Russia & Ukraine: ಗಡಿಯಲ್ಲಿ ರಕ್ತಪಾತ, ಉಕ್ರೇನ್ ಅಧ್ಯಕ್ಷನಿಗೆ ಬುದ್ಧಿ ಬಂದಿಲ್ವಾ?

ರಷ್ಯಾ & ಉಕ್ರೇನ್ ಯುದ್ಧದ ಬಿರುಗಾಳಿ ಮತ್ತಷ್ಟು ಜೋರಾಗಿರುವ ಸಮಯದಲ್ಲೇ, ಉಕ್ರೇನ್ ಸೇನೆ ಇದೀಗ ರಷ್ಯಾ ವಿರುದ್ಧ ಪ್ರತಿದಾಳಿ ಶುರು ಮಾಡಿದೆ. ಈಗಾಗಲೇ ಉಕ್ರೇನ್ ದೇಶದಲ್ಲಿನ ಪ್ರಮುಖ ನಗರ & ರಾಜ್ಯಗಳನ್ನು ರಷ್ಯಾ ಸೇನೆ ತನ್ನ ವಶಕ್ಕೆ ಪಡೆದಿದೆ. ಹೀಗಾಗಿ ಉಕ್ರೇನ್‌ನ ಪಡೆಗಳಿಗೆ ಇನ್ನಷ್ಟು ಹೋರಾಟ ನಡೆಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಇಷ್ಟೆಲ್ಲಾ ಸೂಕ್ಷ್ಮ ಪರಿಸ್ಥಿತಿ ನಡುವೆ ರಷ್ಯಾ & ಉಕ್ರೇನ್ ಗಡಿ ಕೊತ ಕೊತ ಕುದಿಯುತ್ತಿದೆ.

2022ರ ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಇನ್ನೇನು ಮುಂದಿನ ತಿಂಗಳಿಗೆ ಬರೋಬ್ಬರಿ 3 ವರ್ಷ ಪೂರೈಸಲಿದೆ. ಇದು ಸಂಚಲನ ಸೃಷ್ಟಿ ಮಾಡುತ್ತಿರುವ ಈ ಸಮಯದಲ್ಲೇ, ಮತ್ತೆ ರಷ್ಯಾ & ಉಕ್ರೇನ್ ಸೇನೆಗಳು ಒಬ್ಬರ ಮೇಲೆ ಮತ್ತೊಬ್ಬರು ಭೀಕರವಾದ ದಾಳಿ ನಡೆಸುತ್ತಿದ್ದಾರೆ. ಗಡಿ ಭಾಗದಲ್ಲಿ ಹೆಚ್ಚಾಗುತ್ತಿರುವ ಈ ರೀತಿಯ ದಾಳಿ ಕಂಡು ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಯಾವ ಕ್ಷಣದಲ್ಲಿ ಏನಾಗುತ್ತೋ? ಅನ್ನೋ ಭಯ ಕೂಡ, ಇದೀಗ ರಷ್ಯಾ & ಉಕ್ರೇನ್ ಗಡಿಯಲ್ಲಿ ವಾಸ ಮಾಡುವ ಜನರಲ್ಲಿ ಆವರಿಸಿದೆ.

Ukraine And Russia Military Started Heavy Attacks On Border Area

ಬಿತ್ತು.. ಬಿತ್ತು.. ಬಾಂಬ್ ಬಿತ್ತು!

ರಷ್ಯಾ ಅತಿದೊಡ್ಡ ದೇಶ, ಹಾಗೇ ಉಕ್ರೇನ್ ಕೂಡ ವಿಶಾಲವಾಗಿಯೇ ಇದೆ. ಒಂದು ಕಾಲದಲ್ಲಿ ರಷ್ಯಾ ದೇಶದ ಭಾಗವಾಗಿದ್ದ ಉಕ್ರೇನ್ ಹಲವು ವರ್ಷಗಳ ಹಿಂದೆ ದೂರವಾಗಿತ್ತು. ಈ ಕಾರಣಕ್ಕೆ ಉಕ್ರೇನ್ ಬಗ್ಗೆ ರಷ್ಯಾ ಸೇನೆಗೆ ಪಕ್ಕಾ ಮಾಹಿತಿ ಇದ್ದು, ಇದೀಗ ಬಹುತೇಕ ಉಕ್ರೇನ್ ಭಾಗದ ಮೇಲೆ ರಷ್ಯಾ ಮಿಲಿಟರಿಗೆ ಹಿಡಿತ ಸಾಧಿಸಿದೆ. ಉಕ್ರೇನ್ ರಾಜಧಾನಿ ಕೀವ್ ಬಿಟ್ಟು ಬಾಕಿ ಇರುವ ಬಹುತೇಕ ಜಾಗ ರಷ್ಯಾ ಸೇನೆ ಹಿಡಿತಕ್ಕೆ ಸಿಕ್ಕಿದೆ. ಇದೇ ಕಾರಣಕ್ಕೆ ಇದೀಗ ಕೌಂಟರ್ ಅಟ್ಯಾಕ್ ಶುರು ಮಾಡಿರುವ ಉಕ್ರೇನ್ ಸೇನೆ ಸೇಡಿಗೆ ಸೇಡು ಅಂತಾ ಕಾಲು ಕೆರೆದಿದೆ!

ರಷ್ಯಾ ಕೊಡುತ್ತಿರುವ ಏಟಿಗೆ ಉಕ್ರೇನ್ ಮಕಾಡೆ!

ಹೌದು, ಉಕ್ರೇನ್‌ನ ವಿದ್ಯುತ್ & ನೀರು ಸರಬರಾಜು, ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯ ವ್ಯವಸ್ಥೆಗಳನ್ನ ಚಿಂದಿ ಉಡಾಯಿಸಿದೆ ರಷ್ಯಾ. ಹೀಗಾಗಿ ಉಕ್ರೇನ್ ಸಂಪೂರ್ಣವಾಗಿ ಕುಸಿದು ಹೋಗುತ್ತಿದ್ದು, ಮುಂದಿನ ಪರಿಸ್ಥಿತಿ ಇನ್ನಷ್ಟ ಭಯಾನಕವಾಗಿ ಇರಲಿದೆಯಾ? ಎಂಬ ಪ್ರಶ್ನೆ ಈಗ ಮೂಡಿದೆ. ಮತ್ತೊಂದು ಕಡೆ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ರಷ್ಯಾ ಸೇನೆ ಇನ್ನಷ್ಟು ಜೋರಾಗಿ ದಾಳಿ ಮಾಡಬೇಕು ಎಂಬ ಆದೇಶ ನೀಡಿದ್ದಾರೆ, ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇನ್ನೊಂದು ಕಡೆ ಉಕ್ರೇನ್‌ಗೆ ಅಮೆರಿಕ ಅನುದಾನ ನೀಡಿದರೂ ಪರಿಸ್ಥಿತಿ ಸರಿಯಾಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+