ಡೊನಾಲ್ಡ್ ಟ್ರಂಪ್ ಪ್ರಚಾರ ಸಭೆಯಲ್ಲಿ ಮತ್ತೊಮ್ಮೆ ಗನ್ ಎಂಟ್ರಿ?
ಡೊನಾಲ್ಡ್ ಟ್ರಂಪ್ ಅವರ ಜೀವಕ್ಕೆ ಪದೇ ಪದೇ ಕಂಟಕ ಎದುರಾಗುತ್ತಿದೆ ಎಂಬ ಗಂಭೀರ ಆರೋಪ ಇದೆ. ಕೇಲವೇ ತಿಂಗಳ ಅಂತರದಲ್ಲಿ ಈಗಾಗಲೇ 2 ಬಾರಿ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಯತ್ನಿಸಲಾಗಿತ್ತು. ಹೀಗಿದ್ದಾಗ ಮತ್ತೊಂದು ಭೀಕರ ಘಟನೆಗೆ ಟ್ರಂಪ್ ಅವರ ಪ್ರಚಾರ ಸಭೆ ಇದೀಗ ಸಾಕ್ಷಿಯಾಗಿದ್ದು ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಏನದು ಮತ್ತೊಂದು ಮಹಾ ದುರಂತ? ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರ ಸಭೆಯಲ್ಲಿ ಆಗಿದ್ದೇನು? ಬನ್ನಿ ತಿಳಿಯೋಣ.
ಚುನಾವಣಾ ಪ್ರಚಾರದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಗುಂಡಿನ ದಾಳಿ ನಡೆದಿತ್ತು, ಈ ಮೂಲಕ ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಕೆಲವು ದಿನಗಳ ಹಿಂದೆ ಈ ರೀತಿಯ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆದಿತ್ತು. ಡೊನಾಲ್ಡ್ ಟ್ರಂಪ್ ತಲೆಗೆ ಗುರಿ ಇಟ್ಟಿದ್ದ ಕಿಲ್ಲರ್‌ನ ಟಾರ್ಗೆಟ್ ಅದೃಷ್ಟದ ದಯೆಯಿಂದಾಗಿ ಮಿಸ್ ಆಗಿತ್ತು, ಟ್ರಂಪ್ ತಲೆಗೆ ಬೀಳಬೇಕಿದ್ದ ಬುಲೆಟ್ ಡೊನಾಲ್ಡ್ ಟ್ರಂಪ್ ಕಿವಿಗೆ ತಾಗಿ ಹೋಗಿತ್ತು. ಹಾಗೇ ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ತಮ್ಮ ಗಾಲ್ಫ್ ಕ್ರೀಡಾಂಗಣದಲ್ಲಿ ಗಾಲ್ಫ್ ಆಡುವಾಗ ಕೂಡ ಹತ್ಯೆಗೆ ಯತ್ನಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಹೀಗೆ ಸಾಲು ಸಾಲಾಗಿ 2 ಹತ್ಯೆ ಯತ್ನ ನಡೆದ ಬೆನ್ನಲ್ಲೇ ಮತ್ತೊಂದು ಭೀಕರ & ಆತಂಕಕಾರಿ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.

ಪ್ರಚಾರ ಸಭೆಗೆ ಗನ್ ತಂದಿದ್ದ ವ್ಯಕ್ತಿ!
ಅಂದಹಾಗೆ ಇದೀಗ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆಯುತ್ತಿದ್ದ, ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ‍್ಯಾಲಿಯಲ್ಲಿ ಘೋರ ದುರಂತ ಒಂದು ನಡೆಯುವ ಆತಂಕದ ಕಾರ್ಮೋಡ ಆವರಿಸಿತ್ತು. ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ‍್ಯಾಲಿ ನಡೆಯಬೇಕಾಗಿದ್ದ ಸ್ಥಳದಲ್ಲಿ ಗನ್ ಮತ್ತು ನಕಲಿ ಪಾಸ್‌ಪೋರ್ಟ್ ತಂದಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ ಎನ್ನುವ ಆರೋಪ ಇಡೀ ಅಮೆರಿಕದಲ್ಲಿ ಇದೀಗ ಸಂಚಲನ ಸೃಷ್ಟಿಸಿದೆ. ಹಾಗೇ, ಈ ವಿಚಾರ ಇದೀಗ ದೊಡ್ಡ ಮಟ್ಟಿಗೆ ಚರ್ಚೆಗೂ ಕಾರಣವಾಗಿದೆ. ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಮತ್ತೊಮ್ಮೆ ಪ್ರಯತ್ನ ಮಾಡಲಾಗಿದೆಯಾ? ಎಂಬ ಪ್ರಶ್ನೆ ಕೂಡ ಮೂಡುವಂತೆ ಮಾಡಿದೆ.
ಟ್ರಂಪ್ ಪರವಾಗಿ ಭರ್ಜರಿ ಪ್ರಚಾರ
ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ, ಇದೀಗ ನಡೆಯುತ್ತಿರುವ ಚುನಾವಣಾ ಪ್ರಚಾರಗಳು ಅವರನ್ನ ಮುಂದೆ ತೆಗೆದುಕೊಂಡು ಹೋಗುತ್ತಿವೆ ಎನ್ನಲಾಗುತ್ತಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಪರ ಕೊನೆಯ ಹಂತದಲ್ಲಿ ದೊಡ್ಡ ಮಟ್ಟಿಗೆ ಮತ್ತು ಅಬ್ಬರದ ಪ್ರಚಾರ ಶುರುವಾಗಿದೆ. ಈ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಗೆಲುವಿಗೆ ರಣಕಹಳೆ ಮೊಳಗಿದೆ ಎನ್ನಬಹುದು. ಡೊನಾಲ್ಡ್ ಟ್ರಂಪ್ ಪರವೇ ಖ್ಯಾತ ಉದ್ಯಮಿಗಳು, WWE ಸ್ಟಾರ್ಸ್, ಹಾಲಿವುಡ್ ನಟರು & ನಟಿಯರು, ಹೀಗೆ ಲೆಕ್ಕವಿಲ್ಲದಷ್ಟು ಸೆಲೆಬ್ರಿಟಿಗಳು ಪ್ರಚಾರಕಾರ್ಯ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಅಮೆರಿಕದಲ್ಲಿ ಭದ್ರತೆಯನ್ನ ಹೆಚ್ಚಿಸಲಾಗಿದೆ.












Click it and Unblock the Notifications