ಇಂಡೋನೇಷ್ಯಾದಲ್ಲಿ ಭೂಕಂಪ; ಹಾನಿ ಇಲ್ಲ, ಸುನಾಮಿ ಎಚ್ಚರಿಕೆ ಇಲ್ಲ
ಜಕಾರ್ತಾ, ಆಗಸ್ಟ್ 19 : ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. 6 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ.
ಬುಧವಾರ ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ. ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಮೊದಲ ಕಂಪನ 6.8 ತೀವ್ರತೆ ಹೊಂದಿತ್ತು. ಆರು ನಿಮಿಷಗಳ ಬಳಿಕ ಮತ್ತೊಮ್ಮೆ ಭೂಮಿ ಕಂಪಿಸಿದ್ದು 6.9 ತೀವ್ರತೆ ದಾಖಲಾಗಿದೆ. ಎರಡು ಬಾರಿ ಭೂಮಿ ಕಂಪಿಸಿದರೂ ಸಹ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.
ಅಮೆರಿಕದ ಭೂ ವೈಜ್ಞಾನಿಕ ಸಮೀಕ್ಷೆಯ ವರದಿ ಎರಡು ಬಾರಿ ಭೂಮಿ ಕಂಪಿಸಿದ್ದನ್ನು ಖಚಿತಪಡಿಸಿದೆ. ಸುಮತ್ರಾ ದ್ವೀಪದ ಬಳಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ.
ಬೆಂಕುಲು ಬಳಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಪದೇ ಪದೇ ಭೂಮಿ ಕಂಪಿಸುತ್ತಿರುವುದು ಆತಂಕ ಮೂಡಿಸಿದೆ ಎಂದು ನಿವಾಸಿಯೊಬ್ಬರು ಟ್ವೀಟ್ ಮಾಡಿದ್ದಾರೆ.
270 ಮಿಲಿನಯನ್ ಜನರು ಇರುವ ದ್ವೀಪ ಇಂಡೋನೇಷ್ಯಾ ಪದೇ ಪದೇ ಇಲ್ಲಿ ಭೂಕಂಪ ಸಂಭವಿಸುತ್ತದೆ. ಹಲವು ಬಾರಿ ಭೂಕಂಪವಾದಾಗ ಸುನಾಮಿ ಎಚ್ಚರಿಕೆಯನ್ನು ನೀಡಲಾಗುತ್ತದೆ.
2019ರ ಡಿಸೆಂಬರ್‌ನಲ್ಲಿ ಸುಮತ್ರಾ ದ್ವೀಪದ ಬಳಿ ಭೂಕಂಪವಾಗಿತ್ತು. ಆಗ 102 ಜನರು ಮೃತಪಟ್ಟಿದ್ದರು. ಈ ವರ್ಷವೇ ಹಲವು ಬಾರಿ ರಿಕ್ಟರ್ ಮಾಪಕದಲ್ಲಿ 6ರ ತೀವ್ರತೆ ದಾಖಲಾಗಿರುವ ಹಲವು ಭೂಕಂಪ ಸಂಭವಿಸಿದೆ.












Click it and Unblock the Notifications