?
ಉಕ್ರೇನ್ ದೇಶದಲ್ಲಿ ಇದೀಗ ರಷ್ಯಾ ಘೋರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಉಕ್ರೇನ್‌ನ ನೆಲ ಕೂಡ ನಲುಗಿ ಹೋಗಿದೆ. ಇದೇ ಸಮಯದಲ್ಲಿ ಉಕ್ರೇನ್ ಸರ್ಕಾರದ ಮೇಲೆ ಕೂಡ ಈ ವಿಚಾರದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಯಾವ ಸಮಯದಲ್ಲಿ ಏನು ಮಾಡಬೇಕು? ಎಂಬುದೇ ತಿಳಿಯದ ಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದಾಗಲೇ ಉಕ್ರೇನ್ ಸರ್ಕಾರದ ಪ್ರಮುಖ ಪ್ರಮುಖ ವ್ಯಕ್ತಿಗಳು ಇದೀಗ ರಾಜೀನಾಮೆ ಪರ್ವ ಆರಂಭ ಮಾಡಿದ್ದಾರೆ. ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಇದೀಗ ರಾಜೀನಾಮೆ ಕೊಟ್ಟು ಕೈತೊಳೆದುಕೊಂಡಿದ್ದು, ಸರ್ಕಾರ ಪುನರ್ ರಚನೆಗೂ ಮೊದಲೇ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಭಯದಲ್ಲಿ ಉಕ್ರೇನ್ ನಾಯಕರು?
ರಷ್ಯಾ ಘೋರವಾಗಿ ದಾಳಿ ಮಾಡುತ್ತಿರುವ ಸಮಯದಲ್ಲೇ ಆತಂಕ ಕೂಡ ಆವರಿಸಿದೆ. ಅದು ಯಾವ ಮಟ್ಟಿಗೆ ಅಂದ್ರೆ ರಷ್ಯಾ ಇದೇ ರೀತಿ ದಾಳಿ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಸರಿ ಮಾಡಲು ಆಗದ ಹಂತಕ್ಕೆ ಬರಬಹುದು. ಇದೇ ಕಾರಣಕ್ಕೆ ಉಕ್ರೇನ್ ರಾಜಕೀಯ ವ್ಯಕ್ತಿಗಳು ನಲುಗಿ ಹೋಗಿದ್ದಾರೆ. ಮತ್ತೊಂದು ಕಡೆ ಸರ್ಕಾರದಲ್ಲಿ ಕೂಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಯಾವ ಕ್ಷಣದಲ್ಲಿ ಏನಾಗುತ್ತೋ? ಎಂಬ ಚಿಂತೆ ಎದುರಾಗಿದೆ.
ರಷ್ಯಾ ಅಬ್ಬರಕ್ಕೆ ಉಕ್ರೇನ್ ಉಡೀಸ್?
ಒಟ್ನಲ್ಲಿ ರಷ್ಯಾ & ಉಕ್ರೇನ್ ಮಧ್ಯೆ ತಿಕ್ಕಾಟ ಪ್ರತಿಕ್ಷಣ ಹೆಚ್ಚಾಗುತ್ತಲೇ ಇದ್ದು, ಜನ ನಲುಗಿದ್ದಾರೆ. ಅದ್ರಲ್ಲೂ ರಷ್ಯಾ ಮಿಲಿಟರಿ ಇದೀಗ ಉಕ್ರೇನ್ ನೆಲದ ಮೇಲೆ ಬಾಂಬ್‌ಗಳ ಮಳೆ ಸುರಿಸುತ್ತಾ ತನ್ನ ಆಕ್ರೋಶ ಹೊರ ಹಾಕುತ್ತಿದೆ. ಈ ಸಮಯದಲ್ಲಿ ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳೂ ಬೆಂಬಲಕ್ಕೆ ನಿಂತಿವೆ ಎಂಬುದು ರಷ್ಯಾ ಆರೋಪ. ರಷ್ಯಾ ಸೇನೆ ಈ ಬಗ್ಗೆ ಮತ್ತಷ್ಟು ಆಕ್ರೋಶಗೊಂಡು ದಾಳಿ ತೀವ್ರತೆ ಹೆಚ್ಚು ಮಾಡಿದೆ. ಹೀಗೆ ಇಬ್ಬರ ಮಧ್ಯೆ ನಡೆಯುತ್ತಿರುವ ಗಲಾಟೆ ಪರಿಣಾಮ ಸಾಮಾನ್ಯ ಜನರು ನಲುಗಿ ಹೋಗಿದ್ದಾರೆ.












Click it and Unblock the Notifications