ಕಮಲಾ ಹ್ಯಾರಿಸ್ ಬಗ್ಗೆ ನನಗೆ ಸ್ವಲ್ಪವೂ ಗೌರವ ಉಳಿದಿಲ್ಲ: ಕಮಲಾ ವಿರುದ್ಧ ಕಿಚ್ಚು ಹೊರಹಾಕಿದ ಟ್ರಂಪ್!
ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ಕುಸ್ತಿ ಅಖಾಡಕ್ಕೆ ಇಳಿದವರ ರೀತಿ ಫೈಟ್ ಆರಂಭ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಚುನಾವಣೆಗೆ ಅಂತಿಮ ಸಿದ್ಧತೆ ಸಾಗಿದೆ, ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ತಿಕ್ಕಾಟ ಕೂಡ ಬಲು ಜೋರಾಗಿದೆ. ಇದನ್ನ ನೋಡಿ ಅಮೆರಿಕ ಮತದಾರರು ಕೂಡ ಭರ್ಜರಿ ಮನರಂಜನೆ ಪಡೆಯುತ್ತಿದ್ದು, ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
ಡೊನಾಲ್ಡ್ ಟ್ರಂಪ್ ಅಂದ್ರೆ ವಿವಾದಗಳಿಗೆ ಹೆಸರುವಾಸಿ ಎನ್ನಬಹುದು. ಯಾಕಂದ್ರೆ ಟ್ರಂಪ್ ಮಾತು ಶುರು ಮಾಡಿದರೆ ಬರೀ ಅನಾವಶ್ಯಕ ಮಾತುಗಳನ್ನೇ ಆಡುತ್ತಾರೆ ಎಂಬ ಆರೋಪವು ಇದೆ. ಹೀಗಿದ್ದಾಗ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಅವರು, ಭಾರತ ಮೂಲದ ನಂಟು ಇರುವ ಕಮಲಾ ಹ್ಯಾರಿಸ್ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆಯನ್ನ ನೀಡಿದ್ದಾರೆ. ಇದು ಇದೀಗ ಮತ್ತೊಮ್ಮೆ ವಿವಾದ ಸೃಷ್ಟಿ ಮಾಡುವ ಸೂಚನೆ ನೀಡಿದೆ. ಮತ್ತೊಂದು ಕಡೆ ನನಗೆ ಕಮಲಾ ಕಂಡರೆ ವಿಪರೀತ ಕೋಪ ಬರುತ್ತೆ, ಅಂತಿದ್ದಾರೆ ಡೊನಾಲ್ಡ್ ಟ್ರಂಪ್. ಹಾಗಾದರೆ ಈ ಟ್ರಂಪ್ ಹಿಂಗೆಲ್ಲಾ ಕಮಲಾ ಹ್ಯಾರಿಸ್ ಅವರ ವಿರುದ್ಧ ಮಾತನಾಡುತ್ತಿರುವುದು ಏಕೆ? ಮುಂದೆ ಓದಿ.

ಕಮಲಾ ಕಂಡರೆ ಟ್ರಂಪ್‌ಗೆ ಕೋಪ!
ಸರಿಯಾಗಿ 3 ತಿಂಗಳು ಬಾಕಿ ಅಷ್ಟೇ, ಅಷ್ಟರಲ್ಲಿ ಅಮೆರಿಕದಲ್ಲಿ ಹೊಸ ಅಲೆ ಏಳಲಿದೆ. ಯಾಕೆ ಅಂದ್ರೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ ಮೊದಲನೇ ವಾರ ಅಂದರೆ, ನವೆಂಬರ್ 5ನೇ ತಾರೀಕು ನಡೆಯಲಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನೇರ ಹೋರಾಟ ಆರಂಭಿಸಿದ್ದಾರೆ. ಹೀಗಿದ್ದಾಗ ಚುನಾವಣಾ ಪ್ರಚಾರ ನಡೆಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಹಾಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಕಮಲಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ನನಗೆ ತುಂಬಾನೇ ಕೋಪ ಇದೆ ಎಂದಿದ್ದಾರೆ ಡೊನಾಲ್ಡ್ ಟ್ರಂಪ್.
ಕಮಲಾ ಗೆದ್ದರೆ ಕೆಟ್ಟ ಅಧ್ಯಕ್ಷೆ?
ಡೊನಾಲ್ಡ್ ಟ್ರಂಪ್ ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಇದೇ ಕಾರಣಕ್ಕೆ ಅಮೆರಿಕ ಉಪಾಧ್ಯಕ್ಷೆ ಕೂಡ ಆಗಿರುವ ಕಮಲಾ ಹ್ಯಾರಿಸ್ ಅವರು, ಟ್ರಂಪ್ ವಿರುದ್ಧ ವೈಯಕ್ತಿಕವಾಗಿ ಕೂಡ ವಾಗ್ದಾಳಿ ನಡೆಸಿದ್ದಾರೆ ಎಂಬ ಆರೋಪ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್, ಕಮಲಾ ಹ್ಯಾರಿಸ್ ಬುದ್ಧಿಶಕ್ತಿ ಬಗ್ಗೆ ನನಗೆ ಗೌರವವಿಲ್ಲ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಗೆದ್ದು ಆಯ್ಕೆ ಆಗಿದ್ದೇ ನಿಜವಾದರೆ ಅವರು ಕೆಟ್ಟ ಅಧ್ಯಕ್ಷೆ ಆಗುತ್ತಾರೆ ಎಂದಿದ್ದಾರೆ ಡೊನಾಲ್ಡ್ ಟ್ರಂಪ್. ಅಲ್ಲದೆ ತಮ್ಮ ಬಗ್ಗೆ ಕಮಲಾ ಹ್ಯಾರಿಸ್ ವಯಕ್ತಿಕವಾಗಿ ಕೂಡ ದಾಳಿ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಡೊನಾಲ್ಡ್ ಟ್ರಂಪ್.












Click it and Unblock the Notifications