ಇಸ್ರೇಲ್ ರಾಜಧಾನಿ ಜೆರುಸಲೇಂ: ಟ್ರಂಪ್ ಘೋಷಣೆಗೆ ಐಸಿಸ್ ಆಕ್ರೋಶ
ವಾಷಿಂಗ್ಟನ್, ಡಿಸೆಂಬರ್ 7: ಜೆರುಸಲೇಂ ಅನ್ನು ಇಸ್ರೇಲ್ ನ ರಾಜಧಾನಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇತ್ತ ಟ್ರಂಪ್ ಜೆರಿಸಲೇಂ ನ ಹಿಡಿತವನ್ನು ಇಸ್ರೇಲ್ ಗೆ ಒಪ್ಪಿಸುತ್ತಿದ್ದಂತೆಯೇ, ಅತ್ತ ಐಸಿಸ್ ಮತ್ತು ಅಲ್ ಖೈದಾ ಉಗ್ರರು ರಕ್ತದ ಓಕುಳಿ ಹರಿಸುವ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಈ ನಡೆಯನ್ನು ಸ್ವಾಗತಿಸಿದ್ದರೂ ಜಿಹಾದಿಗಳಿಗೆ ಮಾತ್ರ ಇದು ನುಂಗಲಾರದ ಬಿಸಿ ತುಪ್ಪ! ಆದ್ದರಿಂದ ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳುವ ಎಲ್ಲಾ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಅಷ್ಟೇ ಅಲ್ಲ, ಅಮೆರಿಕದ ಈ ಕ್ರಮವನ್ನು ಇಸ್ರೇಲ್ ನ ನೆರೆ ರಾಷ್ಟ್ರ ಪ್ಯಾಲಿಸ್ತೇನ್ ಸಹ ವಿರೋಧಿಸಿ, ಇದರ ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೇ ನೀಡಿದೆ












Click it and Unblock the Notifications