ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬು ಧಾಬಿ ಏರ್‌ಪೋರ್ಟ್‌ನಲ್ಲಿ ಟ್ಯಾಂಕರ್‌ ಸ್ಫೋಟ: ಡ್ರೋನ್ ದಾಳಿ ಶಂಕೆ

|
Google Oneindia Kannada News

ಅಬು ಧಾಬಿ, ಜನವರಿ 17: ಅಬು ಧಾಬಿ ಏರ್‌ಪೋರ್ಟ್‌ನಲ್ಲಿ ಭೀಕರ ದಾಳಿ ನಡೆದಿದ್ದು, 3 ತೈಲ ಟ್ಯಾಂಕರ್‌ಗಳು ಸ್ಫೋಟಗೊಂಡಿವೆ. ಡ್ರೋನ್ ದಾಳಿ ನಡೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಯಮೆನ್‌ನ ಹೌತಿ ಬಂಡುಕೋರರು ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ ಭೀಕರ ದಾಳಿ ನಡೆಸಿದ್ದಾರೆ. ಎಎಫ್‌ಪಿ ಸುದ್ದಿಸಂಸ್ಥೆ ಅಬುಧಾಬಿ ಪೊಲೀಸರನ್ನು ಉಲ್ಲೇಖಿಸಿ ಈ ಮಾಹಿತಿ ನೀಡಿದೆ.

ಅಬುಧಾಬಿಯಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿ ಮೂವರು ಮೃತಪಟ್ಟಿದ್ದಾರೆ.

ಹೌತಿ ಬಂಡುಕೋರರು ಯೆಮೆನ್‌ನ ದೊಡ್ಡ ಭಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಇಲ್ಲಿ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವು ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರ್ಕಾರವನ್ನು ಪುನಃಸ್ಥಾಪಿಸಲು ಹೌತಿಗಳ ವಿರುದ್ಧ ಹೋರಾಡುತ್ತಿದೆ. ಯೆಮೆನ್ ಅಂತರ್ಯುದ್ಧದ ವಿರುದ್ಧ ಹೋರಾಡಲು ಯುಎಇ 2015 ರಲ್ಲಿ ಸೌದಿ ಒಕ್ಕೂಟವನ್ನು ಸೇರಿತು.

UAE Suspects Drone Attack Behind Tanker Explosions Near Abu Dhabi Airport

ಇದರಿಂದಾಗಿ ಹೌತಿ ಈಗ ಯುಎಇಯನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ಜನವರಿ 2 ರಂದು ರವಾಬಿ ಎಂಬ ಯುಎಇ ಸರಕು ಸಾಗಣೆ ಹಡಗನ್ನು ಸಹ ಸ್ವಾಧೀನಪಡಿಸಿಕೊಂಡರು. ಹಡಗಿನಲ್ಲಿದ್ದ 11 ಜನರನ್ನು ಸೆರೆಹಿಡಿಯಲಾಯಿತು . ಇವರಲ್ಲಿ 7 ಮಂದಿ ಭಾರತೀಯರು. ಈ ಎಲ್ಲ ಜನರನ್ನು ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆ ಮತ್ತು ಭಾರತವು ಹೌತಿಗಳನ್ನು ಒತ್ತಾಯಿಸಿದೆ. ಹಡಗು ಅಂತಾರಾಷ್ಟ್ರೀಯ ನೀರಿನಲ್ಲಿತ್ತು ಎಂದು ಸೌದಿ ಹೇಳಿದೆ.

ಹೌತಿ ಸಂಘಟನೆಯು ತನ್ನ ಪ್ರದೇಶದಲ್ಲಿತ್ತು ಎಂದು ಹೇಳಿತ್ತು. ಎಲ್ಲಾ ಮೂರು ತೈಲ ಟ್ಯಾಂಕರ್‌ಗಳಲ್ಲಿ ಮೊದಲು ಮುಸಾಫ್ಫಾ ಪ್ರದೇಶದಲ್ಲಿ ಸ್ಫೋಟಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ಉಲ್ಲೇಖಿಸಿವೆ.

