Donald Trump: ಗಾಜಾ ಮೇಲೆ ಹಿಡಿತ ಸಾಧಿಸಲು ಮುಂದಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಟ್ರಂಪ್ ಪದೇ, ಪದೇ ಗಾಜಾ ಪಟ್ಟಿ ಬಗ್ಗೆ ಮಾತನಾಡುತ್ತಿದ್ದು ಸಾಕಷ್ಟು ಒತ್ತಡ ನಿರ್ಮಾಣ ಆಗುತ್ತಿದೆ. ಗಾಜಾ ಪಟ್ಟಿ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಈಗಾಗಲೇ ಇಸ್ರೇಲ್ ಜೊತೆ ಅಮೆರಿಕ ಕೈಜೋಡಿಸಿದೆ ಎಂಬ ಆರೋಪಗಳ ಮಧ್ಯೆ ಮತ್ತೆ ಬಿರುಗಾಳಿಯನ್ನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ ಡೊನಾಲ್ಡ್ ಟ್ರಂಪ್. ಅಮೆರಿಕ ನೂತನ ಅಧ್ಯಕ್ಷರ ಈ ಹೇಳಿಕೆ ಜಾಗತಿಕವಾಗಿ ಭಾರಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.
ಗಾಜಾ ಪಟ್ಟಿಯು ಸ್ವತಂತ್ರ ಪ್ರದೇಶವಾಗಿದೆ ಎಂಬುದನ್ನ ಹಲವಾರು ವರ್ಷಗಳಿಂದ ಕೂಡ ಇಡೀ ಜಗತ್ತು ಹೇಳಿಕೊಂಡು ಬಂದಿದೆ. ವಿಶ್ವಸಂಸ್ಥೆ ಕೂಡ ಇದೇ ಮಾತನ್ನ ಹೇಳುತ್ತಿದೆ, ಆದರೂ ಈಗ ಬೇರೆಯದ್ದೇ ಸ್ಥಿತಿ ನಿರ್ಮಾಣ ಆಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆದು ಇಡೀ ಗಾಜಾ ನಾಶವಾಗಿದೆ. ಹೀಗಿದ್ದಾಗ, ಇಡೀ ಗಾಜಾ ಪಟ್ಟಿ ಪ್ರದೇಶದ ಮೇಲೆ ಹಿಡಿತವನ್ನ ಸಾಧಿಸಲು ಮುಂದಾಗಿದೆ ಅಮೆರಿಕ. ಇದು ಭಾರಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿರುವ ಸಮಯದಲ್ಲೇ, ಮತ್ತೊಮ್ಮೆ ಟ್ರಂಪ್ ಗಾಜಾ ವಶಕ್ಕೆ ಪಡೆಯುವ ವಿಚಾರವಾಗಿ ಮಾತನಾಡಿದ್ದಾರೆ!

ಗಾಜಾ ಪಟ್ಟಿ ಖರೀದಿ ಮಾಡಲ್ಲ!
ನಾವು ಗಾಜಾ ಪಟ್ಟಿಯನ್ನ ಖರೀದಿ ಮಾಡಲ್ಲ, ಆದರೆ ಗಾಜಾ ನಮ್ಮ ಹಿಡಿತಕ್ಕೆ ಸಿಗಲಿದೆ. ಗಾಜಾ ಪಟ್ಟಿಯ ನಾವು ಖರೀದಿ ಮಾಡುವ ಅಗತ್ಯತೆ ಇಲ್ಲ, ಅಲ್ಲಿ ಖರೀದಿ ಮಾಡಲು ಈಗ ಏನು ಕೂಡ ಉಳಿದಿಲ್ಲ ಎಂದಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆ ಮಧ್ಯಪ್ರಾಚ್ಯ ಸೇರಿದಂತೆ, ಇಡೀ ಜಗತ್ತಿನಲ್ಲಿ ಮತ್ತೊಂದು ಯುದ್ಧದ ಭೀತಿ ಹುಟ್ಟುಹಾಕಿದೆ. ಹಾಗೇ ಈ ವಿಚಾರಕ್ಕೆ ಸದ್ಯ ಯಾವುದೆ ದೇಶವೂ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಕಿಚ್ಚು ಹೊತ್ತಿಕೊಳ್ಳುವ ಆತಂಕ ಆವರಿಸಿದೆ.
ಟ್ರಂಪ್ ಪಕ್ಷದಲ್ಲೇ ಅಸಮಾಧಾನ ಸ್ಫೋಟ?
ಒಟ್ನಲ್ಲಿ ಇಸ್ರೇಲ್ & ಗಾಜಾ ಕದನ 15 ತಿಂಗಳ ನಂತರ ಮುಗಿದರೂ ನೆಮ್ಮದಿ ಇಲ್ಲವಾಗಿದ್ದು, ಈ ಮೂಲಕ ಮತ್ತೆ ಅಲ್ಲಿ ವಾರ್ ಶುರುವಾಗುತ್ತಾ? ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ. ಇದೇ ಕಾರಣಕ್ಕೆ ಅಮೆರಿಕದ ದೋಸ್ತಿ ದೇಶಗಳು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸುತ್ತಿವೆ. ಹೀಗೆ ಡೊನಾಲ್ಡ್ ಟ್ರಂಪ್ ನಡೆ ಬಗ್ಗೆ ಒಳಗೊಳಗೆ ಅಸಮಾಧಾನವು ಸ್ಫೋಟಗೊಂಡು, ಭವಿಷ್ಯದಲ್ಲಿ ಇದು ಅಮೆರಿಕದ ಜಾಗತಿಕ ಸಂಬಂಧಗಳ ಮೇಲೆ ಭಾರಿ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಸ್ವತಃ ಡೊನಾಲ್ಡ್ ಟ್ರಂಪ್ ಅವರ ಪಕ್ಷದಲ್ಲೇ ಟ್ರಂಪ್ ಅವರ ಈ ನಡೆಯ ಬಗ್ಗೆ ಅಮಾಧಾನ ಕೂಡ ಸ್ಫೋಟಗೊಳ್ಳುವ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications