ಕೊಲರಾಡೋದಲ್ಲಿ ಶೂಟೌಟ್, 3 ಸಾವು, 9 ಜನಕ್ಕೆ ಗಾಯ
ಕೊಲರಾಡೋ ಸ್ಪ್ರಿಂಗ್ಸ್, ನ.28:ಇಲ್ಲಿನ ಫ್ಯಾಮಿಲಿ ಪ್ಲಾನಿಂಘ್ ಕೇಂದ್ರಕ್ಕೆ ನುಗ್ಗಿದ ಶಸ್ತ್ರಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿ ಮೂವರನ್ನು ಹತ್ಯೆಗೈದಿದ್ದಾರೆ. ಪಶ್ಚಿಮ ಅಮೆರಿಕದ ಕೊಲೊರಾಡೋನಲ್ಲಿ ನಡೆದ ಈ ದುರ್ಘಟನೆಯಲ್ಲಿ ಒಬ್ಬ ಪೊಲೀಸ್ ಸೇರಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮೇಯರ್ ಜಾನ್ ಸೂಥರ್ಸ್ ಅವರು ಮಾತನಾಡಿ, ಘಟನೆ ನಡೆದ ಕೆಲ ಗಂಟೆಗಳಲ್ಲೇಆತ ಬಂದೂಕುಧಾರಿ ಇರುವ ಸ್ಥಳವನ್ನು ಸುತ್ತುವರೆದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಮೂವರು ನಾಗರಿಕರು, ಓರ್ವ ಪೊಲೀಸ್ ಮೃತರಾಗಿದ್ದಾರೆ.

ಗಾಯಾಳುಗಳ ಪೈಕಿ ಐವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ಮೂವರು ನಾಗರಿಕರ ಸ್ಥಿತಿ ಗಂಭೀರವಾಗಿದೆ.ಬಂಧಿತ ದಾಳಿಕೋರನ ಬಗ್ಗೆ ಯಾವುದೇ ಮಾಹಿತಿ ಇನ್ನೂ ಸಿಕ್ಕಿಲ್ಲ. ದಾಳಿ ಮಾಡಿದ್ದು ಏಕೆ ಎಂಬುದರ ಬಗ್ಗೆ ಕೂಡಾ ತಿಳಿದು ಬಂದಿಲ್ಲ. ಈ ಸುದ್ದಿಯನ್ನು ಕೇಳಿಸಿಕೊಳ್ಳಿ











Click it and Unblock the Notifications