Titanic Submarine Missing: ಜಲಂತಗಾರ್ಮಿಯಿಂದ ಶಬ್ದ ಪತ್ತೆ, ಮುಂದುವರಿದ ಶೋಧ ಕಾರ್ಯ
ಲಂಡನ್, ಜೂನ್ 21: ಟೈಟಾನಿಕ ಅವಶೇಷಗಳನ್ನು ವಿಕ್ಷಿಸಲು ಹೋಗಿ ಕಣ್ಮರೆಯಾಗಿರುವ ಸಿಬ್ಬಂದಿ ಸೇರಿ ಐವರು ಪ್ರವಾಸಿಗರಿದ್ದ ಸಬ್‌ಮರಿನ್ (ಜಲಂತರ್ಗಾಮಿ) ನೌಕೆಯ ಹುಡುಕಾಟ ಮುಂದುವರಿದಿದೆ. ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಹುಡುಕಾಟದಲ್ಲಿರುವ ನೌಕೆಯೊಂದಕ್ಕೆ 30 ನಿಮಿಷ ಸಣ್ಣ ಪ್ರಮಾಣದ ಏನೋ ಶಬ್ದಗಳು ಕೇಳಿ ಬಂದಿವೆ. ಇದು ಸಬ್‌ಮರಿನ್ ಶಬ್ದ ಎಂದು ಅಂದಾಜಿಸಲಾಗಿದೆ. ಒಟ್ಟು 96 ಗಂಟೆಗಳ ಆಕ್ಸಿಜನ್ ಇರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಪ್ರಾಣಾಪಾಯಕ್ಕೆ ತೊಂದರೆ ಆಗಿರಲು ಸಾಧ್ಯವಿಲ್ಲ ಎನ್ನಲಾಗಿದೆ.
ಯುಎಸ್, ಕೆನಡಾ ಕೋಸ್ಟ್ ಗಾರ್ಡ್ ಸಿಬ್ಬಂದಿ, ವಿಮಾನಗಳು ಹುಡುಕಾರ ಮುಂದುವರೆಸಿವೆ. ಈ ಘಟನೆ ಮತ್ತು ಕಾರ್ಯಾಚರಣೆ ಕುರಿತ 10 ಪ್ರಮುಖ ಅಂಶಗಳು ಇಲ್ಲಿವೆ.

ಜಲಂತರ್ಗಾಮಿ ಶೋಧದ 10 ಅಂಶಗಳು
* ಅಮೆರಿಕಾ ಕರಾವಳಿ ರಕ್ಷಣಾ ಸಿಬ್ಬಂದಿ, ಕೆನಡಾದ ಸಿಬ್ಬಂದಿ ಜಂಟಿ ಮತ್ತು ಫ್ರಾನ್ಸ್‌ನ ಸಂಶೋಧನಾ ಹಡಗುಗಳು ಓರ್ಕಾ ಗಾತ್ರದ ಜಲಂತರ್ಗಾಮಿ ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ. ನಾಪತ್ತೆಯಾಗಿರುವ ಈ ಸಬ್‌ಮರ್ಸಿಬಲ್ ಜಲಾಂತರ್ಗಾಮಿ ನೌಕೆಗಳಂತೆಯೇ ಚಲಿಸುತ್ತದೆ. ಆದರೆ ಹೆಚ್ಚು ಸೀಮಿತ ವ್ಯಾಪ್ತಿಯಲ್ಲಿ ಚಲಿಸುವ ಮಾನವಸಹಿತ ಜಲನೌಕೆ ಆಗಿದೆ.
* ಆಪರೇಷನ್ ಕಾರ್ಯಾಚರಣೆಯಲ್ಲಿ ತೊಡಗಿರುವ ಎಕ್ಸ್‌ಪ್ಲೋರರ್ಸ್ ಕ್ಲಬ್, ಫ್ರಾನ್ಸ, ಕೆನಡಾ ಸಿಬ್ಬಂದಿ ಗುಂಪು ನೀಡಿರುವ ಈವರೆಗಿನ ಮಾಹಿತಿ ಪ್ರಕಾರ, ಪ್ರವಾಸಿಗರು ಸುರಕ್ಷಿತವಾಗಿದ್ದಾರೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ.
* ತಂತ್ರಜ್ಞಾನ ಆಧಾರಿತ ಸೋನಾರ್ ಬಳಸಿ ರಕ್ಷಣೆ ಕಾರ್ಯಕ್ಕೆ ಇಳಿದಿರುವ ಸಿಬ್ಬಂದಿಗೆ ಅಟ್ಲಾಂಟಿಕ್ ಸಾಗರ ಆಳದಲ್ಲಿ ಕಣ್ಮರೆಯಾದ ಜಲಂತರ್ಗಾಮಿಯಿಂದ ಶಬ್ದ ಸಹ ಪತ್ತೆ ಮಾಡಿದ್ದಾರೆ. ಅನೇಕ ಅಮೆರಿಕಾ ಸುದ್ದಿ ಮಾಧ್ಯಮಗಳು ವರದಿ ಮಾಡಿದಂತೆ ಜಲತರ್ಗಾಮಿಯಿಂದ ಈ ಶಬ್ದ ಪ್ರತಿ 30 ನಿಮಿಷಕ್ಕೊಮ್ಮೆಯಂತೆ ಕೇಳಿ ಬರುತ್ತಿದೆ.

