ರಷ್ಯಾ ವಿರುದ್ಧ ರೊಚ್ಚಿಗೆದ್ದ ಯುಕೆ: 100ಕ್ಕೂ ಹೆಚ್ಚು ಹೊಸ ನಿರ್ಬಂಧ ಘೋಷಣೆ!
ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ರೊಚ್ಚಿಗೆದ್ದು ಆಕ್ರೋಶ ಹೊರ ಹಾಕುತ್ತಿವೆ. ಹೀಗೆ ರಷ್ಯಾ ಹಣಿಯಲು ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ ಪಾಶ್ಚಿಮಾತ್ಯ ದೇಶಗಳ ನಾಯಕರು. ಇಷ್ಟೆಲ್ಲಾ ಮಾಡಿದರೂ ರಷ್ಯಾ ಮಾತ್ರ ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಿ, ಸೈಲೆಂಟ್ ಆಗಲು ತಯಾರಿಲ್ಲ. ನೋಡ ನೋಡುತ್ತಲೇ 3 ವರ್ಷ ಮುಗಿಸಿ 4ನೇ ವರ್ಷಕ್ಕೆ ಈ ಭೀಕರ ಯುದ್ಧ ಕಾಲಿಟ್ಟಿದೆ. ಇಂತಹ ಸಮಯದಲ್ಲೇ ರಷ್ಯಾ ವಿರುದ್ಧ ರೊಚ್ಚಿಗೆದ್ದ ಯುಕೆ ಏನು ಮಾಡಿದೆ ಗೊತ್ತಾ?
ಬ್ರಿಟಿಷರಿಗೂ & ರಷ್ಯಾ ನಾಯಕರಿಗೂ ಮೊದಲಿನಿಂದ ಕೂಡ ಶತ್ರುತ್ವ ಇದ್ದು, ಈ ಎರಡೂ ಒಕ್ಕೂಟಗಳ ನಡುವೆ ಭೀಕರ ತಿಕ್ಕಾಟ ಶುರುವಾಗಿದೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಜಗಳಕ್ಕೂ ಕಾರಣವಾಗಿದೆ. ಒಂದು ಕಡೆ ಉಕ್ರೇನ್ ಪರವಾಗಿ ನಿಂತಿರುವ ಯುಕೆ, ರಷ್ಯಾ ವಿರುದ್ಧ ಕೆಂಡ ಕಾರುತ್ತಿದೆ. ಇಂತಹ ಸಮಯದಲ್ಲೇ, ಉಕ್ರೇನ್ ವಿರುದ್ಧ ರಷ್ಯಾ ಸೇನೆ ಭರ್ಜರಿಯಾಗಿ ದಾಳಿ ನಡೆಸುತ್ತಿದೆ. ಇದನ್ನೇ ನೆಪ ಮಾಡಿಕೊಂಡು ಇದೀಗ ಯುಕೆ ನೇರವಾಗಿ ರಷ್ಯಾ ವಿರುದ್ಧ 100ಕ್ಕೂ ಹೆಚ್ಚು ಹೊಸ ನಿರ್ಬಂಧ ಘೋಷಣೆ ಮಾಡಿದೆ!

ರಷ್ಯಾ ವಿರುದ್ಧ ಯುಕೆ ಗರಂ!
ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾ ಲಕ್ಷಾಂತರ ಜನರ ಜೀವ ಹಾನಿಗೆ ಕಾರಣ ಆಗಿದೆ, ಹೀಗಾಗಿ ರಷ್ಯಾಗೆ ತಕ್ಕ ಶಾಸ್ತಿ ಆಗಬೇಕು ಎಂಬುದು ಯುನೈಟೆಡ್ ಕಿಂಗ್‌ಡಮ್ ಬೇಡಿಕೆ. ಇಂತಹ ಸಮಯದಲ್ಲೇ, ರಷ್ಯಾ ವಿರುದ್ಧ ವ್ಯಾಪಾರದ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಇದೀಗ ಯುಕೆ ಮುಂದಾಗಿದೆ. ಇದರ ಭಾಗವಾಗಿ 100ಕ್ಕೂ ಹೆಚ್ಚು ಹೊಸ ನಿರ್ಬಂಧ ಘೋಷಣೆ ಮಾಡಿ ರಷ್ಯಾಗೆ ಶಾಕ್ ಕೊಟ್ಟಿದೆ ಬ್ರಿಟನ್ ಸರ್ಕಾರ. ಇದು ರಷ್ಯಾಗೆ ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಅಲ್ಲದೆ ಭವಿಷ್ಯದಲ್ಲಿ ಈ ತಿಕ್ಕಾಟ ಇನ್ನಷ್ಟು ಹೆಚ್ಚಾಗುವ ಭಯ ಆವರಿಸಿದೆ.
ರಷ್ಯಾ ಏನೆಲ್ಲಾ ಸರಬರಾಜು ಮಾಡುತ್ತೆ?
ಪ್ರಮುಖವಾಗಿ ಪೆಟ್ರೋಲ್ & ಡೀಸೆಲ್ ಸೇರಿದಂತೆ ತೈಲ ಉತ್ಪನ್ನಗಳ ಸರಬರಾಜು ಮಾಡುವ ದೇಶಗಳ ಪೈಕಿ ರಷ್ಯಾ ಕೂಡ ಒಂದಾಗಿದ್ದು, ಈ ದೇಶವು ಶಸ್ತ್ರಾಸ್ತ್ರ ಸೇರಿದಂತೆ ನ್ಯೂಕ್ಲಿಯರ್ ತಂತ್ರಜ್ಞಾನ ಕೂಡ ಸರಬರಾಜು ಮಾಡುತ್ತಿದೆ. ಅಲ್ಲದೆ ಕೃಷಿ ವಸ್ತು ಮತ್ತು ಹಲವು ರೀತಿಯ ಉತ್ಪನ್ನಗಳನ್ನ ಯುರೋಪ್ ದೇಶಗಳಿಗೆ ಸರಬರಾಜು ಮಾಡುತ್ತಿತ್ತು ರಷ್ಯಾ. ಆದರೆ ಯಾವಾಗ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಶುರು ಮಾಡಿತ್ತೋ ಆ ನಂತರ ರಷ್ಯಾದ ಮೇಲೆ ಹಲವಾರು ನಿರ್ಬಂಧ ಹೇರಲಾಗಿದೆ.
ಇದೇ ವೇಳೆ ಮತ್ತಷ್ಟು ನಿರ್ಬಂಧ ಹೇರಲು ಇದೀಗ ಯುಕೆ ಮುಂದಾಗಿದೆ. ಅಲ್ಲದೆ ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ರಷ್ಯಾಗೆ ಇದು ಇನ್ನಷ್ಟು ಕಷ್ಟ ತಂದೊಡ್ಡಿದೆ. ಮುಂದಿನ ದಿನಗಳಲ್ಲಿ ರಷ್ಯಾ ಇದಕ್ಕೆಲ್ಲಾ ತಕ್ಕ ಉತ್ತರ ನೀಡುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಲು ಈಗಾಗಲೇ ರಷ್ಯಾ ಅಧಿಕಾರಿಗಳು ಅಮೆರಿಕದ ಜೊತೆಗೆ ಮಾತುಕತೆ ಆರಂಭ ಮಾಡಿದ್ದಾರೆ.












Click it and Unblock the Notifications