ಇಸ್ರೇಲ್ & ಇರಾನ್ ಯುದ್ಧ ಬಂದ್? ಸಂಧಾನ ಮಾತುಕತೆಗೆ ವೇದಿಕೆ ಸಿದ್ಧವಾಯ್ತಾ? Israel And Iran

ಇಸ್ರೇಲ್ & ಇರಾನ್ ತೀವ್ರವಾಗಿ ಯುದ್ಧ ಮಾಡುತ್ತಿದ್ದು, ಹಿಂಸಾಚಾರ ಕೂಡ ಜೋರಾಗಿದೆ. ಹೀಗೆ ಪರಮಾಣು ಬಾಂಬ್ ಬಳಕೆ ಮಾಡುವ ಸಾಮರ್ಥ್ಯ ಇರುವ ಎರಡು ದೇಶಗಳು ಬಡಿದಾಡುತ್ತಿದ್ದ ರೀತಿ ನೋಡಿ ಇಡೀ ಜಗತ್ತಿಗೆ ಭಯವಾಗಿತ್ತು. ಹೀಗಿದ್ದಾಗ ಇಸ್ರೇಲ್ & ಇರಾನ್ ಯುದ್ಧದಲ್ಲಿ ಮಹತ್ವದ ಬದಲಾವಣೆ ಆಗುತ್ತಿದ್ದು, ಶಾಂತಿ ಮಾತುಕತೆಗೆ ವೇದಿಕೆ ಸಿದ್ಧ ಆಗುತ್ತಿದೆಯಾ ಎಂಬ ಕುತೂಹಲ ಹೆಚ್ಚಾಗಿದೆ. ಈ ಮೂಲಕ ಮತ್ತೊಂದು ಕಂಟಕ ತರುತ್ತಿದ್ದ ಯುದ್ಧಕ್ಕೆ ಬ್ರೇಕ್ ಹಾಕುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.

ಗಾಜಾ & ಇಸ್ರೇಲ್, ಯೆಮನ್ & ಇಸ್ರೇಲ್, ಲೆಬನಾನ್ & ಇಸ್ರೇಲ್, ಸಿರಿಯಾ & ಇಸ್ರೇಲ್ ಯುದ್ಧದ ನಡುವೆ ದಿಢೀರ್, ಇರಾನ್ ಜೊತೆಯಲ್ಲಿಯೂ ಇದೀಗ ಘೋರ ಯುದ್ಧವನ್ನು ಶುರು ಮಾಡಿದೆ ಪುಟಾಣಿ ದೇಶವಾದ ಇಸ್ರೇಲ್‌ನ ಮಿಲಿಟರಿ. ಮಧ್ಯಪ್ರಾಚ್ಯದಲ್ಲಿ ಭಾರಿ ದೊಡ್ಡ ಯುದ್ಧ ಶುರುವಾಗಿದೆ, ಪರಮಾಣು ಸಾಮರ್ಥ್ಯ ಅಂದ್ರೆ ಅಣುಬಾಂಬ್ ಇರುವ ಇರಾನ್ ಮತ್ತು ಅಮೆರಿಕ ಬೆಂಬಲ ಇರುವ ಇಸ್ರೇಲ್ ನಡುವೆ ಘೋರ ಕದನ ಆರಂಭವಾಗಿ ದೊಡ್ಡ ಹಿಂಸಾಚಾರ ಕೂಡ ನಡೆಯುತ್ತಿದೆ.

ಶೀಘ್ರದಲ್ಲೇ ಸಂಧಾನ ಸಭೆ ಆರಂಭ?

ಹೇಗಾದರೂ ಮಾಡಿ ಇರಾನ್ ದೇಶಕ್ಕೆ ಸರಿಯಾದ ಪಾಠ ಕಲಿಸಬೇಕು ಅನ್ನೋ ರೀತಿಯಲ್ಲೇ ಇಸ್ರೇಲ್ ಈಗ ದಾಳಿ ಮಾಡುತ್ತಿದೆ. ಹೀಗೆ ಇಬ್ಬರ ನಡುವೆ ನಡೆಯುತ್ತಿರುವ ದಾಳಿ ಪರಿಣಾಮ ಭಾರಿ ದೊಡ್ಡ ನಷ್ಟವೂ ಉಂಟಾಗುತ್ತಿದೆ. ಆದರೆ ಈ ಯುದ್ಧವನ್ನು ಇದೇ ರೀತಿಯಾಗಿ ಮುಂದುವರಿಯಲು ಬಿಟ್ಟರೆ ಪರಿಸ್ಥಿತಿ ಸರಿ ಇರುವುದಿಲ್ಲ ಅನ್ನೋ ವಿಚಾರ ತಿಳಿದ ಜಾಗತಿಕ ನಾಯಕರು, ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇಸ್ರೇಲ್ & ಇರಾನ್ ನಡುವೆ ಯುದ್ಧ ನಿಲ್ಲಿಸಲು ಮಹತ್ವದ ಚಿಂತನೆಯೂ ಈಗ ಸಾಗಿದೆ. ಅಲ್ಲದೆ ಸೌದಿ ಅರೇಬಿಯಾ ಅಥವಾ ಕತಾರ್‌ನಲ್ಲಿ ಈ ಬಗ್ಗೆ ಸಭೆ ನಡೆಯುವ ಸಾಧ್ಯತೆ ಕೂಡ ದಟ್ಟವಾಗಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+