ಉಕ್ರೇನ್ ನೆಲದಲ್ಲಿ ಶಾಂತಿ ನೆಲೆಸಲು ಗಡುವು ನೀಡಿದ ಅಮೆರಿಕ, ಶೀಘ್ರದಲ್ಲೇ ಕಿತ್ತಾಟ ನಿಲ್ಲುವ ಸಾಧ್ಯತೆ | Ukraine And Russia
ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ 4 ವರ್ಷ ಪೂರ್ಣವಾಗುತ್ತಿದ್ದು, ಇದೇ ಸಮಯದಲ್ಲಿ ಅಮರಿಕದ ನಾಯಕರು ಕೂಡ ಅಳೆದು ತೂಗಿ ಯುದ್ಧ ನಿಲ್ಲಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಉಕ್ರೇನ್ ಈ ಸಮಯದಲ್ಲಿ ಅಮೆರಿಕ ಹೇಳಿದ ಅಷ್ಟೂ ಮಾತನ್ನು ಕೇಳುತ್ತಾ, ಡೊನಾಲ್ಡ್ ಟ್ರಂಪ್ ಅವರ ಅಜ್ಞೆಗೆ ಜೈ ಎನ್ನುತ್ತಿದೆ. ಹೀಗಾಗಿಯೇ ಆದಷ್ಟು ಬೇಗ ಯುದ್ಧ ನಿಲ್ಲುವ ನಿರೀಕ್ಷೆ ಕೂಡ ಮೂಡಿತ್ತು, ಇದೀಗ ದಿಢೀರ್ ಯುದ್ಧ ನಿಲ್ಲುವ ಬಗ್ಗೆ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಅಮೆರಿಕದ ರಣತಂತ್ರ ಏನು ಎಂಬುದನ್ನ ಜಗತ್ತಿಗೇ ತಿಳಿಸಿದ್ದಾರೆ.
ಅಮೆರಿಕ ಮಾಡಿರುವ ಮಾಸ್ಟರ್ ಪ್ಲಾನ್ ವರ್ಕೌಟ್ ಆಗಿಬಿಟ್ಟರೆ ಅದು ಯುರೋಪ್ ಭವಿಷ್ಯ ಹಾಗೂ ಜಗತ್ತಿನ ಭವಿಷ್ಯ ಬದಲು ಮಾಡಲಿದೆ. ಯಾಕಂದ್ರೆ ಇಡೀ ಜಗತ್ತಿನಲ್ಲಿ ಅಶಾಂತಿ ಮೂಡಲು ಶುರು ಆಗಿದ್ದೇ ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾದ ನಂತರ. ಹೀಗಾಗಿ ಇದೊಂದು ಯುದ್ಧವನ್ನ ಬೇಗನೇ ನಿಲ್ಲಿಸಿದರೆ ಭವಿಷ್ಯದಲ್ಲಿ ಎಲ್ಲವೂ ತಣ್ಣಗೆ ಆಗಲಿದೆ ಎಂಬ ಲೆಕ್ಕಾಚಾರ ಡೊನಾಲ್ಡ್ ಟ್ರಂಪ್ ಅವರದ್ದು. ಇದೇ ಕಾರಣಕ್ಕೆ ಎರಡೂ ದೇಶಗಳ ನಡುವೆ ಸಂಧಾನ ಮಾಡಿಸಲು ಹಗಲು & ರಾತ್ರಿ ಎನ್ನದೆ ಟ್ರಂಪ್ ಅವರ ಆಡಳಿತದ ಅಧಿಕಾರಿಗಳು ಒದ್ದಾಡುತ್ತಿದ್ದಾರೆ. ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನೀಡಿರುವ ಮಾಹಿತಿ ಪ್ರಕಾರ, ಇದೇ ವರ್ಷದ ಬೇಸಿಗೆ ಒಳಗೆ ಈ ಯುದ್ಧ ನಿಲ್ಲಲಿದೆಯಂತೆ.

ಜೂನ್ ಒಳಗೆ ಯುದ್ಧ ನಿಲ್ಲುವ ನಿರೀಕ್ಷೆ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಇದೀಗ ನೀಡಿರುವ ಮಾಹಿತಿ ಪ್ರಕಾರ, ಅಮೆರಿಕ ತನ್ನ ಮುಂದಾಳತ್ವದಲ್ಲಿ ನಡೆಸುತ್ತಿರುವ ಶಾಂತಿ ಮಾತುಕತೆಯ ಆಧಾರದಲ್ಲಿ ಇದೇ ವರ್ಷದ ಜೂನ್ ತಿಂಗಳ ಒಳಗಾಗಿ ಯುದ್ಧ ನಿಲ್ಲಲಿದೆಯಂತೆ. ರಷ್ಯಾ ಮತ್ತು ಉಕ್ರೇನ್ ನಡುವೆ ಶುರುವಾಗಿರುವ ಭೀಕರ ಕಾಳಗಕ್ಕೆ 4 ವರ್ಷ ತುಂಬುತ್ತಿದ್ದು, 2022 ಫೆಬ್ರವರಿ 24 ಗುರುವಾರ ಭೀಕರ ಯುದ್ಧ ಶುರುವಾಗಿತ್ತು. ಕೆಲ ದಿನಗಳಲ್ಲಿ ಮುಗಿದು ಹೋಗಬಹುದು ಎಂದು ಊಹಿಸಿದ್ದ ಯುದ್ಧ ಈಗಾಗಲೇ 4ನೇ ವರ್ಷ ಮುಗಿಸಿ 5ನೇ ವರ್ಷಕ್ಕೆ ಎಂಟ್ರಿ ಪಡೆಯಲು ಸಜ್ಜಾಗಿದೆ. ಇದೇ ಸಮಯದಲ್ಲಿ ವೊಲೊಡಿಮಿರ್ ಝಲೆನ್‌ಸ್ಕಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಜೂನ್ ಒಳಗಾಗಿ ಯುದ್ಧ ನಿಲ್ಲುವ ಮುನ್ಸೂಚನೆ ನೀಡಿದ್ದಾರೆ.
ಹೊಸ ಭರವಸೆಯಲ್ಲಿ ಉಕ್ರೇನ್ ಜನರು
ಅಮೆರಿಕ ನೀಡಿರುವ ಸೂಚನೆಯಂತೆ 2026ರ ಬೇಸಿಗೆ ಆರಂಭದ ಹೊತ್ತಿಗೆ ಎರಡೂ ದೇಶಗಳು ಯುದ್ಧ ನಿಲ್ಲಿಸುವ ಒಪ್ಪಂದಕ್ಕೆ ಬರಬೇಕು. ಹಾಗೂ ಯುದ್ಧ ನಿಲ್ಲಿಸಲು ಬೇಕಾಗಿರುವ ಎಲ್ಲಾ ನಿಯಮಗಳಿಗು ಬದ್ಧರಾಗಿ ಇರಬೇಕು ಎಂದು ಅಮೆರಿಕ ತಿಳಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಇದೀಗ ಮಾಹಿತಿ ನೀಡಿದ್ದಾರೆ. ಈ ಮೂಲಕ ಉಕ್ರೇನ್ ಜನರಲ್ಲಿ ಹೊಸ ಭರವಸೆ ಇದೀಗ ಮೂಡುತ್ತಿದೆ. ಮುಂದಿನ ಚಳಿಗಾಲದ ಒಳಗೆ ಯುದ್ಧ ನಿಲ್ಲಲಿ ಎಂದು ಬೇಡುವ ಪರಿಸ್ಥಿತಿ ಕೂಡ ಉಕ್ರೇನ್‌ಗೆ ಎದುರಾಗಿದೆ.












Click it and Unblock the Notifications