ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಕುರಿತ ಭಾರತದ ನಿಲುವು: ಟಿಎಂಸಿ, ಶಿವಸೇನೆ ಟೀಕೆ
ಕೀವ್, ಫೆಬ್ರವರಿ 28: ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಪರ ನಿಲ್ಲದ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಹಾಗೂ ಟಿಎಂಸಿ ವಾಗ್ದಾಳಿ ನಡೆಸಿದೆ.
ಈಗ ಪರಮಾಣು ಬೆದರಿಕೆ ಹಾಕಲಾಗುತ್ತಿದೆ. ಶಾಂತವಾಗಿರಿ, ತಟಸ್ಥರಾಗಿರಿ, ಇಲ್ಲ?ಎಂದು ಶಿವಸೇನಾ ಮುಖಂಡರಾದ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ. ಯುದ್ಧ ರದ್ದತಿಗೆ ಭಾರತ ನಿರಾಕರಿಸುತ್ತದೆ. ಯುದ್ಧ ನಮ್ಮ ಜೀವನದಲ್ಲಿ ದುಬಾರಿ ಎಂಬುದನ್ನು ತೋರಿಸುತ್ತದೆ. ಅಧಿಕಾರಕ್ಕಾಗಿ ಹಸಿದ ಸರ್ವಾಧಿಕಾರಿಗಳು ಎಂದಿಗೂ ಸಹಾಯ ಮಾಡುವುದಿಲ್ಲ ಎಂದು ಟಿಎಂಸಿ ಮುಖಂಡರಾದ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಆದಾಗ್ಯೂ, ಈ ವಿಚಾರದ ಬಗ್ಗೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉಕ್ರೇನ್ ವಿರುದ್ಧದ ರಷ್ಯಾದ ಅಕ್ರಮಣವನ್ನು ತಡೆಯಲು ನಿರಾಕರಿಸಿದ್ದಕ್ಕಾಗಿ ಭಾರತದ ವಿರುದ್ಧ ಟಿಎಂಸಿ ಮತ್ತು ಶಿವಸೇನಾ ಮುಖಂಡರು ವಾಕ್ ಪ್ರಹಾರ ನಡೆಸಿದ್ದಾರೆ.

ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣ ಕುರಿತು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಿಶೇಷ ಅಧಿವೇಶನ ಕರೆಯಲು ಭದ್ರತಾ ಮಂಡಳಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಿಂದ ಭಾರತ ದೂರ ಉಳಿದರೂ ಬೆಲರೂಸ್ ಗಡಿಯಲ್ಲಿ ರಷ್ಯಾ- ಉಕ್ರೇನ್ ಮಾತುಕತೆ ನಿರ್ಧಾರವನ್ನು ಭಾರತ ಸ್ವಾಗತಿಸಿದೆ.
ಉಕ್ರೇನ್-ಪೋಲೆಂಡ್ ಗಡಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಂದ ತಾವು ತೊಂದರೆಗೆ ಸಿಲುಕಿರುವ ಬಗ್ಗೆ ಕರೆ ಮಾಡಿ ಅಲವತ್ತುಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತವು ರಷ್ಯಾದ ಆಕ್ರಮಣವನ್ನು ಖಂಡಿಸದ ಕಾರಣ, ಉಕ್ರೇನಿಯನ್ ಭದ್ರತಾ ಸಿಬ್ಬಂದಿ ತಮ್ಮನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
72 ಗಂಟೆಗಳಿಗೂ ಹೆಚ್ಚು ಕಾಲ ಕೊರೆಯುವ ಚಳಿಯಲ್ಲಿ ಸಿಲುಕಿಕೊಂಡಿದ್ದ ಈ ವಿದ್ಯಾರ್ಥಿಗಳಲ್ಲಿ ಅನೇಕರು ತಮ್ಮನ್ನು ಉಕ್ರೇನ್ ಭದ್ರತಾ ಸಿಬ್ಬಂದಿ ಎಳೆದು ಒದ್ದು ಹಾಕಿದ್ದಾರೆ, ತಮ್ಮ ಫೋನುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ಕೆಲವು ವಿದ್ಯಾರ್ಥಿಗಳನ್ನು ಗಡಿ ದಾಟಿ ಬರಲು ಉಕ್ರೇನ್ ಸಹಾಯ ಮಾಡಿತ್ತು. ಆದರೆ ನಂತರ ಪೋಲೆಂಡ್ ಪ್ರವೇಶಿಸುವುದಕ್ಕೆ ತಡೆಯೊಡ್ಡಲಾಯಿತು. ನಾನು ನನ್ನ ಸೋದರ ಮತ್ತು ಕೆಲವು ಸ್ನೇಹಿತರ ಜೊತೆಗೆ ಗುಂಪಿನಲ್ಲಿ ನಿಂತುಕೊಂಡಿದ್ದೆ.
ಮೊದಲಿಗೆ ಅಧಿಕಾರಿಗಳು ನಮಗೆ ಸರದಿ ಸಾಲಿನಲ್ಲಿ ನಿಂತುಕೊಳ್ಳಲು ಹೇಳಿದರು, ಅದರಂತೆ ಮಾಡಿದೆವು. ನಂತರ ಹುಡುಗಿಯರು ಪ್ರತ್ಯೇಕ ಸಾಲು ಮಾಡುವಂತೆ ಹೇಳಿದರು. ನಂತರ ನನ್ನನ್ನು ಗಡಿ ದಾಟಲು ಹೇಳಿ ನನ್ನ ಸೋದರ ಆಚೆ ಕಡೆ ಕಾಯುತ್ತಿದ್ದನು. ನನ್ನ ಸೋದರ ಸರದಿ ಸಾಲಿನಲ್ಲಿ ನಿಂತಿರುವಾಗ ಆತನನ್ನು ಎಳೆದು ಲಾಠಿಯಿಂದ ಹೊಡೆದರು ಎಂದು ಸಂದೀಪ್ ಕೌರ್ ಸುದ್ದಿ ಪತ್ರಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications