ಮುಟ್ಟಿನ ಹೊಟ್ಟೆ ನೋವು ನಿವಾರಣೆ ಮಾತ್ರೆ ಸೇವಿಸಿ ಬಾಲಕಿ ಸಾವು: ಅಷ್ಟಕ್ಕೂ ಆಗಿದ್ದೇನು..?
ಇಂಗ್ಲೆಂಡ್‌ನಲ್ಲಿ 16 ವರ್ಷದ ಬಾಲಕಿ ಮುಟ್ಟಿನ ಹೊಟ್ಟೆ ನೋವಿನ ಮಾತ್ರೆಗಳನ್ನು ಸೇವಿಸಿದ ಬಳಿಕ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಲೈಲಾ ಖಾನ್ ಮೃತ ಬಾಲಕಿಯಾಗಿದ್ದಾಳೆ. ಲೈಲಾ ಖಾನ್ ಮುಟ್ಟಿನ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸಿದ್ದಾಳೆ. ಇದರಿಂದ ಆಕೆಯ ಸಾವು ಸಂಭವಿಸಿದೆ ಎಂದು ವರದಿಯಾಗಿದೆ.
ಇತ್ತೀಚಿಗೆ ನವೆಂಬರ್ 25ರಂದು ಋತು ಸ್ರಾವ ಆದ ದಿನವೇ ಲೈಲಾ ಖಾನ್ ಹೊಟ್ಟೆ ನೋವು ನಿವಾರಣಾ ಮಾತ್ರೆ ಸೇವಿಸಿದ್ದಾಳೆ. ಹೊಟ್ಟೆ ನೋವು ನಿವಾರಕ ಮಾತ್ರೆಗಳಿಂದ ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳಲ್ಲಿ ಮಹಿಳೆಯರಲ್ಲಿ ನೋವು ಕಡಿಮೆಯಾಗುತ್ತದೆ. ಆದರೆ ಲೈಲಾಳಿಗೆ ಮಾತ್ರೆ ಸೇವನೆ ಬಳಿಕ ಬೇರೆ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಒಂದೆಡರು ದಿನ ಕಳೆಯುದರಲ್ಲಿ ಆಕೆಯ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ.

ಆಕೆಯ ಕುಟುಂಬಸ್ಥರ ಪ್ರಕಾರ ಲೈಲಾ ಅರ್ಧ ಗಂಟೆಗಳಿಗೊಮ್ಮೆ ವಾಂತಿ ಮಾಡಿಕೊಳ್ಳುತ್ತಿದ್ದಳಂತೆ. ಜೊತೆಗೆ ಈಕೆಯ ಮುಟ್ಟಿನ ನೋವು ಕೂಡ ಉಲ್ಬಣಗೊಂಡಿದೆ. ಕೊನೆಗೆ ಡಿಸೆಂಬರ್ 05ರ ವೇಳೆಗೆ ಲೈಲಾ ವಿಪರೀತ ವಾಂತಿ ಭೇದಿ ಆರಂಭವಾಗಿದ್ದು, ಜೊತೆಗೆ ತೀವ್ರ ತಲೆನೋವಿನಿಂದ ಈಕೆ ಬಳಲಿದ್ದಾಳೆ. ಕೊನೆಗೆ ಆಕೆಯಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಲೆ ನೋವಿನಿಂದ ಒದ್ದಾಡುತ್ತಿದ್ದ ಆಕೆಯನ್ನು ಮೊದಲು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಯಿತು. ಈ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ಕೂಡಲೇ ಆಕೆಯನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ, ಮೆದುಳು ನಿಷ್ಕ್ರಿಯಗೊಂಡು ಲೈಲಾ ಸಾವನ್ನಪ್ಪಿದ್ದಾಳೆ. ಮಗಳ ಸಾವಿನ ನೋವಿನ ನಡುವೆಯೇ ಆಕೆಯ ಕುಟುಂಬಸ್ಥರು ಆಕೆಯ ಅಂಗಾಂಗಳನ್ನು ದಾನ ಮಾಡಿದ್ದಾರೆ. ಅಲ್ಲದೇ ವೈದ್ಯರ ಸೂಕ್ತ ಸಲಹೆ ಇಲ್ಲದೇ ಯಾವುದೇ ಮಾತ್ರೆಗಳನ್ನು ಹೆಣ್ಣು ಮಕ್ಕಳು ಸೇವಿಸಬೇಡಿ ಎಂದು ಮನವಿ ಮಾಡಿದ್ದಾರೆ.
-
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications