ಚೀನಾದೊಂದಿಗೆ ಮಹತ್ವದ ಒಪ್ಪಂದಕ್ಕೆ ಮುಂದಾದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಭಾರತ ಹಾಗೂ ಚೀನಾ ಒಂದಾಗುತ್ತಿರುವಾಗಲೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಸರ್ಕಸ್ ಶುರು ಮಾಡಿದ್ದಾರೆ. ಹೌದು ಅಮೆರಿಕಾದ ದುಬಾರಿ ಸುಂಕದಿಂದ ಭಾರತ ಮತ್ತು ಅಮೆರಿಕಾದ ನಡುವಿನ ಸಂಬಂಧ ಹಳಸಿದೆ. ಈ ರೀತಿ ಇರುವಾಗಲೇ ಭಾರತ - ರಷ್ಯಾ ಹಾಗೂ ಚೀನಾ ದೇಶಗಳು ಒಂದಾಗಿದ್ದು ಹೊಸ ಆರ್ಥಿಕ ಇತಿಹಾಸ ಸೃಷ್ಟಿ ಮಾಡುವುದಕ್ಕೆ ಮುಂದಾಗಿವೆ. ಆದರೆ, ನಾವು ಭಾರತ - ರಷ್ಯಾವನ್ನು ಚೀನಾದಿಂದ ಕಳೆದುಕೊಳ್ಳುತ್ತಿದ್ದೇವೆ ಎಂದಿದ್ದ ಅಮೆರಿಕಾದ ಅಧ್ಯಕ್ಷ ಇದೀಗ ಸದ್ದಿಲ್ಲದೆ ಚೀನಾದೊಂದಿಗೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಕಳೆದ ಮೂರು - ನಾಲ್ಕು ತಿಂಗಳ ಅವಧಿಯಲ್ಲಿ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಅದರಲ್ಲೂ ಅಮೆರಿಕಾ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಒಂದು ಸುತ್ತಿನ ಸುಂಕ ಶಾಕ್ ಕೊಟ್ಟಾಗಿದೆ. ಚೀನಾ ತನ್ನ ಎದುರಾಳಿ ಎಂದು ಹೇಳಿಕೊಳ್ಳುತ್ತಲ್ಲೇ ಹಲವು ಪ್ರಮುಖ ಒಪ್ಪಂದಗಳನ್ನು ಅಮೆರಿಕಾ ಚೀನಾದೊಂದಿಗೆ ಮಾಡಿಕೊಳ್ಳುತ್ತಲ್ಲೇ ಇದೆ.

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕಾ ಮತ್ತು ಚೀನಾ ನಡುವೆ ಒಪ್ಪಂದ ಏರ್ಪಟ್ಟಿದೆ. ಇದು ಟಿಕ್‌ಟಾಕ್ ಅಮೆರಿಕಾದಲ್ಲಿ ಮುಂದುವರಿಯುವುದಕ್ಕೆ ಅವಕಾಶ ನೀಡಲಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇನ್ನು ಅಮೆರಿಕಾದಲ್ಲಿ ಟಿಕ್‌ಕಾಟ್ ಅಪ್ಲಿಕೇಶನ್‌ನ ಮಾಲೀಕತ್ವದ ಬಗ್ಗೆ ತಿಂಗಳುಗಳ ಕಾಲ ಇದ್ದ ಬಿಕ್ಕಟ್ಟನ್ನು ಕೊನೆಗೊಳ್ಳಲಿದೆ ಎಂದು ಅವರು ಘೋಷಿಸಿದ್ದಾರೆ. ಈ ಒಪ್ಪಂದವು ಟಿಕ್‌ಟಾಕ್‌ನ ಯುಎಸ್ ಸ್ವತ್ತುಗಳನ್ನು ಅದರ ಚೀನಾದ ಪೋಷಕ ಸಂಸ್ಥೆ ಬೈಟ್‌ಡ್ಯಾನ್ಸ್‌ನಿಂದ ಅಮೆರಿಕಾದ ಮಾಲೀಕರಿಗೆ ವರ್ಗಾಯಿಸುತ್ತದೆ ಎಂದು ಹೇಳಲಾಗಿದೆ.
ಟಿಕ್‌ಟಾಕ್ ಕುರಿತು ನಮಗೆ ಒಪ್ಪಂದವಿದೆ. ನಾವು ಚೀನಾದೊಂದಿಗೆ ಒಪ್ಪಂದದ ಬಗ್ಗೆ ಚರ್ಚಿಸುತ್ತಿದ್ದೇವೆ. ಎಲ್ಲವನ್ನೂ ದೃಢೀಕರಿಸಲು ನಾನು ಶುಕ್ರವಾರ ಅಧ್ಯಕ್ಷ ಕ್ಸಿ ಅವರೊಂದಿಗೆ ಮಾತನಾಡಲಿದ್ದೇನೆ ಎಂದು ಟ್ರಂಪ್ ಅವರು ಹೇಳಿದ್ದಾರೆ. ನಮ್ಮಲ್ಲಿ ಟಿಕ್‌ಟಾಕ್ ಖರೀದಿಸಲು ಬಯಸುವ ಕಂಪನಿಗಳ ಗುಂಪಿದೆ.
ಟಿಕ್‌ಟಾಕ್‌ನ ಚೀನಿ ಮಾಲೀಕತ್ವದ ಬಗ್ಗೆ ಯುಎಸ್ ಪದೇ ಪದೇ ರಾಷ್ಟ್ರೀಯ ಭದ್ರತಾ ಕಳವಳಗಳನ್ನು ಎತ್ತಿದೆ. ಬೀಜಿಂಗ್‌ನಲ್ಲಿನ ಕಂಪನಿ ಬೈಟ್‌ಡ್ಯಾನ್ಸ್ ಅನ್ನು ಸರ್ಕಾರದೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳಲು ಒತ್ತಾಯಿಸಬಹುದು ಎಂದು ಎಚ್ಚರಿಸಿದೆ. ಅಮೆರಿಕಾದಲ್ಲಿ ಟಿಕ್‌ಟಾಕ್ ಬಳಕೆದಾರರ ಸಂಖ್ಯೆ ವಿಪರೀತವಾಗಿದೆ.
ಈ ಒಪ್ಪಂದವು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಮಹತ್ವದ ಮಾತುಕತೆ ಎಂದು ವಿಶ್ಲೇಷಿಸಲಾಗಿದೆ. ಟಿಕ್‌ಟಾಕ್ ಸುಮಾರು 170 ಮಿಲಿಯನ್ ಯುಎಸ್ ಬಳಕೆದಾರರನ್ನು ಹೊಂದಿದೆ. ಇದು ದೇಶದ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾಗಿದೆ. ಟ್ರಂಪ್ ಆಡಳಿತವು ಟಿಕ್‌ಟಾಕ್ ಅನ್ನು ಸ್ಥಗಿತಗೊಳಿಸುವ ಬದಲು ಅದರ ಮಾರಾಟದ ಗಡುವನ್ನು ಪದೇ ಪದೇ ವಿಸ್ತರಿಸಿದ್ದು ಇದೆ. 2024ರಲ್ಲಿ ಅಮೆರಿಕಾ ಅಧ್ಯಕ್ಷರ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ್ದಕ್ಕಾಗಿ ಟ್ರಂಪ್ ಸ್ವತಃ ಅಪ್ಲಿಕೇಶನ್‌ಗೆ ಮೆಚ್ಚುಗೆ ಸೂಚಿಸಿದ್ದೂ ಇದೆ!












Click it and Unblock the Notifications