Donald Trump: ಚೀನಾ ವಿರುದ್ಧ ಹೊಸ ಅಸ್ತ್ರ ಕೈಗೆತ್ತಿಕೊಂಡ ಟ್ರಂಪ್ ಸರ್ಕಾರ?

ಚೀನಾ & ಅಮೆರಿಕ ನಡುವೆ ರಣಭೀಕರ ತೆರಿಗೆ ಯುದ್ಧ ನಡೆಯುತ್ತಿದೆ. ಒಂದು ಕಡೆ ಚೀನಾ ವಿರುದ್ಧ ಅಮೆರಿಕ ಹೆಚ್ಚಿನ ತೆರಿಗೆ ಹಾಕುತ್ತಿದ್ದರೆ, ಮತ್ತೊಂದು ಕಡೆ ಚೀನಾ ಕೂಡ ಸೇಡನ್ನು ತೀರಿಸಿಕೊಳ್ಳಲು ತನ್ನ ಕಡೆಯಿಂದಲೂ ಹೆಚ್ಚಿನ ತೆರಿಗೆ ಹಾಕುತ್ತಿದೆ. ಈ ಮೂಲಕ ಚೀನಾ & ಅಮೆರಿಕ ನಡುವೆ ರಣಭೀಕರ ತೆರಿಗೆ ಯುದ್ಧವೇ ಆರಂಭ ಆಗಿದೆ. ಡೊನಾಲ್ಡ್ ಟ್ರಂಪ್ ಅವರ ಸರ್ಕಾರದ ವಿರುದ್ಧ ಚೀನಾ ಸರ್ಕಾರ ನೇರವಾಗಿ ತೊಡೆತಟ್ಟಿದೆ. ಇಂತಹ ಸಮಯದಲ್ಲಿಯೇ ಚೀನಾ ವಿರುದ್ಧ ಉಕ್ರೇನ್ ಭಾರಿ ಗಂಭೀರ ಆರೋಪ ಮಾಡಿದೆ.

ಅಂದಹಾಗೆ ರಷ್ಯಾ ಜೊತೆಗೆ ಯುದ್ಧದಲ್ಲಿ ಚೀನಾ ಕೂಡ ಕೈಜೋಡಿಸಿದೆ ಎಂದು ಉಕ್ರೇನ್‌ನ ಅಧ್ಯಕ್ಷ ಗಂಭೀರ ಆರೋಪ ಮಾಡಿ, ಸಾಕ್ಷಿಯೂ ಇದೆ ಅಂತಾ ಚೀನಾಗೆ ಎಚ್ಚರಿಸುತ್ತಿದ್ದಾರೆ. ಚೀನಾ ಈ ಹಿಂದಿನಿಂದ ಕೂಡ ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ, ಆ ಮೂಲಕ ಉಕ್ರೇನ್ ವಿರುದ್ಧ ನಿಂತಿದೆ ಎಂಬ ಆರೋಪ ಮಾಡಲಾಗಿತ್ತು. ಹೀಗಿದ್ದಾಗ, ಕೆಲವು ದಿನಗಳ ಹಿಂದೆ ಸುಮಾರು 150ಕ್ಕೂ ಹೆಚ್ಚು ಚೀನಾ ಸೈನಿಕರನ್ನ ಉಕ್ರೇನ್ ಬಂಧಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಹೇಳಿದ್ದರು. ಇದೀಗ ನೇರವಾಗಿ ಸೆರೆಹಿಡಿದ ಎಲ್ಲಾ ಚೀನಾ ಮೂಲದ ಸೈನಿಕರನ್ನು ಜಗತ್ತಿನ ಮುಂದೆ ನಿಲ್ಲಿಸಿದೆ ಉಕ್ರೇನ್. ಈ ಮೂಲಕ ಟ್ರಂಪ್ ಸರ್ಕಾರಕ್ಕೆ ತೆರಿಗೆ ಯುದ್ಧದಲ್ಲಿ ಹೊಸ ಅಸ್ತ್ರ ಸಿಕ್ಕಂತಾಗಿದೆ.

