ಥೂ ನಿಮ್ಮ ಯೋಗ್ಯತೆಗೆ... ಇಸ್ರೇಲ್ & ಇರಾನ್ ವಿರುದ್ಧ ರೊಚ್ಚಿಗೆದ್ದ ಡೊನಾಲ್ಡ್ ಟ್ರಂಪ್! Donald Trump
ಇಸ್ರೇಲ್ ಜೊತೆಗೆ ಯಾವಾಗಲೂ ಅಮೆರಿಕ ನಿಂತಿರುತ್ತದೆ, ಇದೇ ಕಾರಣಕ್ಕೆ ಇಸ್ರೇಲ್‌ಗೆ ಕೂಡ ಧೈರ್ಯ ಇದೆ ಅನ್ನೋ ಮಾತು ಇದೆ. ಹಾಗೇ ಮತ್ತೊಂದು ಕಡೆ ಅಮೆರಿಕ & ಇಸ್ರೇಲ್ ಬೇರೆ ಬೇರೆ ಅಲ್ಲ, ಎರಡೂ ದೇಶಗಳು ಒಂದೇ ಅನ್ನೋ ಮಾತು ಕೂಡ ಇದೆ. ಇಂತಹ ಸಮಯದಲ್ಲೇ ಇರಾನ್ ಜೊತೆಗೆ ಯುದ್ಧ ಮಾಡುತ್ತಿರುವ ಇಸ್ರೇಲ್ ಬೆನ್ನಿಗೆ ನಿಂತಿತ್ತು ಅಮೆರಿಕ. ಅಲ್ಲದೇ ಹೆಂಗೋ ಎದ್ದು & ಬಿದ್ದು ಒದ್ದಾಡಿ ಯುದ್ಧವನ್ನ ಕೂಡ ನಿಲ್ಲಿಸಿತ್ತು. ಹೀಗಿದ್ದಾಗಲೇ ಮತ್ತೆ ಇಸ್ರೇಲ್ & ಇರಾನ್ ಬಡಿದಾಡಲು ಶುರು ಮಾಡಿವೆ.
ಹೌದು, ಕದನ ವಿರಾಮ ಘೋಷಣೆ ನಂತರ ಕೂಡ ಇಸ್ರೇಲ್ & ಇರಾನ್ ಬಡಿದಾಟ ನಿಂತಿಲ್ಲ. ಈ ಕಿತ್ತಾಟ ನೋಡಿ ನೋಡಿ ಅಮೆರಿಕ ಕೂಡ ರೊಚ್ಚಿಗೆದ್ದು ಕೂತಿದೆ. ಇಷ್ಟೆಲ್ಲಾ ಕಷ್ಟಪಟ್ಟು ಯುದ್ಧ ನಿಲ್ಲಿಸಿದ್ದರೂ, ಇಸ್ರೇಲ್ ಸೈಲೆಂಟ್ ಆಗಿ ಇರುತ್ತಿಲ್ಲ. ಇರಾನ್ ಕೂಡ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಅಂತಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ರೊಚ್ಚಿಗೆದ್ದಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನ ನೀಡುತ್ತಾ, ಇಸ್ರೇಲ್ & ಇರಾನ್ ವಿರುದ್ಧ ಕೆಟ್ಟದಾಗಿ ಬೈದಿದ್ದಾರೆ ಟ್ರಂಪ್ ಅವರು.

ರೊಚ್ಚಿಗೆದ್ದ ಅಮೆರಿಕ ಅಧ್ಯಕ್ಷ ಟ್ರಂಪ್!
ಯೆಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಟ್ಟದಾಗಿ ಬೈದು ಇಸ್ರೇಲ್ & ಇರಾನ್ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ಹೊರ ಹಾಕಿದ್ದಾರೆ. ತಾವು ಹೇಳಿ ಯುದ್ಧ ನಿಲ್ಲಿಸಿದ್ದರೂ ದಾಳಿ ಮುಂದುವರಿಸಿದ ಕಾರಣಕ್ಕಾಗಿ ಇಸ್ರೇಲ್ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿ, ಗರಂ ಅಗಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ವೈಟ್‌ಹೌಸ್ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು, ಇಸ್ರೇಲ್ ಇಂತಹ ಸಮಯದಲ್ಲಿ ತಾಳ್ಮೆಯಿಂದ ಇರಬೇಕು. ಅದನ್ನು ಬಿಟ್ಟು ಇರಾನ್ ವಿರುದ್ಧ ದಾಳಿ ಮಾಡಿ ಕದನ ವಿರಾಮ ಉಲ್ಲಂಘನೆ ಮಾಡಬಾರದು ಅಂತಾ ಸಲಹೆ ನೀಡಿದ್ದಾರೆ.












Click it and Unblock the Notifications