ಅಮೆರಿಕ ತಲುಪಿದ ಉಕ್ರೇನ್ ಅಧ್ಯಕ್ಷ, ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್?

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ತಲುಪಿದ್ದಾರೆ, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸಲು ಇದೀಗ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ತಲುಪಿದ್ದಾರೆ. ರಷ್ಯಾ ಜೊತೆಗೆ ಭೀಕರ ಯುದ್ಧ ನಡೆಸುತ್ತಿರುವ ಉಕ್ರೇನ್ ಇಂತಹ ಆತಂಕದ ಸಮಯದಲ್ಲಿ ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಅಮೆರಿಕದ ಜೊತೆಗೆ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಲು ಮುಂದಾಗಿದೆ. ಇದೇ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಮಹತ್ವದ ಸಲಹೆ ನೀಡಿದ್ದಾರೆ.

ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬೇಕಿದೆ, ಎರಡೂ ದೇಶಗಳ ಯುದ್ಧ ನಿಂತರೆ ಮಾತ್ರ ಈಗ ಹಾಳಾಗಿರುವ ನೆಮ್ಮದಿ ಮತ್ತೆ ಸಾಮಾನ್ಯ ಸ್ಥಿತಿಗೆ ಬರಲಿದೆ. ಅದರಲ್ಲೂ, ಇಬ್ಬರ ಜಗಳದಲ್ಲಿ ಹೈರಾಣಾಗಿ ಹೋಗಿರುವ ಯುರೋಪ್ ದೇಶಗಳಿಗೆ ಇದೀಗ ಉಳಿದಿರುವ ಕೊನೆಯ ಭರವಸೆಯೇ ಕದನ ವಿರಾಮ. ಯಾಕಂದ್ರೆ ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ಹಲವು ನಿರ್ಬಂಧ ಹೇರಿವೆ. ಹೀಗಾಗಿ, ರಷ್ಯಾ ಮೂಲಕ ಬರುತ್ತಿದ್ದ ವಸ್ತುಗಳಿಗೆ ಬ್ರೇಕ್ ಬಿದ್ದಿದ್ದು ಒದ್ದಾಟವೂ ಶುರುವಾಗಿದೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಮಹತ್ವದ ಸಲಹೆ ನೀಡಿದ್ದಾರೆ.

Trump Urges Kyiv to Accept Compromises for Peace with Moscow

ಉಕ್ರೇನ್‌ಗೆ ಟ್ರಂಪ್ ಸಲಹೆ ಏನು?

ಜೋ ಬೈಡನ್ ಆಡಳಿತ ಇದ್ದಾಗ ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿತ್ತು. ಆದರೆ ಇದೇ ಯುದ್ಧ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ಬೇರೆಯದ್ದೇ ರೀತಿ ತಿರುವ ಪಡೆದು, ಯುದ್ಧ ನಿಲ್ಲುವ ಹಂತಕ್ಕೆ ಬಂದಿದೆ. ಇಷ್ಟುದಿನ ರಷ್ಯಾ ಜೊತೆಗೆ ಸಂಧಾನ ಬೇಡ ಎನ್ನುತ್ತಿದ್ದ ಉಕ್ರೇನ್ ಈಗ ದಾರಿಗೆ ಬಂದಂತೆ ಕಾಣುತ್ತಿದೆ. ಇದೀಗ ಅಮೆರಿಕ ಪ್ರವಾಸದಲ್ಲಿ ಇರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಮಹತ್ವದ ಸಲಹೆ ನೀಡಿರುವ ಟ್ರಂಪ್, ರಷ್ಯಾ ಜೊತೆಗೆ ಸಂಧಾನ ಮಾಡಿಕೊಳ್ಳಿ ಎಂದಿದ್ದಾರೆ. ಈ ಮೂಲಕ ಅಮೆರಿಕದ ನಡೆ ಉಕ್ರೇನ್‌ಗೆ ಆಘಾತವನ್ನೇ ನೀಡಿದೆ.

ವೊಲೊಡಿಮಿರ್ ಝೆಲೆನ್ಸ್ಕಿ ವಿರುದ್ಧ ಆಕ್ರೋಶ?

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪದೇ ಪದೇ ವಿವಾದ ಮೈಮೇಲೆ ಎಳೆದುಕೊಂಡು ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ಭಾರತದ ವಿರುದ್ಧ ಕೂಡ ಮಾತನಾಡಿದ್ದ ಇದೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಆ ನಂತರ ಕ್ಷಮೆ ಕೇಳಿದ್ದು ಆಗಿತ್ತು. ಇದರ ಜೊತೆಯಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ವಿರೋಧಿ ಗುಂಪಿನ ಜೊತೆಗೆ ಗುರಿತಿಸಿಕೊಂಡ ಆರೋಪ ಕೂಡ ಇತ್ತು. ಈಗ ಅದೆಲ್ಲದಕ್ಕೂ ಸರಿಯಾಗೇ ರಿವೇಂಜ್ ತೆಗೆದುಕೊಳ್ಳುತ್ತಿದ್ದಾರೆ ಟ್ರಂಪ್ ಎಂಬ ಮಾತು ಹರಿದಾಡುತ್ತಿದೆ. ಇವರ ಈ ತಿಕ್ಕಾಟದಲ್ಲಿ ಇಡೀ ಉಕ್ರೇನ್ ವಿಲವಿಲ ಒದ್ದಾಡುವ ಸ್ಥಿತಿಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+