ರಷ್ಯಾ ವಿವಿಯಲ್ಲಿ ಅಗ್ನಿ ದುರಂತ, ಭಾರತೀಯ ವಿದ್ಯಾರ್ಥಿನಿಯರು ಬಲಿ

Posted By:
Subscribe to Oneindia Kannada

ಮಾಸ್ಕೋ, ಫೆ. 16: ರಷ್ಯಾದ ಸ್ಮೋಲೆನ್ಸ್ಕ್ ವಿಶ್ವವಿದ್ಯಾಲಯದಲ್ಲಿ ಸಂಭವಿಸಿದ ಅಗ್ನಿ ಅಕಸ್ಮಿಕದಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ಸುದ್ದಿಯನ್ನು ವಿದೇಶಾಂಗ ಖಾತೆ ಸಚಿವೆ ಸುಷ್ಮ ಸ್ವರಾಜ್ ಖಚಿತಪಡಿಸಿದ್ದಾರೆ.

ಇಬ್ಬರು ಭಾರತೀಯ ಮೂಲದ ವಿದ್ಯಾರ್ಥಿನಿಯರು (ಇಬ್ಬರು ಮಹಾರಾಷ್ಟ್ರ ಮೂಲದವರು) ಸಾವನ್ನಪ್ಪಿದ್ದಾರೆ ಎಂದು ಹೇಳಲು ವಿಷಾದಿಸುತ್ತೇನೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

Karishma and Pooja

ಮಹಾರಾಷ್ಟ್ರ ಮೂಲದ ಪೂಜಾ ಕಲ್ಲೂರು (22 ವರ್ಷ) ಹಾಗೂ ಕರಿಷ್ಮಾ ಭೋಂಸ್ಲೆ (20) ಅವರು ಬೆಂಕಿ ಆಕಸ್ಮಿಕ ಸಂಭವಿಸುವಾಗ ವಿದ್ಯಾನಿಲಯದ ನಾಲ್ಕನೇ ಹಂತಸ್ತಿನಲ್ಲಿದ್ದ ರೂಮಿನಲ್ಲಿ ಸುಖ ನಿದ್ರೆಯಲ್ಲಿದ್ದರು. ಈ ಅವಘಡದಲ್ಲಿ ಇನ್ನೂ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಬೆಂಕಿ ಕಾಣಿಸಿಕೊಂಡು ಈ ಅಗ್ನಿ ಅವಘಡ ಸಂಭವಿಸಿದೆ.ಉಸಿರುಗಟ್ಟಿ ವಿದ್ಯಾರ್ಥಿನಿಯರು ಮೃತ ಪಟ್ಟಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆಯಿಂದ ತಿಳಿದುಬಂದಿದ್ದು, ತನಿಖೆಯ ವಿವರಗಳನ್ನು ಇನ್ನಷ್ಟೇ ಬಹಿರಂಗವಾಗಬೇಕಿದೆ ಎಂದು ಸುಷ್ಮಾ ಹೇಳಿದ್ದಾರೆ.


ಮೃತ ವಿದ್ಯಾರ್ಥಿನಿಯರ ಮೃತದೇಹ ರಷ್ಯಾದ ರಾಜಧಾನಿ ಮಾಸ್ಕೋ ತಲುಪಲಿದ್ದು, ಮಾಸ್ಕೋದಿಂದ ಮುಂಬೈಗೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಮತ್ತೊಂದು ದುರಂತ: ರಷ್ಯಾದ ಯರೊಸ್ಲ್ವಾಲ್ ನಗರದ 10 ಮಹಡಿಯ ವಸತಿ ಕಟ್ಟಡವೊಂದರಲ್ಲಿ ಶಕ್ತಿಶಾಲಿ ಅನಿಲ ಸೋರಿಕೆ ಸ್ಫೋಟ ಸಂಭವಿಸಿದ್ದು, ಒಬ್ಬರು ಮೃತಪಟ್ಟಿದ್ದು, 39ಕ್ಕೂ ಅಧಿಕ ಜನ ಜೀವನ್ಮರಣ ಹೋರಾಟ ನಡೆಸಿದ್ದಾರೆ. ನಾಲ್ವರನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿದ್ದು, ಅಪಾಯದಲ್ಲಿ ಸಿಲುಕಿದವರಲ್ಲಿ 13 ಜನ ಹಸುಳೆಗಳಿದ್ದಾರೆ ಎಂದು ವರದಿಯಾಗಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two Indian girl students were killed in a fire at a medical university in western Russia, External Affairs Minister Sushma Swaraj tweeted late Monday.
Please Wait while comments are loading...