Russia & Ukraine War: ಐಯೋ ದೇವರೇ.. ಉಕ್ರೇನ್ ಮಾಡಿದ ಕೆಲಸ ನೋಡಿ!
ರಷ್ಯಾ ವಿರುದ್ಧ ಉಕ್ರೇನ್ ರೊಚ್ಚಿಗೆದ್ದು ಕೂತಿದ್ದು, ತಾನು ಎಡವಟ್ಟು ಮಾಡಿಕೊಳ್ಳುವುದೂ ಅಲ್ಲದೆ ಇಡೀ ಪ್ರಪಂಚಕ್ಕೆ ಇದೀಗ ಕಂಟಕ ತಂದೊಡ್ಡುತ್ತಿದೆ. ಉಕ್ರೇನ್ ಸೇನೆ ರಷ್ಯಾ ವಿರುದ್ಧ ದಾಳಿ ಮಾಡಲು ಹೋಗಿ ದೊಡ್ಡ ಪ್ರಮಾದ ಎಸಗುತ್ತಿದೆ ಉಕ್ರೇನ್ ಬಳಿ ಸಾವಿರ ಸಾವಿರ ಡ್ರೋನ್ ಇದ್ದು, ಅವುಗಳ ಮೂಲಕ ರಷ್ಯಾ ಮೇಲೆ ದಾಳಿ ಮಾಡಲು ಹೋಗಿ ಮಾಡಬಾರದ ಎಡವಟ್ಟು ಮಾಡಿಕೊಂಡು ಭಯ ಹುಟ್ಟುಹಾಕಿದೆ.
ಅಂದಹಾಗೆ ರಷ್ಯಾ & ಉಕ್ರೇನ್ ಯುದ್ಧ ಇನ್ನೇನು ನಿಂತೇ ಹೋಯಿತು ಅಂತಾ ಇಡೀ ಜಗತ್ತು ಅಂದುಕೊಳ್ಳುವ ಸಮಯದಲ್ಲೇ ಮತ್ತೆ ಏನಾದರೂ ಒಂದು ಕಿರಿಕ್ ಶುರುವಾಗುತ್ತಿದೆ. ಅದೇ ರೀತಿ ಉಕ್ರೇನ್ ಇದೀಗ ಕಾಲು ಕೆರೆದುಕೊಂಡು ರಷ್ಯಾ ವಿರುದ್ಧ ಗಲಾಟೆಗೆ ಹೋಗುತ್ತಿದೆಯಾ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಯಾಕಂದ್ರೆ ಅಮೆರಿಕದ ನೇತೃತ್ವದಲ್ಲಿ ಉಕ್ರೇನ್ & ರಷ್ಯಾ ನಡುವೆ ಸಂಧಾನ ನಡೆಸುವ ಕೆಲಸಗಳು ಸಾಗಿವೆ. ಈ ಮೂಲಕ ಕದನ ವಿರಾಮ ಘೋಷಣೆ ಮಾಡಿ, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಇದೇ ಹೊತ್ತಲ್ಲಿ ಉಕ್ರೇನ್ ಸೇನೆ ತನ್ನ ಬೆನ್ನಿಗೆ ತಾನೇ ಚೂರಿ ಹಾಕಿಕೊಳ್ಳುತ್ತಿದೆ!

ತನ್ನ ಬೆನ್ನಿಗೆ ತಾನೇ ಚೂರಿ ಹಾಕಿಕೊಂಡ ಉಕ್ರೇನ್!
ಹೌದು, ಉಕ್ರೇನ್ ನಾಯಕರಿಗೆ ಬುದ್ಧಿ ಇದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಯಾಕಂದ್ರೆ ಕದನ ವಿರಾಮ ಘೋಷಣೆ ಮಾಡಿ, ಯುದ್ಧ ನಿಲ್ಲಿಸಲು ಪ್ರಯತ್ನಗಳು ನಡೆಯುತ್ತಿರುವ ಈ ಸಮಯದಲ್ಲೇ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ರಷ್ಯಾ ರೀತಿಯ ಬಲಿಷ್ಠ ದೇಶಕ್ಕೇ ಸವಾಲು ಹಾಕುತ್ತಿದ್ದಾರೆ. ಇದರ ಭಾಗವಾಗಿ ರಷ್ಯಾ ವಿರುದ್ಧ ಡ್ರೋನ್ ದಾಳಿ ನಡೆಸಿದೆ ಉಕ್ರೇನ್ ಸೇನೆ. ಹೀಗೆ, ಸಾಮಾನ್ಯವಾಗಿ ಉಕ್ರೇನ್ ದಾಳಿ ಮಾಡಿದ್ದರೆ ಪರವಾಗಿಲ್ಲ ಎನ್ನಬಹುದಿತ್ತೋ ಏನೋ, ಆದರೆ ನಡೆಯಬಾರದ ಮತ್ತೊಂದು ಘಟನೆ ಕೂಡ ನಡೆದು ಹೋಗಿದೆ.
ನ್ಯೂಕ್ಲಿಯರ್ ಬಾಂಬ್‌ಗಳು ಬ್ಲಾಸ್ಟ್?
ಉಕ್ರೇನ್ ಇದೀಗ ದಾಳಿ ಮಾಡಿರುವ ಡ್ರೋನ್‌ಗಳು ಹೋಗಿ ನೇರವಾಗಿ ಬಡಿದಿರುವುದು ರಷ್ಯಾ ದೇಶದ ನ್ಯೂಕ್ಲಿಯರ್ ಘಟಕಗಳ ಬಳಿ. ನ್ಯೂಕ್ಲಿಯರ್ ಅಸ್ತ್ರಗಳ ಸಂಗ್ರಹ & ಪ್ರಯೋಗಗಳೂ ನಡೆಯುವ ಜಾಗದ ಮೇಲೆಯೇ ಉಕ್ರೇನ್ ಸೇನೆ ಡ್ರೋನ್‌ಗಳ ಮೂಲಕ ದಾಳಿ ಮಾಡುತ್ತಿದೆ ಎಂದು ಆರೋಪ ಮಾಡಲಾಗಿದೆ. ಇದರ ಜೊತೆಗೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ ರಷ್ಯಾ ದೇಶದ ಭಾಗದಲ್ಲಿ ಇದೀಗ ದಟ್ಟ ಹೊಗೆ ಆವರಿಸಿದೆ. ಅಲ್ಲದೆ ಪರಿಸ್ಥಿತಿ ಕೈಮೀರಿ ಹೋಗುವ ಭಯ ಕೂಡ ಆವರಿಸಿದೆ. ಮತ್ತೊಂದು ಕಡೆ ನ್ಯೂಕ್ಲಿಯರ್ ಬಾಂಬ್‌ಗಳೇ ಬ್ಲಾಸ್ಟ್ ಆಗಿವೆಯಾ? ಎಂಬ ಅನುಮಾನ ಕೂಡ ಮೂಡಿದೆ.












Click it and Unblock the Notifications