Russia & Ukraine: ಗೆಲುವು ಇಲ್ಲ, ನೆಲವೂ ಇಲ್ಲ... ರಷ್ಯಾ ಎದುರು ಎಲ್ಲಾ ಸೋತು ಕೂತ ಉಕ್ರೇನ್!

ಆಧುನಿಕ ಕಾಲದಲ್ಲಿ ಒಂದು ದೇಶಕ್ಕೆ ಯಾವ ರೀತಿಯ ರಾಜಕೀಯ ನಾಯಕ ಇರಬಾರದು? ಎಂಬುದಕ್ಕೆ ತಾಜಾ ಉದಾಹರಣೆ ಉಕ್ರೇನ್ ಅಧ್ಯಕ್ಷ ಅಂತಿದ್ದಾರೆ ನೆಟ್ಟಿಗರು. ಯಾಕಂದ್ರೆ ಈ ವ್ಯಕ್ತಿ ಮನಸ್ಸು ಮಾಡಿದ್ದರೆ ಒಂದು ಘೋರ ಯುದ್ಧ ನಿಲ್ಲಿಸಬಹುದಿತ್ತು. ಆದರೆ ರಷ್ಯಾ ಜೊತೆಗೆ ಕಿರಿಕ್ ಮಾಡಿಕೊಂಡು ಇಡೀ ದೇಶವನ್ನೇ ಎಡವಟ್ಟಿಗೆ ಸಿಲುಕಿಸಿದ್ದಾರೆ ಎಂಬ ಆರೋಪವನ್ನ ಝೆಲೆನ್ಸ್ಕಿ ವಿರೋಧಿಗಳು ಮಾಡುತ್ತಿದ್ದಾರೆ. ಆದರೆ ಇನ್ನೂ ಕೆಲವರು ಝೆಲೆನ್ಸ್ಕಿ ಹೆಜ್ಜೆ ಸರಿ ಇದೆ ಅಂತಾ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಮತ್ತೊಂದು ಎಡವಟ್ಟು ಆಗೇ ಹೋಗಿದೆ.

ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಎಲ್ಲವನ್ನೂ ಕಳೆದುಕೊಂಡಿದೆ. ಶಾಂತಿ & ನೆಮ್ಮದಿ ಜೊತೆಗೆ ತನ್ನ ಬಳಿ ಇದ್ದ ಅಪಾರ ಪ್ರಮಾಣದ ಸಂಪತ್ತು ಕಳೆದುಕೊಂಡು ಪರದಾಡುತ್ತಿದೆ ಈ ದೇಶ. ಈ ಸಮಯದಲ್ಲೇ ಅಂತಾರಾಷ್ಟ್ರೀಯ ಮಾಧ್ಯಮಗಳು, ಉಕ್ರೇನ್ ಕಳೆದುಕೊಂಡಿರುವ ಭೂಪ್ರದೇಶ ಎಷ್ಟು? ಎಂಬುದರ ಭಯಾನಕ ಲೆಕ್ಕ ಕೊಡುತ್ತಿವೆ. ಈ ಮೂಲಕ ಒಂದೇ ಒಂದು ಯುದ್ಧದಲ್ಲಿ ಉಕ್ರೇನ್ ಎಲ್ಲವನ್ನೂ ಕಳೆದುಕೊಂಡು ಪರದಾಡುವ ಸ್ಥಿತಿಗೆ ತಲುಪಿದೆ.

Ukraine Faces Significant Territorial Losses in War with Russia

ಶೇ. 20ರಷ್ಟು ಭೂಮಿ ರಷ್ಯಾ ಪಾಲು?

ಯುದ್ಧ ಶುರುವಾದ ನಂತರ ರಷ್ಯಾ ಸೇನೆ ಉಕ್ರೇನ್ ಮೇಲೆ ಸವಾರಿ ಮಾಡುತ್ತಿದೆ ಎಂದರೂ ತಪ್ಪು ಆಗುವುದಿಲ್ಲ. ಯಾಕಂದ್ರೆ ರಷ್ಯಾ ಸೇನೆ ಕೊಡುತ್ತಿರುವ ಏಟಿಗೆ ಉಕ್ರೇನ್ ನಲುಗಿದ್ದು, ಓಡಿ ಹೋಗುತ್ತಿದ್ದಾರೆ ಉಕ್ರೇನ್ ಸೈನಿಕರು. ಹೀಗೆ ಉಕ್ರೇನ್ ಸೇನೆ ಹೆದರುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಹಲವು ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದೆ. ಒಂದು ಅಂದಾಜಿನ ಪ್ರಕಾರ ಒಟ್ಟು ಶೇಕಡಾ 20 ರಷ್ಟು ಉಕ್ರೇನ್ ಭೂಮಿ ಈಗಾಗಲೇ ರಷ್ಯಾ ಪಾಲಾಗಿದೆ ಎನ್ನಲಾಗಿದೆ. ಹೀಗಾಗಿ ಉಕ್ರೇನ್ ದೇಶದ ಪ್ರಜೆಗಳು ಕೂಡ ಈ ಮಾಹಿತಿ ತಿಳಿದು ಕಂಗಾಲಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+