Israel-Iran War: ಇಸ್ರೇಲ್ ಕೊತ.. ಕೊತ.. ಫ್ರಾನ್ಸ್ ವಿರುದ್ಧವೂ ಯುದ್ಧ ಘೋಷಣೆ?
ಭೂಮಿ ಮೇಲೆ ಮನುಷ್ಯ ನೆಮ್ಮದಿಯಾಗಿ ಬದಕುವುದಿಲ್ಲ ಅನ್ನೋದು ಯಾವಾಗಲೋ ನಿಜ ಆಗೋಗಿದೆ. ಇದು ಗೊತ್ತಾಗಿಯೇ ಪ್ರಕೃತಿ ಮಾತೆ ಕೂಡ ಸಮಸ್ಯೆಗಳ ಮೇಲೆ ಸಮಸ್ಯೆ ಸೃಷ್ಟಿ ಮಾಡಿ, ಮನುಷ್ಯರಿಗೆ ಬುದ್ಧಿ ಕಲಿಸುತ್ತಿದ್ದಾಳೆ. ಹೀಗಿದ್ದರೂ ಸೈಲೆಂಟ್ ಆಗದ ಮನುಷ್ಯರು, ಯುದ್ಧದ ಚಟಕ್ಕೆ ಬಿದ್ದು ಚಟ್ಟ ಹತ್ತುತ್ತಿದ್ದಾರೆ. ಅದ್ರಲ್ಲೂ ಇಸ್ರೇಲ್ ಈಗ ಗಾಜಾ, ಲೆಬನಾನ್, ಇರಾನ್, ಸಿರಿಯಾ ವಿರುದ್ಧವೇ ದೊಡ್ಡ ಯುದ್ಧ ಮಾಡುತ್ತಿದ್ದು, ಪರಿಸ್ಥಿತಿ ಕೈಮೀರಿದಾಗಲೇ ಫ್ರಾನ್ಸ್ ಜೊತೆಯಲ್ಲೂ ಕಿರಿಕ್ ತೆಗೆದು ಕೂತಿದೆ! ಹಾಗಾದ್ರೆ ಫ್ರಾನ್ಸ್ ವಿರುದ್ಧವೂ ಇಸ್ರೇಲ್ ಯುದ್ಧ ಮಾಡುತ್ತಾ? ಬನ್ನಿ ತಿಳಿಯೋಣ.
ಯುದ್ಧ ನಿಲ್ಲಿಸಬೇಕು, ಇಲ್ಲವಾದರೆ ನಮ್ಮ ನಾಶ ಗ್ಯಾರಂಟಿ ಅನ್ನೋದು ಇದೀಗ ಯುರೋಪ್ ದೇಶಗಳಿಗೆ ಮನವರಿಕೆ ಆಗಿ ಹೋಗಿದೆ. ಇದೇ ಕಾರಣಕ್ಕೆ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಅದರಲ್ಲಿಯೂ ಯುರೋಪ್ ದೇಶಗಳು ಈ ವಿಚಾರದಲ್ಲಿ ಸಾಕಷ್ಟು ಮುಂದೆ ಇದ್ದು, ಜೀವ & ಜೀವನ ಉಳಿಸಿಕೊಳ್ಳಲು ಯುರೋಪ್ ದೇಶಗಳಿಗೆ ಇದೇ ಕೊನೆಯ ಆಯ್ಕೆ ಎನ್ನಬಹುದು. ಪರಿಸ್ಥಿತಿ ಹೀಗಿದ್ದಾಗಲೇ ಫ್ರಾನ್ಸ್ ಅಧ್ಯಕ್ಷ ನೇರವಾಗಿ ಇಂದು ಇಸ್ರೇಲ್ ವಿರುದ್ಧ ವಾಗ್ದಾಳಿ ನಡೆಸಿರುವುದು ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಹಾಗಾದರೆ ಈ ವಿಚಾರದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದು ಏನು? ಮುಂದೆ ಓದಿ.

1 ವರ್ಷದಿಂದ ನಿರಂತರ ಯುದ್ಧ
ಇಸ್ರೇಲ್ & ಗಾಜಾ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ 1 ವರ್ಷ ಕಳೆದು ಹೋಗಿದ್ದು, ಈ ವಿಚಾರ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕೂಡ ವೇದಿಕೆ ಸೃಷ್ಟಿ ಮಾಡಿದೆ. ಅದರಲ್ಲೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಇದೀಗ ಇಸ್ರೇಲ್ ವಿರುದ್ಧ ಹೇಳಿಕೆ ನೀಡಿದ್ದು, ಗಾಜಾ ಪಟ್ಟಿ ಸಂಘರ್ಷಕ್ಕೆ ಅಂತ್ಯ ಹಾಡಲು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ ಎಂದಿದ್ದಾರೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್. ಹಾಗೇ ಇದರ ಜೊತೆಗೆ ಲೆಬನಾನ್ ವಿರುದ್ಧವೂ ಭೂ ಕಾರ್ಯಾಚರಣೆಗೆ ಸೇನೆ ಕಳಿಸುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿರ್ಧಾರಕ್ಕೆ ಕೂಡ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಬೇಸರ ಹೊರ ಹಾಕಿದ್ದು ಸಂಚಲನ ಸೃಷ್ಟಿ ಮಾಡಿದೆ.
ಫ್ರಾನ್ಸ್ ವಿರುದ್ಧವೂ ಇಸ್ರೇಲ್ ಯುದ್ಧ?
ಇಸ್ರೇಲ್ ಸೇನೆಗೆ ಫ್ರಾನ್ಸ್ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿಲ್ಲ ಎಂಬುದನ್ನು ಇದೀಗ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸ್ಪಷ್ಟಪಡಿಸಿದ್ದು, ಯುದ್ಧ ಬಿಟ್ಟು ಶಾಂತಿಯುತವಾಗಿಯೇ ಸಮಸ್ಯೆ ಸರಿ ಮಾಡಿ ಎಂದಿದ್ದಾರೆ. ಆದರೆ ಈ ಬಗ್ಗೆ ಇಸ್ರೇಲ್ ಇದೀಗ ಭಾರಿ ಆಕ್ರೋಶ ಕೂಡ ಹೊರ ಹಾಕಿದ್ದು, ಫ್ರಾನ್ಸ್ ವಿರುದ್ಧ ಕೂಡ ಯುದ್ಧವನ್ನ ಮಾಡುತ್ತಾ? ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜನ ಚರ್ಚೆ ಮಾಡುತ್ತಿದ್ದಾರೆ. ಹಾಗೇ ಜಾಗತಿಕ ಮಟ್ಟದಲ್ಲಿ ಈ ವಿಚಾರವು ಭಾರಿ ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications