Russia & Ukraine: ವಿಮಾನ ಹಾರಾಟ ಬಂದ್, ಘೋರ ದಾಳಿಗೆ ರಷ್ಯಾ ಸಿದ್ಧತೆ?
ಉಕ್ರೇನ್ ಸುಮ್ಮನೆ ಇರದೆ ಮತ್ತೊಮ್ಮೆ ಇರುವೆ ಬಿಟ್ಟುಕೊಂಡಿದೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ. ಯಾಕಂದ್ರೆ ರಷ್ಯಾ ಸೇನೆಯನ್ನ ಕೆಣಕುವ ಕೆಲಸ ಮಾಡಿರುವ ಉಕ್ರೇನ್ ಸೇನೆ ನೇರವಾಗಿ ರಷ್ಯಾದ ಪ್ರಮುಖ ನಗರದ ಮೇಲೆ ಡೆಡ್ಲಿ ಡ್ರೋನ್ ಅಟ್ಯಾಕ್ ಮಾಡಿಬಿಟ್ಟಿದೆ. ಈ ಮೂಲಕ ರಷ್ಯಾದ ಪ್ರಮುಖ ನಗರದ ಮುಗಿಲೆತ್ತರದ ಬಹುಮಹಡಿ ಕಟ್ಟಡಗಳ ಮೇಲೆರಗಿ ಕಿಡಿ ಹೊತ್ತಿಸಿದೆ. ಇಂತಹ ಸಮಯದಲ್ಲೇ ರಷ್ಯಾದಲ್ಲಿ ಏನಾಗುತ್ತಿದೆ ಗೊತ್ತಾ?
ರಷ್ಯಾ & ಉಕ್ರೇನ್ ನಡುವೆ 2022ರ ಫೆಬ್ರವರಿ ತಿಂಗಳಲ್ಲಿ ಯುದ್ಧ ಆರಂಭವಾಗಿತ್ತು. ಹೀಗೆ, 2022 ರಲ್ಲಿ ಶುರುವಾಗಿದ್ದ ಭೀಕರ ಯುದ್ಧವು ಇದೀಗ ಬರೋಬ್ಬರಿ 3ನೇ ವರ್ಷದ ಸಮೀಪಕ್ಕೆ ಬಂದಿದೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ, ಯಾವ ಕ್ಷಣದಲ್ಲಿ ಈ ಯುದ್ದವು ಮತ್ತೆಲ್ಲಿ 3ನೇ ಮಹಾಯುದ್ಧದ ರೂಪ ಪಡೆಯುತ್ತೋ? ಅನ್ನೋ ಭಯ ಸೃಷ್ಟಿಯಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆಯೇ ರಷ್ಯಾ ಈ ನಗರದಲ್ಲಿ ವಿಮಾನ ಹಾರಾಟ ಬಂದ್ ಮಾಡಿದ್ದು, ಘೋರ ದಾಳಿಗೆ ರಷ್ಯಾ ಸಿದ್ಧತೆ ನಡೆಸಿದೆಯಾ?

'ಬ್ರಿಕ್ಸ್' ಶೃಂಗಸಭೆ ನಡೆದಿದ್ದ ನಗರ!
ರಷ್ಯಾದಲ್ಲಿ ಇಂದು ಆಗಿದ್ದು ಏನಂದ್ರೆ, ರಷ್ಯಾದ ಪ್ರಮುಖ ನಗರವಾದ ಖಜಾನ್ ಮೇಲೆ ಡೆಡ್ಲಿ ಡ್ರೋನ್ ಅಟ್ಯಾಕ್ ಆಗಿತ್ತು. 'ಬ್ರಿಕ್ಸ್' ಶೃಂಗಸಭೆ ನಡೆದಿದ್ದ ರಷ್ಯಾ ದೇಶದ ಪ್ರಮುಖ ನಗರಗಳ ಪೈಕಿ ಒಂದಾದ 'ಖಜಾನ್' ಮೇಲೆ ದಿಢೀರ್ ಇಂದು ಉಕ್ರೇನ್ ದಾಳಿ ಮಾಡಿದೆ. ಈ ರೀತಿಯಾಗಿ ಶತ್ರು ಸೇನೆಯಿದ ರಷ್ಯಾ ಒಳಗೆ ದಾಳಿ ನಡೆದ ನಂತರ, ರಷ್ಯಾ ಕೂಡ ಅಲರ್ಟ್ ಆಗಿಬಿಟ್ಟಿದೆ.
ಹಾಗೇ, 'ಖಜಾನ್' ನಗರದಲ್ಲಿ ನೋಡ ನೋಡುತ್ತಲೇ ಬಹುಮಹಡಿ ಕಟ್ಟಡಗಳಿಗೆ ನುಗ್ಗಿದ ಸುಮಾರು 8 ಡ್ರೋನ್‌ಗಳು ಇಡೀ ಕಟ್ಟಡವೇ ಹೊತ್ತಿ ಉರಿಯುವಂತೆ ಮಾಡಿವೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗ ರಷ್ಯಾ ಕೂಡ ವಿಮಾನ ಹಾರಾಟ ಬಂದ್ ಮಾಡಿದ್ದು, ಮುಂದೆ ಉಕ್ರೇನ್ ವಿರುದ್ಧ ರಷ್ಯಾ ಭೀಕರ ದಾಳಿ ನಡೆಸುತ್ತಾ? ಎಂಬ ಆತಂಕ ಮೂಡಿದೆ.
ಉಕ್ರೇನ್ ವಿರುದ್ಧ ರಷ್ಯಾ ರಿವೇಂಜ್?
'ಖಜಾನ್' ನಗರದ ಒಂದು ಕಟ್ಟಡದ ಮೇಲೆ ಮಾತ್ರವಲ್ಲ, 'ಖಜಾನ್' ನಗರದಲ್ಲಿ ಇರುವ ಹತ್ತಾರು ಬೃಹತ್ ಕಟ್ಟಡಗಳ ಮೇಲೆ ನೂರಾರು ಡ್ರೋನ್‌ಗಳನ್ನು ಬಳಸಿ ಉಕ್ರೇನ್ ಈ ರೀತಿ ದಾಳಿ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ರಷ್ಯಾ ಇದೀಗ ಕಾದ ಕಬ್ಬಿಣವಾಗಿದೆ. ಜೋ ಬೈಡನ್ ಆಡಳಿತ ಅವಧಿಯಲ್ಲೇ ಈ ರೀತಿ ಘಟನೆ ಸಂಭವಿಸಿದ್ದು ಜಗತ್ತಿನ ಕುತೂಹಲ ಕೆರಳುವಂತೆ ಮಾಡಿದೆ.












Click it and Unblock the Notifications