• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

26/11 ಮುಂಬೈ ದಾಳಿಯಲ್ಲೂ ತನ್ನ ಉಪಸ್ಥಿತಿ ಒಪ್ಪಿಕೊಂಡ ಪಾಕಿಸ್ತಾನ

|

ಇಸ್ಲಾಮಾಬಾದ್, ನವೆಂಬರ್ 12: 26/11 ಮುಂಬೈ ದಾಳಿಯಲ್ಲಿ ತನ್ನ ದೇಶದ 11 ಭಯೋತ್ಪಾದಕರ ಉಪಸ್ಥಿತಿಯನ್ನು ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಒಪ್ಪಿಕೊಂಡಿದೆ.

ಇತ್ತೀಚೆಗಷ್ಟೇ ಪುಲ್ವಾಮಾ ದಾಳಿಯನ್ನು ಮಾಡಿಸಿದವರೇ ನಾವು ಎಂದು ಪಾಕಿಸ್ತಾನದ ಸಚಿವರೊಬ್ಬರು ಬಹಿರಂಗವಾಗಿ ಒಪ್ಪಿಕೊಂಡಿದ್ದರು.

ಹಫೀಜ್ ಸಯೀದ್ ಯುಎನ್ ಪಟ್ಟಿಮಾಡಿದ ಅಂತರರಾಷ್ಟ್ರೀಯ ಭಯೋತ್ಪಾದಕ, 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ಕಳೆದ ವರ್ಷ 40 ಕ್ಕೂ ಹೆಚ್ಚು ಭಾರತೀಯ ಅರೆಸೈನಿಕ ಪಡೆಗಳನ್ನು ಕೊಂದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಪಟ್ಟಿ ಮಾಡಲಾಗಿತ್ತು.

2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿಅಲ್ ಫೌಜ್ ದೋಣಿ ಖರೀದಿಯಲ್ಲಿ ಭಾಗಿಯಾಗಿದ್ದ ಮುಲ್ತಾನ್‌ನ ಮುಹಮ್ಮದ್ ಅಮ್ಜದ್ ಖಾನ್ ಅವರನ್ನು 880 ಪುಟಗಳ ಉದ್ದದ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಇನ್ನು ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆಂದು ಆ ದೇಶ ಎಂದೂ ಒಪ್ಪಿಕೊಂಡಿಲ್ಲವಾಗಿಯೂ ಅವನು ಕರಾಚಿಯಲ್ಲಿಯೇ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಪುಲ್ವಾಮಾ ದಾಳಿ ಸುದ್ದಿ ಐಎಸ್ಐಗೆ ಮುಟ್ಟಿಸಿದ Spy ಬಂಧನ

ಅಮ್ಜದ್ ಖಾನ್ಯಮಹಾ ಮೋಟೋ ಆರ್ ಬೋಟ್ ಎಂಜಿನ್, ಲೈಫ್ ಜಾಕೆಟ್ ಗಳು, ಕರಾಚಿಯ ಎಆರ್ ಝಡ್ ವಾಟರ್ ಸ್ಪೋರ್ಟ್ ನಿಂದ ಗಾಳಿ ತುಂಬಬಹುದಾದ ದೋಣಿಗಳನ್ನು ಖರೀದಿಸಿದ, ನಂತರ ಇದನ್ನು ಭಾರತದ ವಾಣಿಜ್ಯ ನಗರಿಯ ಮೇಲಿನ ದಾಳಿಯಲ್ಲಿ ಬಳಸಲಾಯಿತು. ಅಲ್-ಹುಸೇನಿ ದೋಣಿಯ ಕ್ಯಾಪ್ಟನ್ ಆಗಿದ್ದ ಎಂದು ಸಹ ಉಲ್ಲೇಖಿಸಲಾಗಿದೆ.

ಇತ್ತೀಚೆಗೆ 40 ಯೋಧರು ಹುತಾತ್ಮರಾಗಲು ಕಾರಣವಾಗಿದ್ದ ಪುಲ್ವಾಮಾ ದಾಳಿಯ ರೂವಾರಿ ತಾನೆಂದು ಪಾಕಿಸ್ತಾನ ಬಹಿರಂಗವಾಗಿ ಒಪ್ಪಿಕೊಂಡಿತ್ತು.

ಪಾಕ್ ಸಚಿವರು ಸಂಸತ್ತಿನಲ್ಲೇ ಪುಲ್ವಾಮಾ ದಾಳಿಯನ್ನು ಇಮ್ರಾನ್ ಕಾನ್ ಸರ್ಕಾರದ ಮಹತ್ವದ ಸಾಧನೆ ಎಂದು ಹೇಳಿ ಹೊಗಳಿದ್ದರು.

ಇದೀಗ ಮುಂಬೈ ದಾಳಿಯ ಹಿಂದೆ ಸಹ ತನ್ನ ಕೈವಾಡವಿದೆ ಎಂದು ನೆರೆರಾಷ್ಟ್ರ ಖಚಿತಪಡಿಸಿರುವುದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ನಿಜಬಣ್ಣವನ್ನು ಮತ್ತೆ ಬಯಲು ಮಾಡಿಸಿದೆ.

ಒಟ್ಟಾರೆ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬಳಸಿದ ದೋಣಿಗಳ ಒಂಬತ್ತು ಸಿಬ್ಬಂದಿಗಳನ್ನೂ ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಪಟ್ಟಿಯಲ್ಲಿ ದೇಶದ 1210 ಕುಖ್ಯಾತ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಉಲ್ಲೇಖಿಸಲಾಗಿದೆ ಆದರೆ ಹಫೀಜ್ ಸಯೀದ್, ಮಸೂದ್ ಅಜರ್, ಅಥವಾ ದಾವೂದ್ ಇಬ್ರಾಹಿಂ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

English summary
Pakistan's top investigative authority, the Federal Investigation Agency(FIA) on Wednesday accepted the presence of eleven 26/11 terrorists who facilitated the 26/11 terror attack on its soil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X