
ಟ್ವಿಟ್ಟರ್ ಹೊಸ ಪ್ರಕಟಣೆ: ಎಲಾನ್ ಮಸ್ಕ್ ಆದೇಶದಿಂದ ಬೆಚ್ಚಿಬಿದ್ದ ಉದ್ಯೋಗಿಗಳು!
ಟೆಸ್ಲಾ ಮಾಲೀಕ ಹಾಗೂ ಟ್ವಿಟ್ಟರ್ ಖರೀದಿಸಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಮೂಲಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಇದರಲ್ಲಿ ಉದ್ಯೋಗಿಗಳ ಹಿತಾಸಕ್ತಿಯ ಕಾಳಜಿ ಅವರಿಗೆ ಕಾಣುತ್ತಿಲ್ಲ. ಎಲಾನ್ ಮಸ್ಕ್ ತಮ್ಮ ಉದ್ಯೋಗಿಗಳಿಗೆ ದೊಡ್ಡ ನಷ್ಟವನ್ನು ಉಂಟಾಗಿದೆ. ಟ್ವಿಟ್ಟರ್ ಸಂಸ್ಥೆಯಲ್ಲಿ ದಿನಕ್ಕೆ 12 ಗಂಟೆಗಳ ಕೆಲಸ ಮಾಡಬೇಕು ಜೊತೆ 7 ದಿನಗಳ ಕೆಲಸ ಮಾಡಬೇಕಾಗುತ್ತದೆ ಎಂದು ಮಸ್ಕ್ ಟ್ವಿಟರ್ ಘೋಷಿಸಿದ್ದಾರೆ ಎಂದು ವರದಿಯಾಗಿದೆ. ಈ ಆದೇಶದಿಂದ ಟ್ವಿಟ್ಟರ್ ಉದ್ಯೋಗಿಗಳು ಬೆಚ್ಚಿಬಿದ್ದಿದ್ದಾರೆ.
ಟೆಸ್ಲಾ ಮಾಲೀಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್ ಖರೀದಿಸಿದ ತಕ್ಷಣ ಬದಲಾವಣೆಗೆ ಸಂಬಂಧಿಸಿದ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಇದರಿಂದ ಟ್ವಿಟ್ಟರ್ ನೌಕರರಿಗೆ ಭಾರಿ ನಷ್ಟವಾಗುತ್ತಿದೆ. ಮೂಲಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, ಕೆಲವು ಟ್ವಟ್ಟರ್ ಇಂಜಿನಿಯರ್‌ಗಳಿಗೆ ದಿನಕ್ಕೆ 12 ಗಂಟೆಗಳು ಮತ್ತು ವಾರದಲ್ಲಿ 7 ದಿನ ಕೆಲಸ ಮಾಡಲು ಕೇಳಲಾಗಿದೆ. ಎಲಾನ್ ಮಸ್ಕ್ ಅವರ ಹೊಸ ನಿರ್ಧಾರಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಟ್ವಿಟರ್ ವ್ಯವಸ್ಥಾಪಕರು ಉದ್ಯೋಗಿಗಳಿಗೆ ತಿಳಿಸಿದ್ದಾರೆ.
