ಕೊರೊನಾ ಭೀತಿ: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಿ ಎಂದ ಟ್ವಿಟ್ಟರ್

ನ್ಯೂಯಾರ್ಕ್ , ಮೇ 13: ಕೊರೊನಾ ವೈರಸ್ 190ಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿದೆ. ಹೀಗಾಗಿ ಟ್ವಿಟ್ಟರ್ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ.

ಕೊರೊನಾ ಸೋಂಕು ಕಡಿಮೆಯಾಗುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಆತಂಕದ ನಡುವೆಯೇ ತನ್ನ ಸಿಬ್ಬಂದಿಗಳ ಸುರಕ್ಷತೆಗೆ ಮುಂದಾಗಿರುವ ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಶಾಶ್ವತವಾಗಿ 'ಮನೆಯಿಂದಲೇ ಕೆಲಸ' ಮಾಡುವಂತೆ ಸಿಬ್ಬಂದಿಗಳಿಗೆ ಅನುಮತಿ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಟ್ವಿಟರ್ ವಕ್ತಾರರು, ಮುಂಬರುವ ಸೆಪ್ಟೆಂಬರ್ ನಿಂದಲೇ ನಾವು ಕಚೇರಿ ತೆರೆಯಲು ಸಿದ್ಧರಿದ್ದೇವೆ. ಆದರೆ ಕೊರೊನಾ ಸಾಂಕ್ರಾಮಿಕ ಪ್ರಸರಣ ತಗ್ಗದ ಹೊರತು ಅದು ಸಾಧ್ಯವಿಲ್ಲ. ಅಲ್ಲದೆ ಕೊರೋನಾ ಸದ್ಯಕ್ಕೆ ತಗ್ಗುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ.

Twitter Allows Employees To Work From Home Forever

ಹೀಗಾಗಿ ನಮ್ಮ ಸಿಬ್ಬಂದಿಗಳಿಗೆ ನಾವು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು (ವರ್ಕ್ ಫ್ರಂ ಹೋಮ್) ಅನುಮತಿ ನೀಡಿದ್ದೇವೆ. ಕೊರೊನಾ ಲಾಕ್ ಡೌನ್ ಮುಕ್ತಾಯದ ಬಳಿಕವೂ ಅವರು ಮನೆಯಿಂದಲೇ ಕಾರ್ಯ ನಿರ್ವಹಿಸಬಹುದು. ಸಿಬ್ಬಂದಿಗಳ ಸುರಕ್ಷತೆಯೇ ನಮಗೆ ಮುಖ್ಯ ಎಂದು ಹೇಳಿದ್ದಾರೆ.

ಕಚೇರಿಯ ಪುನಾರಂಭ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಕೊರೊನಾ ಸಾಂಕ್ರಾಮಿಕ ದಂತಹ ಈ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಪರಿಸ್ಥಿತಿ ಯಾವಾಗ ಸಹಕರಿಸುತ್ತದೆಯೋ ಆಗ ನಮ್ಮ ಕಚೇರಿಗಳನ್ನು ತೆರೆಯಲಾಗುತ್ತದೆ. ಕಚೇರಿ ಪುನಃ ತೆರೆಯುವುದು ನಮ್ಮ ಆಧ್ಯತೆಯಾಗಿದೆಯಾದರೂ, ಸಿಬ್ಬಂದಿಗಳ ಸುರಕ್ಷತೆ ಕೂಡ ನಮಗೆ ಅಷ್ಟೇ ಮುಖ್ಯ.

ಕಚೇರಿ ಯಾವಾಗ ಬರಬೇಕು ಎಂದು ಅವರು ನಿರ್ಧರಿಸುತ್ತಾರೆಯೋ ಆಗಲೇ ಬರಬಹುದು. ಪ್ರಸ್ತುತ ಸೆಪ್ಟೆಂಬರ್ ವರೆಗೂ ಕಚೇರಿಯ ತೆರೆಯದಂತೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ತಾವಿರುವ ಸ್ಥಳದಿಂದಲೇ ಕೆಲಸ ಮಾಡಬಹುದು. ಕಳೆದ ಕೆಲ ತಿಂಗಳುಗಳಿಂದ ನಾವು ಇದನ್ನು ಮಾಡಿ ತೋರಿಸಿದ್ದೇವೆ. ಯಾವುದೇ ಸ್ಥಳದಿಂದ ಬೇಕಾದರೂ ನಾವು ಕೆಲಸ ಮಾಡಬಹುದು. ಹೀಗಾಗಿ ನಮ್ಮ ಸಿಬ್ಬಂದಿಗಳು ಮನೆಯಿಂದಲೇ ಅಥವಾ ತಾವಿರುವ ಸ್ಥಳದಿಂದಲೇ ಕಾರ್ಯ ನಿರ್ವಹಿಸಬಹುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+