* ಯುಎಸ್ ಕೋಸ್ಟ್ ಗಾರ್ಡ್ ಪ್ರಕಾರ, ಹಡಗಿನಲ್ಲಿರುವ ಐವರು 24 ಗಂಟೆಗಳಿಗಿಂತ ಕಡಿಮೆ ಮೌಲ್ಯದ ಆಮ್ಲಜನಕವನ್ನು ಹೊಂದಿದ್ದಾರೆ. ತುರ್ತು ಸಂದರ್ಭದಲ್ಲಿ 96 ಗಂಟೆಗಳಷ್ಟು ಆಮ್ಲಜನಕ ಪೂರೈಕೆಯಾಗುವಂತೆ ಟೈಟಾನ್ ವಿನ್ಯಾಸಗೊಳಿಸಲಾಗಿದೆ.
* ಕಾರ್ಯಾಚರಣೆ ನೇತೃತ್ವ ವಹಿಸಿರುವ ಸಿಬ್ಬಂದಿ ತಿಳಿಸಿರುವ ಮಾಹಿತಿ ನೋಡಿದರೆ, ನೀರೊಳಗಿನ ಶೋಧ ಪ್ರಯತ್ನಗಳನ್ನು ಮುಂದುವರೆದಿದೆ. ಆದರೆ ಕಾರ್ಬನ್ ಫೈಬರ್ ಮತ್ತು ಟೈಟಾನಿಯಂನಿಂದ ಮಾಡಿದ 6.7 ಮೀಟರ್ ಉದ್ದದ ಕ್ರಾಫ್ಟ್, ಕಾಣೆಯಾದ ಟೈಟಾನ್‌ನ ಯಾವುದೇ ಚಿಹ್ನೆಗಳನ್ನು ಕಂಡುಹಿಡಿಯಲು ಇನ್ನೂವರೆಗೆ ಸಾಧ್ಯವಾಗಿಲ್ಲ ಎಂದು ಯುಎಸ್ ಕೋಸ್ಟ್ ಗಾರ್ಡ್ ತಿಳಿಸಿದ್ದಾರೆ.
* ಅಟ್ಲಾಂಟಿಕ್ ಸಾಗರದ ಉತ್ತರದ 20,000-ಚದರ-ಕಿಲೋಮೀಟರ್ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇಲ್ಲಿ ವಾತಾವರಣ ರಕ್ಷಣಾ ತಂಡಗಳಿಗೆ ಪ್ರತಿಕೂಲವಾಗಿದೆ. ಕಡಿಮೆ ಗೋಚರತೆ ಮತ್ತು ಪ್ರತಿಕೂಲ ಹವಾಮಾನ ಇದೆ ಎಂದು ತಿಳಿದು ಬಂದಿದೆ.
* ಅಟ್ಲಾಂಟಿಕ್ ಸಾಗರದಲ್ಲಿ ಹೆಪ್ಪುಗಟ್ಟುವ ಚಳಿ ಇದೆ. ಸಮುದ್ರದ ತಳವು ತಿಳಿನೀರಿನಿಂದ ಕೂಡಿಲ್ಲ. ನಮ್ಮ ಕೈಗಳು ನೀರಿನೊಳಗೆ ಕಾಣದ ಸ್ಥಿತಿ ಅಲ್ಲಿದೆ. ಗಗನಯಾತ್ರಿಯೊಬ್ಬರು ಬಾಹ್ಯಾಕಾಶಕ್ಕೆ ಹೋಗುತ್ತಿವಾಗ ಆಗುವ ಅನುಭವದಂತಿರುತ್ತದೆ ಎಂದು ಟೈಟಾನಿಕ್ ತಜ್ಞ ಟಿಮ್ ಮಾಲ್ಟಿನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
* ಜಲಾಂತರ್ಗಾಮಿ ಹಡಗಿನಲ್ಲಿದ್ದ ಐವರ ಪೈಕಿ ಪಾಕಿಸ್ತಾನದ ಪ್ರಮುಖ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಪುತ್ರ ಇದ್ದಾರೆ. ಆಕ್ಷನ್ ಏವಿಯೇಷನ್‌ನ ಅಧ್ಯಕ್ಷ ಹಮೀಶ್ ಹಾರ್ಡಿಂಗ್ ಕೂಡ ನಾಪತ್ತೆಯಾಗಿದ್ದಾರೆ.
* ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾಣೆಯಾದ ಸಬ್‌ಮರಿನ್ ಹುಡುಕಾಟದ ದೃಶ್ಯಗಳನ್ನು ಅವರು ವೀಕ್ಷಿಸಿದ್ದಾರೆ. ಅಧ್ಯಕ್ಷರ ಕಚೇರಿಯು ಕೋಸ್ಟ್ ಗಾರ್ಡ್ ಅಧಿಕಾರಿಗಳ ಜತೆ ಸಂಪರ್ಕದಲ್ಲಿದೆ ಎಂದು ವೈಟ್ ಹೌಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಕಿರ್ಬಿ ಹೇಳಿದ್ದಾರೆ.
* ನಾಪತ್ತೆಯಾದವ ಪೈಕಿ ಶಹಜಾದಾ ದಾವೂದ್ 'ಚಾರಿಟಿ,ದ ಪ್ರಿನ್ಸ್ ಟ್ರಸ್ಟ್ ಇಂಟರ್‌ನ್ಯಾಷನಲ್ ಅನ್ನು ಬಹುಕಾಲದಿಂದ ಬೆಂಬಲಿಸುತ್ತಾ ಬಂದವರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಹುಡುಕಾಟದ ಪ್ರತಿ ಮಾಹಿತಿಯನ್ನು ನೀಡುವಂತೆ ಬ್ರಿಟನ್‌ನ ಕಿಂಗ್ ಚಾರ್ಲ್ಸ್ ಕೇಳಿದ್ದಾರೆ ಎಂದು ಬಕಿಂಗ್‌ಹ್ಯಾಮ್ ಅರಮನೆಯ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.












Click it and Unblock the Notifications