ಎಲೋನ್ ಮಸ್ಕ್ V/s ಟ್ವಿಟ್ಟರ್: ಟೆಸ್ಲಾ ಸಿಇಒ ವಿರುದ್ಧ ಫೆಡರಲ್ ತನಿಖೆ
"ಎಲಾನ್ ಮಸ್ಕ್ ಅವರ ಆಕ್ರಮಣಕಾರಿ ನಿರ್ಧಾರಗಳನ್ನು ಗಡುವಿನೊಳಗೆ ಪೂರೈಸಲು ಟ್ವಿಟ್ಟರ್ ಮ್ಯಾನೇಜರ್‌ಗಳು ಕೆಲವು ಉದ್ಯೋಗಿಗಳಿಗೆ ವಾರದಲ್ಲಿ 7 ದಿನಗಳು ಮತ್ತು ಪ್ರತಿದಿನ 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದಾರೆ" ಎಂದು ವರದಿ ಹೇಳಿದೆ. ಉದ್ಯೋಗ ಕಳೆದುಕೊಳ್ಳುವ ಅಪಾಯ ಸೃಷ್ಟಿಯಾಗಿದೆ. ಹೆಚ್ಚುವರಿ ವೇತನ ಅಥವಾ ಕೆಲಸದ ಭದ್ರತೆಯ ಬಗ್ಗೆ ಚರ್ಚಿಸದೆ ಹೆಚ್ಚು ಕೆಲಸ ಮಾಡಲು ನೌಕರರನ್ನು ಕೇಳಲಾಗಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಎಂಜಿನಿಯರ್‌ಗಳಿಗೆ ನವೆಂಬರ್ ಆರಂಭದಲ್ಲಿ ಗಡುವು ನೀಡಲಾಗಿದೆ ಎಂದು ವರದಿಯಾಗಿದೆ. ಅವಶ್ಯಕತೆಗಳನ್ನು ಪೂರೈಸಲು ವಿಫಲವಾದರೆ ಅವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಬಹುದು. ಆದೇಶವನ್ನು ಅನುಸರಿಸಲು ನೌಕರರನ್ನು ಒತ್ತಾಯಿಸಲು ಎಲಾನ್ ಮಸ್ಕ್ ಶೇ. 50 ಪ್ರತಿಶತ ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ವರದಿ ಹೇಳಿದೆ.
ಪಾವತಿಸಿದ ಪರಿಶೀಲನೆಗೆ ನವೆಂಬರ್ 7 ಕೊನೆಯ ದಿನಾಂಕ
ಎಲೋನ್ ಮಸ್ಕ್ ಟ್ವಿಟ್ಟರ್ ಬ್ಲೂ ಚಂದಾದಾರಿಕೆಗಳ ಬೆಲೆಯನ್ನು ಹೆಚ್ಚಿಸಲು ಮತ್ತು ನೀಲಿ ಟಿಕ್ ಪರಿಶೀಲನೆ ಪ್ರಕ್ರಿಯೆಯನ್ನು ಪರಿಷ್ಕರಿಸಲು ಯೋಜಿಸಿದ್ದಾರೆ. ಇದಕ್ಕಾಗಿ ಮಸ್ಕ್ ಟ್ವಿಟ್ಟರ್ ಇಂಜಿನಿಯರ್ ಗಳಿಗೆ ನವೆಂಬರ್ 7ರೊಳಗೆ ಪೇಯ್ಡ್ ವೆರಿಫಿಕೇಶನ್ ಫೀಚರ್ ಲಾಂಚ್ ಮಾಡಲು ಗಡುವು ನೀಡಿದ್ದು, ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳಲಿದ್ದಾರೆ.
ಈಗ ಜನರು ಟ್ವಿಟರ್‌ನಲ್ಲಿ ಬ್ಲೂ ಟಿಕ್‌ಗಾಗಿ ಪ್ರತಿ ತಿಂಗಳು $ 8 ಅಂದರೆ ಸುಮಾರು 660 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಎಲಾನ್ ಮಸ್ಕ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಎಲಾನ್ ಮಸ್ಕ್ ಸತತವಾಗಿ ಹಲವಾರು ಟ್ವೀಟ್‌ಗಳನ್ನು ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಯಾರಿಗೆ ನೀಲಿ ಟಿಕ್ ಇದೆ ಮತ್ತು ಯಾರಿಗೆ ಇಲ್ಲ ಎಂದು ಅವರು ಬರೆದಿದ್ದಾರೆ. ಇದನ್ನು ಮಾಡುವ ಪ್ರಸ್ತುತ ವಿಧಾನವು ಸಂಪೂರ್ಣವಾಗಿ ಊಳಿಗಮಾನ್ಯ ಮತ್ತು ಅಸಂಬದ್ಧವಾಗಿದೆ. ಜನರ ಕೈಯಲ್ಲಿ ಅಧಿಕಾರ ಇರಬೇಕು. ತಿಂಗಳಿಗೆ ಕೇವಲ $8 ದರದಲ್ಲಿ ಬ್ಲೂ ಟಿಕ್ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.