ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಶೀಘ್ರದಲ್ಲೇ ಕೊನೆಯ ಮೊಳೆ ಗ್ಯಾರಂಟಿ?
ರಷ್ಯಾ ಹಾಕುತ್ತಿರುವ ಒಂದೊಂದು ಬಾಂಬ್ ಮತ್ತು ಹಾರಿಸುತ್ತಿರುವ ಒಂದೊಂದು ಮಿಸೈಲ್ ಕೂಡ ಉಕ್ರೇನ್ ಜನರ ಜೀವ ಹಿಂಡುತ್ತಿದೆ. ಯಾರದ್ದೋ ತಪ್ಪಿಗೆ ಘನಘೋರ ಚಳಿಯಲ್ಲಿ ನರಳುತ್ತಾ & ಒದ್ದಾಡುತ್ತಾ ಬದುಕುತ್ತಿದ್ದಾರೆ ಉಕ್ರೇನ್ ನಿವಾಸಿಗಳು. ಹೇಗಾದರೂ ಮಾಡಿ ಜೀವ ಉಳಿಸಿಕೊಂಡು ನೆಮ್ಮದಿಯಾಗಿ ಬದುಕೋಣ ಅಂದರೆ ದೇಶ ಬಿಟ್ಟು ಹೊರಗೆ ಹೋಗುವುದಕ್ಕೂ ಆಗದ ಸ್ಥಿತಿಯಲ್ಲಿ ಉಕ್ರೇನ್ ಪ್ರಜೆಗಳು ಇದ್ದಾರೆ. ಈಗಾಗಲೇ ಲಕ್ಷಾಂತರ ಜನ ಯುದ್ಧದ ಕಾರಣಕ್ಕೆ ಬಲಿಯಾಗಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇವೆ. ಇಂತಹ ಸ್ಥಿತಿಯಲ್ಲಿ ರಷ್ಯಾ & ಉಕ್ರೇನ್ ಯುದ್ಧಕ್ಕೆ ಶೀಘ್ರದಲ್ಲೇ ಕೊನೆಯ ಮೊಳೆ ಗ್ಯಾರಂಟಿ?
ಯುರೋಪ್ ಜನರಿಗೆ ಉಕ್ರೇನ್ ಯುದ್ಧ ನಿಲ್ಲುವ ತನಕ ನೆಮ್ಮದಿ ಇಲ್ಲ ಅಂತಾ ಹೇಳಬಹುದಾಗಿದೆ. ಹೌದು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸದೇ ಹೋದರೆ ಭವಿಷ್ಯದಲ್ಲಿ ಇದು ಜಗತ್ತಿಗೆ ಗ್ಯಾಂಗ್ರಿನ್ ರೀತಿ ಅಂಟಿಕೊಳ್ಳಲಿದೆ ಅನ್ನೋ ಆರೋಪ ಮಾಡುತ್ತಿವೆ ಯುರೋಪ್ ದೇಶಗಳು. ಇನ್ನೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ, ತಂತ್ರ & ರಣತಂತ್ರ ರೂಪಿಸುತ್ತಾ ಯುದ್ಧ ನಿಲ್ಲಿಸುವ ಪ್ಲಾನ್ ಮಾಡುತ್ತಿದ್ದಾರೆ.

ಉಕ್ರೇನ್ ಯುದ್ಧ ಕೆಲವೇ ದಿನಗಳಲ್ಲಿ ಕೊನೆ?
ಆದರೆ ಯಾವುದೂ ಈವರೆಗೆ ಸಕ್ಸಸ್ ಆಗಿಲ್ಲ ಎಂಬ ಒತ್ತಡದ ನಡುವೆಯೇ ಇದೀಗ ಉಕ್ರೇನ್ ಶಾಂತಿ ಮಾತುಕತೆ ಮಾಡಿ ಯುದ್ಧ ನಿಲ್ಲಿಸಲು ಬಹುತೇಕ ಒಪ್ಪಿಕೊಂಡಿದೆ, ಎಂಬ ವರದಿಗಳು ಹರಿದಾಡುತ್ತಾ ಇರುವುದು ಒಂದಷ್ಟು ನೆಮ್ಮದಿ ನೀಡಿದೆ ಉಕ್ರೇನ್ ನಿವಾಸಿಗಳಿಗೆ. ಅಮೆರಿಕದಿಂದ ಬಂದು ಚರ್ಚೆ ಮಾಡಿರುವ ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಉಕ್ರೇನ್ ಸ್ಪಂದಿಸಿರುವುದು ಯುದ್ಧ ನಿಲ್ಲುವ ಬಗ್ಗೆ ಇದೀಗ ಹೊಸ ಆಶಾಭಾವನೆ ಕೂಡ ಮೂಡಿಸಿದೆ.
ಅಂತಿಮ ಹಂತದಲ್ಲಿ ಶಾಂತಿ ಮಾತುಕತೆ
ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಕೂಡ ಈಗಾಗಲೇ ಭೇಟಿ ಮಾಡಿ ಮಾತುಕತೆ ನಡೆಸಿ, ಯುದ್ಧ ನಿಲ್ಲಿಸಲು ಒಂದು ಸುತ್ತಿನ ಚರ್ಚೆ ನಡೆಸಿರುವ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಅಧಿಕಾರಿ ಬಳಗ ಆರಂಭದಲ್ಲಿ ನಿರಾಶೆ ಅನುಭವಿಸಿದೆ. ಆದರೆ ಇತ್ತೀಚಿನ ವರದಿಗಳ ಪ್ರಕಾರ ರಷ್ಯಾ ಕೂಡ ಈ ಯುದ್ಧ ನಿಲ್ಲಿಸಿ, ಶಾಂತಿ ಕಾಪಾಡಲು ಪ್ಲಾನ್ ಮಾಡಿದೆ ಎನ್ನಲಾಗಿದೆ. ಈ ಮೂಲಕ ರಷ್ಯಾ & ಉಕ್ರೇನ್ ನಡುವೆ ಅತಿ ಶೀಘ್ರದಲ್ಲೇ ಶಾಂತಿ ಒಪ್ಪಂದ ಈಡೇರುವ ಸಾಧ್ಯತೆ ಇದೆ. ಅದರಲ್ಲೂ ಚಳಿಗಾಲ ಮುಗಿಯುವ ಒಳಗೆ ಶಾಂತಿ ಒಪ್ಪಂದ ಪೂರ್ಣಗೊಂಡರೆ ಉಕ್ರೇನ್ ಜನರು ತಮ್ಮ ಜೀವ ಉಳಿಸಿಕೊಳ್ಳಲು ಸಾಧ್ಯ, ಇಲ್ಲವಾದರೆ ಮೈಕೊರೆಯುವ ಚಳಿ ನಡುವೆ ಜನರಿಗೆ ಜೀವ ಉಳಿಸಿಕೊಂಡು ಬದುಕುವುದೇ ಕಷ್ಟ ಎಂಬ ವಾತಾವರಣ ಅಲ್ಲಿ ಈಗ ನಿರ್ಮಾಣವಾಗಿದೆ.












Click it and Unblock the Notifications