Trump Administration May Take A New Action Against China After Ukraine Allegations

ಹೊಸ ಸಮಸ್ಯೆಯಲ್ಲಿ ಚೀನಾ ಲಾಕ್?

ರಷ್ಯಾ ಪರವಾಗಿ ಹೋರಾಟ ನಡೆಸಲು ಚೀನಾ ಸೈನಿಕರನ್ನು ಕಳುಹಿಸಿದೆ ಎಂಬ ಆರೋಪವನ್ನ ಮಾಡಿದೆ ಉಕ್ರೇನ್. ಇದಕ್ಕೆ ಸಾಕ್ಷ್ಯವನ್ನೂ ನೀಡಿರುವ ಉಕ್ರೇನ್ ಇದೀಗ ಚೀನಾ ವಿರುದ್ಧವೇ ಹೊಸ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಎಬ್ಬಿಸಿದೆ. ಚೀನಾ ಈ ಹಿಂದಿನಿಂದ ಕೂಡ ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ, ಆ ಮೂಲಕ ಉಕ್ರೇನ್ ವಿರುದ್ಧ ನಿಂತಿದೆ ಎಂಬ ಆರೋಪ ಮಾಡಲಾಗಿತ್ತು.

ಅಮೆರಿಕಗೆ ಹೊಸ ಅಸ್ತ್ರ ಸಿಕ್ಕಿದೆಯಾ?

ಹೀಗಿದ್ದಾಗಲೇ ಕೆಲವು ದಿನಗಳ ಹಿಂದೆ ಸುಮಾರು 150ಕ್ಕೂ ಹೆಚ್ಚು ಚೀನಿ ಸೈನಿಕರನ್ನು ಉಕ್ರೇನ್ ಬಂಧಿಸಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದರು. ಹೇಳಿಕೆ ಬಳಿಕ ದೊಡ್ಡ ಸಂಚಲನ ಸೃಷ್ಟಿಯಾಗಿ, ಚೀನಾ ಕೂಡ ಗರಂ ಆಗಿತ್ತು. ಅದೇ ಕಾರಣಕ್ಕೆ ರಷ್ಯಾ ನೆಲದಲ್ಲಿ ನುಗ್ಗಿ ತಾನು ಬಂಧಿಸಿದ್ದ ಚೀನಾ ಮಿಲಿಟರಿ ಸೈನಿಕರನ್ನ ಉಕ್ರೇನ್ ಕರೆದುಕೊಂಡು ಬಂದು ಜಗತ್ತಿನ ಎದುರಿಗೆ ನಿಲ್ಲಿಸಿದೆ. ಈ ವಿಚಾರವನ್ನ ಮುಂದೆ ಇಟ್ಟುಕೊಂಡು ಈಗ ಉಕ್ರೇನ್ ವಿರುದ್ಧ ಅಮೆರಿಕ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ತೆರಿಗೆ ಯುದ್ಧದ ಸಮಯದಲ್ಲೇ ಅಮೆರಿಕಗೆ ಇದೀಗ ಹೊಸ ಅಸ್ತ್ರವೊಂದು ಸಿಕ್ಕಂತಾಗಿದೆ.

ರಷ್ಯಾಗೆ ಸಹಾಯ ಮಾಡಿರುವ ಆರೋಪವನ್ನೇ ಮುಂದೆ ಇಟ್ಟುಕೊಂಡು ಅಮೆರಿಕ ಇದೀಗ, ಚೀನಾ ವಿರುದ್ಧ ಹಲವು ನಿರ್ಬಂಧ ಹೇರುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ. ಯಾಕಂದ್ರೆ ಈಗಾಗಲೇ ರಷ್ಯಾಗೆ ಸಹಾಯ ಮಾಡಿದ ಆರೋಪದ ಅಡಿಯಲ್ಲಿ ಹಲವು ದೇಶ & ಸಂಸ್ಥೆಗಳು ಸಮಸ್ಯೆ ಎದುರಿಸುತ್ತಿವೆ. ಅದೇ ರೀತಿ ಚೀನಾ ವಿರುದ್ಧವೂ ಟ್ರಂಪ್ ಸರ್ಕಾರದ ಕಡೆಯಿಂದ ಕಂಟಕ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+