ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಸರ್ಕಾರದಿಂದ ಭಾರತಕ್ಕಾಗುವ ಲಾಭ, ನಷ್ಟಗಳೇನು?

|
Google Oneindia Kannada News

ಅಮೆರಿಕದಲ್ಲಿ ಟ್ರಂಪ್ ಯುಗ ಆರಂಭವಾಗಿದೆ. ಶುಕ್ರವಾರ, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10:30ರ ಹೊತ್ತಿಗೆ ಟ್ರಂಪ್, ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇತ್ತ ಇವರು, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದ್ದಂತೆ ಅತ್ತ, ಅಮೆರಿಕದ ಶಕ್ತಿ ಸೌಧವಾದ ಕ್ಯಾಪಿಟಾಲ್ ನಲ್ಲಿ ಟ್ರಂಪ್ ಅವರ ಚುನಾವಣಾ ಪ್ರಚಾರ ಘೋಷಣೆಗಳಿಗೆ ಅದಾಗಲೇ ಚಾಲನೆ ದೊರೆತಿದೆ.[ಅಮೆರಿಕನ್ನರಿಗೆ ಮೊದಲ ಆದ್ಯತೆ, ಇದೇ ನನ್ನ ಆಡಳಿತದ ಮೂಲಮಂತ್ರ]

ಎಚ್ 1ಬಿ ವೀಸಾ ತಿದ್ದುಪಡಿಗೆ ಚಾಲನೆ

ಎಚ್ 1ಬಿ ವೀಸಾ ತಿದ್ದುಪಡಿಗೆ ಚಾಲನೆ

ಅಮೆರಿಕದಲ್ಲಿ ಉದ್ಯೋಗ ನಿಮಿತ್ತ ವಲಸೆ ಹೋಗಿರುವ ಅನೇಕ ವಿದೇಶಿಯರಿಗೆ ನೀಡಲಾಗುವ ಎಚ್ 1ಬಿ ವೀಸಾದ ನಿಯಮಗಳಲ್ಲಿ ಹಲವಾರು ಬಿಗಿ ಕ್ರಮಗಳನ್ನು ಅನುಸರಿಸಲು ಈಗಾಗಲೇ ಟ್ರಂಪ್ ಘೋಷಿಸಿದ್ದರು. ಆ ಬಗ್ಗೆ ಪ್ರಕ್ರಿಯೆಗಳು ಚಾಲನೆಗೊಂಡಿವೆ.[ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಿಚಿತ್ರ]

ಇನ್ನೆರಡು ದಿನಗಳಲ್ಲಿ ಫಲಿತಾಂಶ

ಇನ್ನೆರಡು ದಿನಗಳಲ್ಲಿ ಫಲಿತಾಂಶ

ಎಚ್ 1ಬಿ ವೀಸಾ ನಿಯಮಗಳ ತಿದ್ದುಪಡಿಯನ್ನು ಶೀಘ್ರದಲ್ಲೇ ಕಾಂಗ್ರೆಸ್ ನಲ್ಲಿ ಮಂಡಿಸಲು ಸಕಲ ಸಿದ್ಧತೆಗಳನ್ನೂ ನಡೆಸಲಾಗಿದ್ದು, ಅದಕ್ಕಾಗಿ ಕರಡು ಪ್ರತಿಯನ್ನೂ ತಯಾರಿಸಲಾಗಿದೆ. ಕಾಂಗ್ರೆಸ್ ಒಪ್ಪಿಗೆ ಸಿಕ್ಕಿದಲ್ಲಿ, ಅಮೆರಿಕದಲ್ಲಿರುವ ವಲಸಿಗರಿಗೆ ಹೊಸ ಬಗೆಯ ಸಂಕಷ್ಟಗಳು ಎದುರಾಗಲಿವೆ. ಆ ಬಗ್ಗೆ ಇನ್ನೆರಡು ದಿನಗಳಲ್ಲಿ ನಿಖರ ಮಾಹಿತಿ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತಕ್ಕೆ ಮಿಶ್ರ ಫಲ

ಭಾರತಕ್ಕೆ ಮಿಶ್ರ ಫಲ

ಅಮೆರಿಕವು ತನ್ನ ಎಚ್ 1ಬಿ ವೀಸಾ ನಿಯಮಗಳಲ್ಲಿ ಹಲವಾರು ತಿದ್ದುಪಡಿಗಳನ್ನು ತಂದರೆ ಅದು ಭಾರತದಲ್ಲಿ ಬೇರೂರಿರುವ ಹಾಗೂ ಭಾರತದ ಒಟ್ಟಾರೆ ಆರ್ಥಿಕ ಬೆಳವಣಿಗೆಯಲ್ಲಿ ತನ್ನದೇ ಆದ ಪಾಲು ನೀಡುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಲಿದೆ ಎನ್ನಲಾಗುತ್ತಿದೆ.