ಇದಾದ ನಂತರ, ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ನಿರ್ಮಾಣ ಸ್ಥಳದಲ್ಲಿ ಬೆಂಕಿತಗುಲಿದಮಾಹಿತಿ ಲಭ್ಯವಾಗಿದೆ. ಆದರೆ ಇದರಿಂದ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಹಾನಿ ಉಂಟಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ, ಈ ದಾಳಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ರಾಜಧಾನಿ ಅಬುಧಾಬಿಯ ಎರಡು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇವುಗಳಲ್ಲಿ ಒಂದು ಬೆಂಕಿ ಮುಸಾಫ್ಫಾದಲ್ಲಿ ಪ್ರಾರಂಭವಾದರೆ, ಇನ್ನೊಂದು ವಿಮಾನ ನಿಲ್ದಾಣದಲ್ಲಿ. ಡ್ರೋನ್ ಮೂಲಕ ಈ ದಾಳಿ ನಡೆಸಿರಬಹುದೆಂದು ಎಂದು ಪೊಲೀಸರು ಶಂಕಿಸಿದ್ದಾರೆ.

ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಹೌತಿ ಸಂಘಟನೆಯಿಂದ ನಿಯಂತ್ರಿತ ಪಡೆಯ ವಕ್ತಾರ ಯಾಹ್ಯಾ ಸಾರಿ ಅವರ ಟ್ವಿಟರ್ ಖಾತೆಯ ಪೋಸ್ಟ್ ಪ್ರಕಾರ, ಹೌತಿಗಳು "ಮುಂಬರುವ ಗಂಟೆಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು" ನಡೆಸಲು ಯೋಜಿಸಿದ್ದಾರೆ. ಸೌದಿ ಅರೇಬಿಯಾದ ನಂತರ ಹೌತಿ ಬಂಡುಕೋರರು ಯುಎಇ ಮೇಲೆ ದಾಳಿ ಆರಂಭಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಮಾಧ್ಯಮ ವೆಬ್‌ಸೈಟ್ ಪ್ರಕಾರ, ಎರಡೂ ಸ್ಥಳಗಳಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಇದರಿಂದ ವಿಮಾನ ಸಂಚಾರಕ್ಕೂ ತೊಂದರೆಯಾಗಲಿಲ್ಲ. ಅಲ್ಲದೇ ಯಾವುದೇ ದೊಡ್ಡ ಹಾನಿಯಾಗಿಲ್ಲ. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ಬೃಹತ್ ತನಿಖೆಯನ್ನು ಪ್ರಾರಂಭಿಸಲಾಗಿದೆ. ಇದಕ್ಕೂ ಮೊದಲು ಸೌದಿ ಅರೇಬಿಯಾದ ಮೇಲೆ ಹೌತಿಗಳು ಹಲವು ಬಾರಿ ಇದೇ ರೀತಿಯ ದಾಳಿ ನಡೆಸಿದ್ದಾರೆ.

Recommended Video

Virat Kohli ನಿರ್ಧಾರದಿಂದ ಆಘಾತಗೊಂಡ Rohit Sharma ಹೇಳಿದ್ದೇನು? | Oneindia Kannada

ಆದರೆ ಈಗ ಅವರು ಯುಎಇಯನ್ನು ಗುರಿಯಾಗಿಸಿಕೊಂಡಿದ್ದಾರೆ. ಸೌದಿ ಅರೇಬಿಯಾದ ತೈಲ ಘಟಕಗಳು ಮತ್ತು ಹಲವಾರು ನಗರಗಳ ಮೇಲೆ ಹೌತಿಗಳು ಕ್ಷಿಪಣಿಗಳನ್ನು ಹಾರಿಸಿದ್ದಾರೆ. ಯೆಮೆನ್ ಯುದ್ಧದಲ್ಲಿ ಸೌದಿ ಅರೇಬಿಯಾ ಭಾಗಿಯಾಗಿರುವುದಕ್ಕೆ ಅವರು ಕೋಪಗೊಂಡಿದ್ದಾರೆ.

English summary
At least three oil tankers carrying fuel exploded in a suspected drone attack that was reported near Abu Dhabi international airport in the United Arab Emirates (UAE) on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X