ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧ ಹೇರಲು ಡೊನಾಲ್ಡ್ ಟ್ರಂಪ್ ತಯಾರಿ?
ಡೊನಾಲ್ಡ್ ಟ್ರಂಪ್‌ಗೆ ಬಾಯಿ ಬಡಿದುಕೊಂಡು, ಬಾಯಿ ಬಡಿದುಕೊಂಡು ಸಾಕಾಗಿ ಹೋಗಿದೆ. ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಏನೆಲ್ಲಾ ಪ್ರಯತ್ನ ಮಾಡಿದರೂ ಅದು ವರ್ಕೌಟ್ ಆಗ್ತಾ ಇಲ್ಲ. ಟ್ರಂಪ್ ಸರ್ಕಾರದ ಅಧಿಕಾರಿಗಳು ಖುದ್ದಾಗಿ ಸೌದಿ ಅರೇಬಿಯಾಗಿ ಹೋಗಿ, ಅಲ್ಲಿಂದಲೇ ಸಾಲು ಸಾಲು ಸಭೆಗಳನ್ನು ನಡೆಸಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸದೇ ಬಡಿದಾಡುತ್ತಿವೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ರೊಚ್ಚಿಗೆದ್ದು ಏನು ಹೇಳಿದ್ದಾರೆ ಗೊತ್ತಾ?
ಡೊನಾಲ್ಡ್ ಟ್ರಂಪ್ ತಮ್ಮನ್ನ ಶಕ್ತಿಶಾಲಿ ನಾಯಕ ಅಂತಾ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಒಂದು ಕಡೆ ರಷ್ಯಾ & ಉಕ್ರೇನ್ ಬಡಿದಾಡುವ ಸಮಯಕ್ಕೆ ಇನ್ನೊಂದು ಕಡೆ ಇಸ್ರೇಲ್, ಹಮಾಸ್ ನಡುವೆ ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇದು ಅಮೆರಿಕಗೆ ತಲೆನೋವು ತರಿಸಿದೆ. ಯಾಕಂದ್ರೆ ಮಧ್ಯಪ್ರಾಚ್ಯ ದೇಶಗಳೆಲ್ಲ ಸೇರಿ ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ. ಅಲ್ಲದೇ ಗಾಜಾ ಪಟ್ಟಿಯಲ್ಲಿ ಹಿಂಸೆ ನಿಲ್ಲಬೇಕು ಎಂಬುದು ಮಧ್ಯಪ್ರಾಚ್ಯ ದೇಶಗಳ ಒತ್ತಾಯವೂ ಆಗಿದೆ. ಹೀಗಿದ್ದಾಗ ಎರಡೂ ಯುದ್ಧಗಳನ್ನು ನಿಲ್ಲಿಸಲು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಕೈಯಲ್ಲಿ ಆಗ್ತಾನೆ ಇಲ್ಲ. ಇದರಿಂದ ಡೊನಾಲ್ಡ್ ಟ್ರಂಪ್ ಈಗ ರೊಚ್ಚಿಗೆದ್ದು ಕೂತಿದ್ದಾರೆ.

24 ಗಂಟೆಯ ಚಾಲೆಂಜ್ ಪಡೆದಿದ್ದರು!
2022ರಲ್ಲಿ ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾಗಿತ್ತು. ಜೋ ಬೈಡನ್ ಅಮೆರಿಕದ ಅಧ್ಯಕ್ಷರಾಗಿದ್ದ ಸಮಯದಲ್ಲಿ ರಷ್ಯಾ & ಉಕ್ರೇನ್ ನಡುವೆ ಯುದ್ಧ ಜ್ವಾಲೆ ಸ್ಫೋಟವಾಗಿತ್ತು. ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ 24 ಗಂಟೆ ಒಳಗಾಗಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುಸುತ್ತೇನೆ, ಇದು ನನ್ನ ಶಪಥ ಹಾಗೇ.. ಹೀಗೆ.. ಅಂತೆಲ್ಲಾ ಡೊನಾಲ್ಡ್ ಟ್ರಂಪ್ ಅವರು ಬಿಲ್ಡಪ್ ಕೊಟ್ಟಿದ್ದರು. ಆದರೆ ಟ್ರಂಪ್ ಕೊಟ್ಟ ಬಿಲ್ಡಪ್ ವೇಸ್ಟ್ ಆಗಿ ಹೋಗಿದೆ.
ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧ?
ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಂಡು 2 ತಿಂಗಳು ಕಳೆದರೂ ಅಂದ್ರೆ 1,440 ಗಂಟೆಗಳು ಉರುಳಿದರೂ ಈ ಯುದ್ಧ ನಿಂತಿಲ್ಲ. ಹೀಗಾಗಿ ಟ್ರಂಪ್ ಕೂಡ ಈ ವಿಚಾರದಲ್ಲಿ ಬೇಸತ್ತು ಹೋಗಿದ್ದು, ಖಡಕ್ ಕ್ರಮ ಕೈಗೊಳ್ಳಲು ಇದೀಗ ಡೊನಾಲ್ಡ್ ಟ್ರಂಪ್ ಮುಂದಾಗಿದ್ದು ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧ & ತೆರಿಗೆ ಹೇರಿಕೆಗೆ ನಿರ್ಧರಿಸಿದ್ದಾರೆ.
ಈ ಬಗ್ಗೆ ಇದೀಗ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆಯ ಮಾತುಗಳನ್ನ ಆಡಿದ್ದು, ಪುಟಿನ್ ಸರ್ಕಾರ ಈಗ ತಕ್ಷಣವೇ ಕದನ ವಿರಾಮ ಬಗ್ಗೆ ನಿರ್ಧರಿಸಬೇಕು ಎಂದಿದ್ದಾರೆ. ಅಲ್ಲದೆ ರಷ್ಯಾ ಅಧ್ಯಕ್ಷರು ಈ ವಿಚಾರದಲ್ಲಿ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಸರಿ ಇರಲ್ಲ ಅಂತಲೂ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಡೊನಾಲ್ಡ್ ಟ್ರಂಪ್ & ವ್ಲಾದಿಮಿರ್ ಪುಟಿನ್ ನಡುವೆ ಸಂಬಂಧ ಅತ್ಯುತ್ತಮವಾಗಿ ಇದ್ದರೂ, ಈ ರೀತಿಯ ಹೇಳಿಕೆ ನೀಡಿರುವುದು ಅನುಮಾನ ಮೂಡಿಸಿದೆ.












Click it and Unblock the Notifications