ಭಯೋತ್ಪಾದನೆ ನಿರ್ಮೂಲನೆಗೆ ಆದ್ಯತೆ

ಭಯೋತ್ಪಾದನೆ ನಿರ್ಮೂಲನೆಗೆ ಆದ್ಯತೆ

ಅದೇನೇ ಇರಲಿ, ಭಾರತಕ್ಕೆ ಮುಳುವಾಗಿರುವ ಭಯೋತ್ಪಾದಕರ ದಮನಕ್ಕೆ ಅಮೆರಿಕದಿಂದ ಬಹುತೇಕ ಸಹಕಾರ ಸಿಗಲಿದೆ ಎಂಬುದು ರಾಜಕೀಯ ತಜ್ಞರ ಅಭಿಮತ.

ಹೆಚ್ಚಲಿದೆ ಭಾರತದ ಮಿತ್ರ ಶಕ್ತಿ

ಹೆಚ್ಚಲಿದೆ ಭಾರತದ ಮಿತ್ರ ಶಕ್ತಿ

ಈಗಾಗಲೇ ರಷ್ಯಾ ಜತೆಗೆ ನೇತೃತ್ವದ ಸರ್ಕಾರ ಸ್ನೇಹ ಹಸ್ತ ಚಾಚಿದೆ ಎಂದು ಹೇಳಲಾಗಿದೆ. ಇದು ಗಟ್ಟಿಯಾದರೆ, ಅದು ಭಾರತಕ್ಕೆ ಅನುಕೂಲವಾಗಿ ಪರಿಣಮಿಸಲಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಹಲವಾರು ವಿಚಾರಗಳಲ್ಲಿ ಭಾರತಕ್ಕೆ ನೆರವಾಗಲಿದೆ.

ಭಾರತಕ್ಕೆ ಸಿಗಲಿದೆ ನೈತಿಕ ಬೆಂಬಲ

ಭಾರತಕ್ಕೆ ಸಿಗಲಿದೆ ನೈತಿಕ ಬೆಂಬಲ

ಉಗ್ರ ದಮನದ ವಿಚಾರದಲ್ಲಿ ಟ್ರಂಪ್ ಅವರು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. ಪಾಕಿಸ್ತಾನವೇ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಗುಡುಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಪಾಕಿಸ್ತಾನದ ವಿವಿಧ ಕ್ಯಾತೆಗಳನ್ನು ಹತ್ತಿಕ್ಕಲು ಭಾರತಕ್ಕೆ ಇದು ನೆರವಾಗಲಿದೆ.

ಭಾರತಕ್ಕಿದು ವರದಾನ

ಭಾರತಕ್ಕಿದು ವರದಾನ

ಟ್ರಂಪ್ ಅವರು ಮೊದಲಿನಿಂದಲೂ ಚೀನಾ ವಿರುದ್ಧ ಕಿಡಿ ಕಾರುತ್ತಲೇ ಬಂದಿದ್ದಾರೆ. ಇದು ಭಾರತಕ್ಕೆ ಪ್ಲಸ್ ಪಾಯಿಂಟ್. ಪಾಕಿಸ್ತಾನದೊಂದಿಗೆ ಪರೋಕ್ಷ ಬೆಂಬಲ ನೀಡುತ್ತಾ, ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಭಾರತವು ಕಾಲಿಡುವ ಅವಕಾಶವನ್ನು ಕೊನೇ ಘಳಿಗೆಯಲ್ಲಿ ತಪ್ಪಿಸಿದ ಹಿತಶತ್ರುವಾಗಿರುವ ಚೀನಾವನ್ನು ಎದುರಿಸಲು ಅಮೆರಿಕದಿಂದ ದೊಡ್ಡ ಸಹಾಯ ಸಿಗುವ ನಿರೀಕ್ಷೆಯಿದೆ.

English summary
An era of Donal Trump has begun in America. In India's point of view, there are some sweet and bitter effects, says political pundits. Stringent steps regarding H-1B visa may hurt, but America's new relationship with China and Russia will help India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X