Donald Trump: ಭಾರತದ ಗಾರ್ಮೆಂಟ್ಸ್ ಉದ್ಯಮವನ್ನು ಕಾಡುತ್ತಿರುವ ಡೊನಾಲ್ಡ್ ಟ್ರಂಪ್!

ಭಾರತ ಬೆಳೆಯುತ್ತಿರುವ ದೇಶ, ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಬಟ್ಟೆ ಅಂದ್ರೆ ಗಾರ್ಮೆಂಟ್ಸ್ ಉದ್ಯಮ ಬಹುಮುಖ್ಯ ಅಂಗವಾಗಿದೆ. ಅದರಲ್ಲೂ ಲಕ್ಷಾಂತರ ಜನರಿಗೆ ಕೆಲಸ ಕೊಟ್ಟಿರುವ ಗಾರ್ಮೆಂಟ್ಸ್ ಉದ್ಯಮ ನಂಬಿ ಬಹುಸಂಖ್ಯಾತ ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಇದೀಗ ದೂರದ ದೇಶ ಅಮೆರಿಕದಿಂದ ಬಂದಿರುವ ಒಂದು ಸಂದೇಶ ಭಾರತದ ಸಾವಿರಾರು ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಲೀಕರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಇಷ್ಟು ಮಾತ್ರವಲ್ಲದೆ ಲಕ್ಷಾಂತರ ಕಾರ್ಮಿಕರು ಬೀದಿಗೆ ಬೀಳುವ ಭಯ ಕೂಡ ಶುರುವಾಗಿಬಿಟ್ಟಿದೆ.

ಡೊನಾಲ್ಡ್ ಟ್ರಂಪ್ ಭಾರತೀಯರ ಜೊತೆಗೆ ಚನ್ನಾಗಿಯೇ ಇದ್ದರು, ಅದರಲ್ಲೂ ಭಾರತ ಮೂಲದವರ ಮತ ಅಂದ್ರೆ ವೋಟ್ ಪಡೆದುಕೊಂಡೇ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಿದ್ದು. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಆಗುವ ವಿಚಾರದಲ್ಲಿ ಭಾರತ ಮೂಲದ, ಕೋಟಿ ಕೋಟಿ ಅಮೆರಿಕನ್ನರ ಬೆಂಬಲ ಕೂಡ ನಿರಂತರವಾಗಿ ಇತ್ತು. ಆದರೆ ಗೆಲ್ಲುವ ತನಕ ಭಾರತ & ಭಾರತೀಯರ ಕಾಲು ಹಿಡಿದಿದ್ದ ಇದೇ ಡೊನಾಲ್ಡ್ ಟ್ರಂಪ್ ಇದೀಗ, ಭಾರತೀಯರ ಬೆನ್ನಿಗೇ ಚೂರಿ ಹಾಕುತ್ತಿರುವ ಆರೋಪ ಕೇಳಿ ಬಂದಿದೆ.

Trump s Additional Tariff Causes Textile Production Halt in India

ಭಾರತೀಯರ ಬೆನ್ನಿಗೆ ಟ್ರಂಪ್ ಚೂರಿ

ಆಗಸ್ಟ್ 27 ಅಂದ್ರೆ ಇಂದಿನಿಂದ ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆಯ ಆದೇಶ ಜಾರಿಗೆ ತರಲು ಅಮೆರಿಕ ಮುಂದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಭಾರತ & ಅಮೆರಿಕ ನಡುವಿನ ಸಂಬಂಧ ಹಾಳು ಮಾಡುವ ಜೊತೆಗೆ ಭಾರತದಲ್ಲಿ ಇರುವ ಅನೇಕ ಉದ್ಯಮಗಳನ್ನ ಕೂಡ ಸಂಕಷ್ಟಕ್ಕೆ ನೂಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿಕೆ ಮಾಡಿದ್ದ ಶೇ. 25 ಹೆಚ್ಚುವರಿ ಸುಂಕವೂ ಸೇರಿ ಒಟ್ಟು ಶೇಕಡಾ 50ರಷ್ಟು ಟ್ಯಾಕ್ಸ್ ಅನ್ನ ಭಾರತ ದೇಶ ರಫ್ತು ಮಾಡುವ ವಸ್ತುಗಳ ಮೇಲೆ ಇದೀಗ ವಿಧಿಸಲು ನಿರ್ಧರಿಸಲಾಗಿದೆ.

ಗಾರ್ಮೆಂಟ್ಸ್ ಉದ್ಯಮಕ್ಕೆ ಭಾರಿ ಪೆಟ್ಟು?

ಅಂದಹಾಗೆ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟ (FIEO) ಈಗ ತಿಳಿಸಿರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ರಫ್ತು ಮಾಡುವ ವಸ್ತುಗಳ ಮೇಲೆ ಹೆಚ್ಚುವರಿ ಶೇಕಡಾ 25 ಸುಂಕ ವಿಧಿಸಿದ ಕಾರಣ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಇದರ ಪರಿಣಾಮ ನೇರವಾಗಿ ಗಾರ್ಮೆಂಟ್ಸ್ ಅಂದ್ರೆ ಬಟ್ಟೆ ಉದ್ಯಮದ ಮೇಲೆ ಬಿದ್ದಿದ್ದು, ತಿರುಪುರ್, ನೊಯ್ಡಾ ಮತ್ತು ಸುರತ್‌ ಸೇರಿದಂತೆ ಹಲವು ಪ್ರಮುಖ ನಗರಗಳ ಗಾರ್ಮೆಂಟ್ಸ್ ಮಾಲೀಕರು ಸ್ಪರ್ಧಾತ್ಮಕತೆಯ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಇದೀಗ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡುವ ಜೊತೆಗೇ, ಭಾರತೀಯ ಗಾರ್ಮೆಂಟ್ಸ್ ಉದ್ಯಮದ ಮೇಲೆ ಕೂಡ ಕರಿನೆರಳ ಚಾಚುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+